Supreme Court ಆದೇಶ; 1 ಕಣ್ಣು ಕಳೆದುಕೊಂಡ ವ್ಯಕ್ತಿಗೆ 100% ಪರಿಹಾರ
Team Udayavani, Jan 12, 2025, 6:40 AM IST
ನವದೆಹಲಿ: ಅಪಘಾತದಲ್ಲಿ ಕಣ್ಣು ಕಳೆದುಕೊಂಡ ವಜ್ರ ಕತ್ತರಿಸುವ ವ್ಯಕ್ತಿಗೆ ಶೇ.100ರಷ್ಟು ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ. ವಜ್ರ ಕತ್ತರಿಸುವ ವ್ಯಕ್ತಿ 1 ಕಣ್ಣು ಕಳೆದು ಕೊಂಡರೂ ತನ್ನ ಕೆಲಸವನ್ನು ಮೊದಲಿನಂತೆ ಮಾಡ ಲಾರ, ಹೀಗಾಗಿ ಆತನಿಗೆ ಶೇ.100ರಷ್ಟು ಅಂಗವೈಕಲ್ಯ ಉಂಟಾಗಿದೆ ಎಂದು ಪರಿಗಣಿಸಿ ಪರಿಹಾರ ಕೊಡ ಬೇಕು ಎಂದು ಸೂಚಿಸಿದೆ. ಈ ಮೊದಲು ಸ್ಥಳೀಯ ನ್ಯಾಯಾಲಯ ಆತನ ಅಂಗ ವೈಕಲ್ಯವನ್ನು ಶೇ.49 ರಷ್ಟು ಎಂದು ಗುರುತಿಸಿ ಪರಿಹಾರ ಘೋಷಿಸಿತ್ತು. ಇದಾದ ಬಳಿಕ ಹೈಕೋರ್ಟ್ ಶೇ.65ರಷ್ಟು ಅಂಗವೈಕಲ್ಯಕ್ಕೆ ಏರಿಕೆ ಮಾಡಿತ್ತು. ಆದರೆ ಅಪಘಾತದ ಬಳಿಕ ಉದ್ಯೋಗ ಕಳೆದುಕೊಂಡಿರುವುದಾಗಿ ಅಳಲು ತೋಡಿಕೊಂಡ ವಜ್ರ ಕತ್ತರಿಸುವ ವ್ಯಕ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
Noida: ಜೀವ ತೆಗೆದ ಚೋಲೆ; ಸ್ಟವ್ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
AAP ಅಬಕಾರಿ ನೀತಿಯಿಂದ ದಿಲ್ಲಿಗೆ 2026 ಕೋಟಿ ನಷ್ಟ: ಸಿಎಜಿ
ISRO;ಬಾಹ್ಯಾಕಾಶ ಡಾಕಿಂಗ್: 2 ಉಪಗ್ರಹದ ನಡುವಿನ ಅಂತರ 230 ಮೀ.ಗಿಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.