Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ
Team Udayavani, Jan 11, 2025, 9:12 PM IST
ಕುಂದಾಪುರ: ಬೀಜಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ. 5ರ ಬೆಳಗ್ಗೆ ಕಾರಿನಲ್ಲಿ ಬಂದು ಅಲ್ಲಿದ್ದ ಗೋ ಕಳವಿಗೆ ಯತ್ನಿಸಿದ ಪ್ರಕರಣದ ಓರ್ವ ಆರೋಪಿ ಸುರತ್ಕಲ್ ಮೂಲದ ಅಶ್ರಫ್ (40) ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಉಳಿದಿಬ್ಬರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ: ಜ. 5ರ ಬೆಳಗ್ಗೆ ಕಾರಲ್ಲಿ ಬಂದ ಆರೋಪಿಗಳು ಬೀಜಾಡಿಯ ಸರ್ವಿಸ್ ರಸ್ತೆಯಲ್ಲಿ ಜಾನುವಾರನ್ನು ಹಿಡಿದು ಹಗ್ಗದಿಂದ ಕಟ್ಟುತ್ತಿದ್ದಾಗ ಸಾರ್ವಜನಿಕರನ್ನು ನೋಡಿ ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿಟಿವಿ ಲೈವ್ ಮಾನಿಟರಿಂಗ್ ಸಿಬಂದಿಯ ಸಕಾಲಿಕ ಮಾಹಿತಿಯಿಂದ ಆರೋಪಿಗಳ ಗೋ ಕಳವು ತಪ್ಪಿತ್ತು.
ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ನಂಜಪ್ಪ ಎನ್. ಮಾರ್ಗದರ್ಶನದಲ್ಲಿ ಪೊಲೀಸರ ವಿಶೇಷ ಪತ್ತೆ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.