T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Team Udayavani, Jan 11, 2025, 8:47 PM IST
ನವದೆಹಲಿ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಶನಿವಾರ(ಜ11)ಪ್ರಕಟಿಸಲಾಗಿದ್ದು, ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಗಿದೆ.
34 ರ ಹರೆಯದ ಅನುಭವಿ ವೇಗಿ ಪಾದದ ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ 2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ರಾಷ್ಟ್ರೀಯ ತಂಡದ ಭಾಗವಾಗಿರಲಿಲ್ಲ.
ಅಕ್ಸರ್ ಪಟೇಲ್ ಅವರನ್ನು ಉಪನಾಯಕನಾಗಿ ನೇಮಕ ಮಾಡಿರುವುದು ಪ್ರಮುಖ ಚರ್ಚೆಯಾಗಿದೆ. ಜುಲೈ 2024 ರಿಂದ T20 ಆಡದ ರಿಷಬ್ ಪಂತ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಸಂಜು ಸ್ಯಾಮ್ಸನ್ ಕೀಪರ್-ಬ್ಯಾಟರ್ ಆಯ್ಕೆಯಾಗಿ ದ್ದಾರೆ ಮತ್ತು ಬ್ಯಾಟಿಂಗ್ ಕ್ರಮಾಂಕದ ಮೇಲ್ಭಾಗದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ತಂಡ ಇಂತಿದೆ
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿ.ಕೀ)
ಜನವರಿ 22 ರಂದು ಈಡನ್ ಗಾರ್ಡನ್ಸ್, ಕೋಲ್ಕತಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ಫೆಬ್ರವರಿ 2 ರಂದು ಅಹಮದಾಬಾದ್ ನಲ್ಲಿ ಕೊನೆಯ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.