BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
ಹನುಮಂತನ ಮೇಲೆ ಕೈ ಮಾಡಿದ್ದಕ್ಕೆ ಭವ್ಯಾಳಿಗೆ ತಕ್ಕ ಶಿಕ್ಷೆ ಕೊಟ್ಟ ಬಿಗ್ ಬಾಸ್
Team Udayavani, Jan 11, 2025, 10:59 PM IST
ಬೆಂಗಳೂರು: ವಾರದ ಪಂಚಾಯ್ತಿನಲ್ಲಿ ಕಿಚ್ಚ ಸುದೀಪ್ ಅವರು ವಾರದ ಕೆಲ ವಿಚಾರಗಳನ್ನು ಮಾತನಾಡಿ, ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಅನುಪಮಾ ಅವರು ತಮ್ಮ ʼಬಾಯ್ಸ್ Vs ಗರ್ಲ್ಸ್ʼ ಕಾರ್ಯಕ್ರಮದ ಪ್ರಚಾರವನ್ನು ಮಾಡಿದ್ದಾರೆ. ಸ್ಪರ್ಧಿಗಳೊಂದಿಗೆ ಒಂದಷ್ಟು ಸಮಯವನ್ನು ಕಳೆದಿದ್ದಾರೆ.
ಆನೆ ತರ ಬಂದ್ರಿ ಯಾರು ನೋಡಿಲ್ಲ ಅದೊಂದು ಮೂಲ ಅಂಥ ತುಂಬಾ ಚೆನ್ನಾಗಿ ಆಡ್ತಾ ಇದ್ದೀರಿ. ಹೆಮ್ಮೆ ಅನ್ನಿಸುತ್ತಿದೆ. ಲೇಟಾಗಿ ಬಂದ್ರೂ, ಲೇಟೆಸ್ಟ್ ಆಗಿ ಬಂದ್ರಿ ಎಂದು ಕಿಚ್ಚ ಸುದೀಪ್ ಫಿನಾಲೆಗೆ ತಲುಪಿದ ಹನುಮಂತು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮ ಕಾರಣವನ್ನು ನೀವು ಕೊಡಿ, ಬೇರೊಬ್ಬರ ಕಾರಣಕ್ಕೆ ನೀವು ತಲೆ ಹಾಕಬೇಡಿ. ನೀವು ಕೊಟ್ಟ ಕಾರಣವೂ ತಪ್ಪಿತ್ತು ಎಂದು ರಜತ್ ಗೆ ಕಿಚ್ಚ ಹೇಳಿದ್ದಾರೆ. ಹನುಮಂತು ಅವರಿಗೆ ಕೊಟ್ಟಿರುವ ಕಾರಣದ ಬಗ್ಗ ಕಿಚ್ಚ ಅವರು ರಜತ್ ಗೆ ಹೇಳಿದ್ದಾರೆ.
ಗೆಲ್ಲಬೇಕು ಅಂಥ ನಾನು ಆಡಲ್ಲ. ಆಟದಲ್ಲಿ ಪ್ರಯತ್ನ ಪಡಬೇಕೆಂದು ಆಡುತ್ತೇನೆ. ಮೊದಲು ಬಂದಾಗ ನಾನು ನನ್ನಿಂದ ಅಗಲ್ಲ ಅಂದುಕೊಂಡಿದ್ದೆ ಎಂದು ಸುದೀಪ್ ಅವರ ಬಳಿ ಹನುಮಂತು ಹೇಳಿದ್ದಾರೆ.
ಹನುಮಂತು ಅವರನ್ನು ಕಿಚ್ಚ ಸ್ಮಾರ್ಟ್ ಹನುಮಂತು ಎಂದು ಆಟದಲ್ಲಿನ ಚತುರ, ಬುದ್ಧಿವಂತಿಕೆ ಹಾಗೂ ವ್ಯಕ್ತಿತ್ವವನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.
ರಜತ್ ಅವರ ಉಸ್ತುವಾರಿ ಕೆಲಸದ ವಿಚಾರದ ಬಗ್ಗೆ ಕಿಚ್ಚ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಜತ್ ಅವರು ನಾನು ಯಾವತ್ತೂ ಒಬ್ಬ ವ್ಯಕ್ತಿಯ ಪರವಾಗಿ ಆಡಿಲ್ಲ. ಫೇವರಿಸಂ ಆಗಿ ಉಸ್ತುವಾರಿ ಮಾಡಿಲ್ಲವೆಂದು ಹೇಳಿದ್ದಾರೆ. ಆದರೆ ರಜತ್ ಅವರ ಉಸ್ತುವಾರಿ ಫೇವರಿಸಂ ಇತ್ತು ಎಂದು ಗೌತಮಿ, ಮಂಜು ಹಾಗೂ ಧನರಾಜ್ ಅವರು ಹೇಳಿದ್ದಾರೆ.
