Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ
Team Udayavani, Jan 12, 2025, 7:05 AM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ವಾರದ ಹಿಂದೆ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಇದೀಗ ಹಿಂದೂ ಯುವಕನ ಜತೆ ವಿವಾಹವಾಗಿ ಪತ್ತೆಯಾಗಿದ್ದಾಳೆ. ಹರೀಶ್ ಗೌಡ ಮತ್ತು ಯುವತಿ, ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಹರೀಶ್ ಗೌಡ ಹಾಗೂ ಮೂಡುಬಿದಿರೆಯ ಯುವತಿ ಕಳೆದೊಂದು ವರ್ಷದಿಂದ ಫೇಸ್ಬುಕ್ನಲ್ಲಿ ಪರಿಚಯವಾಗಿ ಪ್ರೀತಿ ಮಾಡಿದ್ದರು. ಈ ನಡುವೆ ವಾರದ ಹಿಂದೆ ಮೂಡುಬಿದಿರೆಯ ಕಂಪ್ಯೂಟರ್ ಕ್ಲಾಸ್ಗೆ ತೆರಳಿದ್ದ ಯುವತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಶುಕ್ರವಾರ ಯುವತಿ ಮತ್ತು ಹರೀಶ್ ಗೌಡ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಅಲ್ಲದೆ ಬೆಳ್ತಂಗಡಿ ವಿವಾಹ ನೊಂದಣಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿದ್ದಾರೆ. ಯುವತಿ ಪತ್ತೆಯಾದ ವಿಚಾರ ಕೇಳಿ ಬೆಳ್ತಂಗಡಿಗೆ ಆಕೆಯ ಪೋಷಕರು ಆಗಮಿಸಿದ್ದರು. ಆದರೆ ಜೋಡಿ ತಾವು ವಿವಾಹವಾಗಿರುವುದಾಗಿ ಹೇಳಿದ್ದರಿಂದ ಆಕೆಯನ್ನು ಬಿಟ್ಟು ಪೋಷಕರು ತೆರಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.