Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
ಶ್ರೀಶಾರದಾಂಬೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
Team Udayavani, Jan 12, 2025, 1:25 AM IST
ಶೃಂಗೇರಿ: ಶೃಂಗೇರಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾವಿರಾರು ಜನರು ಒಂದೆಡೆ ಸೇರಿ ಏಕಕಂಠದಲ್ಲಿ ತ್ರಿವೇಣಿ ಸ್ತೋತ್ರ ಪಠಿಸುವ ಮೂಲಕ ದಾಖಲೆ ಬರೆಯಲಾಯಿತು.
ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ “ಸುವರ್ಣ ಭಾರತೀ’ ನಿಮಿತ್ತ ಶನಿವಾರ ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ವಿವಿಧ ಪೀಠಾಧಿಪತಿಗಳ ಜತೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಶಾರದಾಂಬೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಶ್ರೀ ಭಾರತೀತೀರ್ಥ ಸ್ವಾಮೀಜಿಯವರು ಶ್ರೀ ಶಂಕರಾಚಾರ್ಯ ವಿರಚಿತ ಶಿವ ಪಂಚಾಕ್ಷರಿ ಸ್ತೋತ್ರವನ್ನು ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಕಲ್ಯಾಣವೃಷ್ಟಿ ಸ್ತವ ಮತ್ತು ಶ್ರೀ ಲಕ್ಷ್ಮೀಕರಾವಲಂಬ ಸ್ತೋತ್ರವನ್ನು ಭಕ್ತರಿಗೆ ಹೇಳಿಕೊಡುವ ಮೂಲಕ ಸ್ತೋತ್ರ ಪಾರಾಯಣಕ್ಕೆ ಚಾಲನೆ ನೀಡಿದರು.
ಬೃಹತ್ ವೇದಿಕೆಯಲ್ಲಿ ಉಭಯ ಜಗದ್ಗುರುಗಳಿಗೆ ಪ್ರತ್ಯೇಕ ಸ್ವರ್ಣ ಸಿಂಹಾಸನ ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪೀಠಾಧಿಪತಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜಕೀಯ ನಾಯಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.
ಯಡತೊರೆ ಮಠದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿ, ಮನ್ನೆಲೆಮಾವು ಮಠದ ಶ್ರೀ ಮಾಧವನಂದ ಭಾರತೀ ಸ್ವಾಮೀಜಿ, ಅವನಿ ಮಠದ ಶ್ರೀ ಅದ್ವೈತಾನಂದ ಭಾರತೀ ಸ್ವಾಮೀಜಿ, ತುಮಕೂರು ರಾಮಕೃಷ್ಣಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ, ಕರ್ಕಿಯ ಶ್ರೀ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ತುಮಕೂರಿನ ಶ್ರೀ ಪರಮಾನಂದ ಸ್ವಾಮೀಜಿ, ಹಳದೀಪುರದ ಶ್ರೀ ವಾಮನಶ್ರಮ ಸ್ವಾಮೀಜಿ, ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಭಾಗವಹಿಸಿದ್ದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಡಿ.ಎನ್. ಜೀವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಪಾಲ್ಗೊಂಡಿದ್ದರು.
ಮಠಗಳನ್ನು ಬೆಂಬಲಿಸಿ: ಡಿಕೆಶಿ
ಶೃಂಗೇರಿ: ಸಂಸ್ಕೃತಿ ಮತ್ತು ಸಂಸ್ಕಾರ ದೇಶದ ಆಸ್ತಿ. ಇದನ್ನು ಕಾಪಾಡಿಕೊಂಡು ಹೋಗುವ ಮಹತ್ವದ ಕಾರ್ಯ ಮಠಗಳಿಂದ ಆಗಬೇಕು. ಜನರೂ ಮಠಗಳಿಗೆ ನೆರವಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮ ಹಿರಿಯರು “ಮನೆ ಹುಷಾರು, ಮಠ ಹುಷಾರು’ ಎಂದು ಹೇಳಿದ್ದಾರೆ. ಹೀಗಾಗಿ ನಾವೂ ಕೂಡ ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನೂ ಕಾಪಾಡಿಕೊಳ್ಳಬೇಕು. ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ಯಾರ ಅಣತಿಯಂತೆ ಇರು ವುದೂ ಬೇಡ. ನಮ್ಮ ಜೀವನವನ್ನೇ ನಾವು ನಂಬೋಣ. ನಮ್ಮ ಧರ್ಮ-ದೇವರಲ್ಲಿ ವಿಶ್ವಾಸವಿಟ್ಟು ಬದುಕಿ ದಾಗ ಒಳ್ಳೆಯದಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
MUST WATCH
ಹೊಸ ಸೇರ್ಪಡೆ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
Milk Price: ರೈತರಿಂದ ಖರೀದಿಸುವ ಹಾಲಿನ ದರ ಜೂನ್‌ಗೆ ಏರಿಕೆ: ಪಶುಸಂಗೋಪನೆ ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.