ಉಸ್ತುವಾರಿ ವಿಚಾರದಲ್ಲಾದ ಎಡವಟ್ಟುಗಳ ಬಗ್ಗೆ ವಿಡಿಯೋ ಪ್ರೂಫ್ ಸಮೇತ ಕಿಚ್ಚ ಮಾತನಾಡಿದ್ದಾರೆ. ಈ ರೀತಿ ಮಾಡಿದ್ರೆ ಲೀಡರ್ ಶಿಪ್ ಕಳೆ ಹೋಗುತ್ತದೆ. ನಿರ್ಧಾರದ ಮೇಲೆ ಲೀಡರ್ ಶಿಪ್ ನಿಲ್ಲುತ್ತದೆ ಎಂದು ಸುದೀಪ್ ಕಿವಿ ಮಾತು ಹೇಳಿದ್ದಾರೆ.
ಎರಡು ವಾರದಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನನ್ನ ಕ್ಯಾಪ್ಟನ್ಸಿ ಟೈಮಿನಲ್ಲಾದ ವಿಚಾರದಿಂದ ನಾನು ಓವರ್ ಕಮ್ ಮಾಡೋಕೆ ಪ್ರಯತ್ನ ಪಡುತ್ತಿದ್ದೇನೆ ಎಂದು ಭವ್ಯಾ ಕಿಚ್ಚನ ಮುಂದೆ ಕಣ್ಣೀರಿಟ್ಟು ಹೇಳಿದ್ದಾರೆ. ನಾನು ಏನು ತಪ್ಪು ಮಾಡುತ್ತಿದ್ದೇನೆ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ ಇದನ್ನು ನಾನು ಎಲ್ಲೂ ತೋರಿಸಿಕೊಳ್ಳುತ್ತಿಲ್ಲವೆಂದು ಭವ್ಯಾ ಹೇಳಿದ್ದಾರೆ.
ಕೆಲವೊಂದನ್ನು ನಾವು ಅಲ್ಲೇ ಅಲ್ಲೇ ಸರಿ ಮಾಡಿಕೊಂಡು ಹೋಗುವುದು ಉತ್ತಮ. ಒಂದೋ ಸರಿ ಪಡಿಸಿಕೊಂಡು ಹೋಗಬೇಕು. ಇಲ್ಲದಿದ್ರೆ ಒಪ್ಪಿಕೊಂಡು ಹೊರಗೆ ಬರಬೇಕು. ಕಿಚ್ಚ ಭವ್ಯಾ ಅವರಿಗೆ ಹೇಳಿದ್ದಾರೆ. ಜನಗಳ ಕಣ್ಣಿಗೆ ಕಾಣೋದು ನಿಮ್ಮ ತಪ್ಪು ಮಾತ್ರವೆಂದು ಸುದೀಪ್ ಹೇಳಿದ್ದಾರೆ.
ನಾನು ಯಾವುದನ್ನು ಜಡ್ಜ್‌ಮೆಂಟ್ ಮಾಡೋಕೆ ಇಲ್ಲಿಗೆ ಬಂದಿಲ್ಲ. ಜನ ನೋಡುತ್ತಾರೆ. ನಾನು ಆದದ್ದನ್ನು ಬಂದು ಹೇಳ್ತೀನಿ ಅಷ್ಟೇ ಎಂದು ಸುದೀಪ್ ಹೇಳಿದ್ದಾರೆ.
ನನ್ನ ಕಳಪೆಗೆ ಎಲ್ಲರೂ ಒಂದೇ ಕಾರಣವನ್ನು ಕೊಟ್ಟಿದ್ದಾರೆ. ಭವ್ಯಾ ಅವರನ್ನು ಕತ್ತು ಹಿಡಿದು ತಳ್ಳಿದ್ದಾರೆ ಎಂದು ಹೇಳಿದ್ದಾರೆ. ನಾನು ಕತ್ತು ಹಿಡಿಲಿಲ್ಲ. ನನಗೆ ಜೈಲಿಗೆ ಹೋದದ್ದು ಬೇಜಾರಾಗಿಲ್ಲವೆಂದು ಮಂಜು ಹೇಳಿದ್ದಾರೆ.
