Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
Team Udayavani, Jan 11, 2025, 11:10 PM IST
ಸಾಲವನ್ನು / ಋಣವನ್ನು ಬೇಗ ತೀರಿಸಬೇಕು. ಇಲ್ಲವಾದರೆ ಬಡ್ಡಿ ಏರುತ್ತದೆ. ಇದೊಂದು ಸಾಮಾಜಿಕ ಋಣವಿದ್ದಂತೆ. ಪಡೆದದ್ದನ್ನು ಹಿಂದಕ್ಕೆ ತೀರಿಸಲೇಬೇಕು. ಇದನ್ನು ಬಾಕಿ ಮಾಡಿದರೆ ಮತ್ತೆ ಮತ್ತೆ ಹುಟ್ಟಿ ಬಂದು ಬಡ್ಡಿಯನ್ನು ಹೆಚ್ಚು ಹೆಚ್ಚು ಪಾವತಿಸಬೇಕಾಗುತ್ತದೆ. “ಸಾಲ ಕೊಟ್ಟವ ಭಾರೀ ದುಷ್ಟ, ನಾನೇಕೆ ಸಾಲ ಮರುಪಾವತಿಸಬೇಕು? ನನ್ನ ಕಿಂಚಿತ್ ಹಣದಿಂದ ಬ್ಯಾಂಕ್‌ಗೆàನಾಗಬೇಕಾಗಿದೆ?’ ಎಂದು ಹೇಳುವುದು ಸರಿಯಲ್ಲ. ನಾವು ಪಡೆದಿದ್ದೇವೋ ಇಲ್ಲವೋ? ಪಡೆದದ್ದನ್ನು ತೀರಿಸಬೇಕೆನ್ನುವುದು ಮುಖ್ಯ. ರಾಮನು ರಾವಣನನ್ನು ಕೊಂದ ಬಳಿಕ ಅಂತಿಮ ವಿಧಿಗಳನ್ನು ನೆರವೇರಿಸಲು ವಿಭೀಷಣನಿಗೆ ಆಜ್ಞಾಪಿಸುತ್ತಾನೆ. ಹಾಗಿದ್ದರೆ ಕೊಂದದ್ದೇಕೆ? ಹಾಗಲ್ಲ. ಕೊಲ್ಲುವುದು ಬೇರೆ, ಅಂತಿಮ ಸಂಸ್ಕಾರದ ಕರ್ತವ್ಯ ನಿರ್ವಹಿಸುವುದು ಬೇರೆ. ಹಿರಣ್ಯಕಶಿಪುವನ್ನು ಹೊಡೆಯಲು ಪ್ರಹ್ಲಾದ ಹೋಗಲಿಲ್ಲ. ಆತ ದೇವರನ್ನು ಪ್ರಾರ್ಥಿಸಿದನಷ್ಟೆ. ಶಿಕ್ಷಿಸುವ ಅಧಿಕಾರ ಯಾವತ್ತೂ ಅವರಿಗಿಂತ ಮೇಲಿನವರಿಗೆ ಮಾತ್ರ. ಅಪಘಾತ ನಡೆಸಿದಾಗ ತಪ್ಪಿತಸ್ಥನನ್ನು ಕಂಡರೂ ನಾವೇ ಶಿಕ್ಷಿಸಿದರೆ ಅದು ತಪ್ಪು. ಇದಕ್ಕಾಗಿಯೇ ಇನ್ನೊಂದು ಪ್ರಕರಣ ದಾಖಲಾಗುತ್ತದೆ. ಭೀಷ್ಮ, ದ್ರೋಣಾದಿಗಳು ಯುದ್ಧ ಸರಿಯಲ್ಲ ಎಂದರು. ಯುದ್ಧ ಘೋಷಣೆಯಾದ ಬಳಿಕ ಕೌರವರ ಕಡೆಯಿಂದಲೇ ಯುದ್ಧ ಮಾಡಿದರು. ರಾಜಾಜ್ಞೆಯದು. ಯುದ್ಧ ಸರಿಯಲ್ಲ ಎಂಬುದು ಸೈನಿಕನ ಅಭಿಪ್ರಾಯವಿರಬಹುದು. ಆದರೆ ಯುದ್ಧ ಮಾಡುವುದು ಅವನ ಕರ್ತವ್ಯ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.