ಅವರು ಕಂಬ್ಯಾಕ್ ಮಾಡುತ್ತಿಲ್ಲವೆಂದು ಗೌತಮಿ ಹೇಳಿದ್ದಾರೆ. ತುಂಬಾ ಡೀಪ್ ಆಗಿ ಗುಂಡಿಗೆ ಬಿದ್ದಿದ್ದಾರೆ ಎಂದು ರಜತ್ ಹೇಳಿದ್ದಾರೆ. ಹುಲಿ ಚೆನ್ನಾಗಿ ಬೇಟೆ ಆಡ್ತಾ ಇತ್ತು , ಹಾಲು ಕುಡಿಯೋಕೆ ಹೋಗಿ ಹುಲಿ ಬೆಕ್ಕು ಆಗಿ ಬದಲಾಗಿದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಮಂಜು, ಗೌತಮಿ ಅವರು ಫ್ರೆಂಡ್ ಶಿಪ್ ಬ್ರೇಕ್ ಮಾಡುತ್ತೇನೆ ಎಂದು ಹೇಳಿರುವುದನ್ನು ವಿಡಿಯೋ ಮೂಲಕ ತೋರಿಸಲಾಗಿದೆ.
ಟಾಸ್ಕ್‌ವೊಂದರಲ್ಲಿ ಹನುಮಂತು ಅವರನ್ನು ಭವ್ಯಾ ಅವರು ಹೊಡೆದ ವಿಡಿಯೋವನ್ನು ಪ್ರಸಾರ ಮಾಡಿ, ಇಷ್ಟಕ್ಕೆ ನಿಮ್ಮನ್ನು ಮನೆಗೆ ಕಳುಹಿಸಬೇಕಿತ್ತು. ಆದರೆ ನಿಮಗೆ ಮಿಸ್ ಆಯಿತು. ಹೊಡೆದ ಮೇಲೆ ಗಿಲ್ಟ್ ಇದ್ರೆ ಎಷ್ಟು ಬಿಟ್ರೆ ಎಷ್ಟು ಎಂದು ಕಿಚ್ಚ ಹೇಳಿದ್ದಾರೆ.
ಹನುಮಂತನ ಮೇಲೆ ಕೈ ಮಾಡಿದ್ದಕ್ಕೆ ಬಿಗ್ ಬಾಸ್ ಬಳಿ ಭವ್ಯಾ ಕ್ಷಮೆ ಕೇಳಿದ್ದಾರೆ. ತಪ್ಪಿಗೆ ಶಿಕ್ಷೆಯಾಗಿ ಭವ್ಯಾ ಜೈಲು ಸೇರಿದ್ದಾರೆ.
ನಿಮ್ಮ ಕುಟುಂಬವನ್ನು ನಂಬಿ, ಇನ್ನು ಬೇರೆ ಕುಟುಂಬವನ್ನು ನಂಬಬೇಡಿ. ಸೋಲು – ಗೆಲುವು ಅಷ್ಟೇ ಬಿಗ್ ಬಾಸ್ ಎಂದು ಸುದೀಪ್. ಕುಗ್ಗೋದು, ಕುಗ್ಗಿಸೋದು ಯಾವುದನ್ನು ನಂಬಬೇಡಿ ಎಂದು ಹೇಳಿದ್ದಾರೆ. ಬಿಗ್ ಬಾಸ್ ಗೆಲ್ಲೋದು ಸುಲಭ. ಇಲ್ಲಿ ಆ ಏರಿಯಾ, ಗ್ರೇ ಏರಿಯಾ ಎಲ್ಲ ಇಲ್ಲ. ಈ ಏರಿಯಾ ಎಲ್ಲ ನನ್ನದು ಅಂದುಕೊಂಡವನು ಯಾವ ತಲೆ ನೋವು ಇಲ್ಲದೆ ಗೆಲ್ಲುತ್ತಾನೆ ಎಂದು ಕಿಚ್ಚ ಹೇಳಿದ್ದಾರೆ.
ಹನುಮಂತು ಅವರು ಮುಖಕ್ಕೆ ಯಾವ ಬಣ್ಣವನ್ನು ಹಚ್ಚಿಕೊಂಡು ಕೂತಿಲ್ಲ. ವೀಕೆಂಡ್ ಬಂದ್ರೆ ಯಾವ ಸ್ಟೈಲ್ ಮಾಡಿಕೊಳ್ಳದೆ ಇರುತ್ತಾರೆ. ಟಿಕೆಟ್ ಟು ಫಿನಾಲೆಗೆ ಬಂದು ನಿಂತಿದ್ದಾರೆ ಎಂದು ಹೇಳಿದ್ದಾರೆ.
ಈ ವಾರ ನಾಮಿನೇಟ್ ಆದವರಲ್ಲಿ ಮೊದಲನೇಯವರಾಗಿ ಭವ್ಯಾ ಅವರು ಸೇಫ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.