CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

ಜಾತಿ ಗಣತಿ ವಿಚಾರ ಕುರಿತು ಸಮಾಲೋಚನೆ ನಡೆಸುವ ಉದ್ದೇಶದಿಂದ ಸಭೆ

Team Udayavani, Jan 12, 2025, 7:40 AM IST

Congress-Symbol

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲೀಗ ಔತಣ ಕೂಟ ಆಯೋಜನೆಯ ಅಸಮಾಧಾನ ಒಂದೆಡೆಯಾದರೆ, ಅದನ್ನು ಮುಂದೂಡಿದ್ದಕ್ಕೆ ಅತೃಪ್ತಿಯೂ ಮತ್ತೊಂದೆಡೆ ಮನೆ ಮಾಡಿದೆ. ಈ ಎರಡು ಭಿನ್ನರಾಗಗಳ ನಡುವೆ ಸೋಮವಾರ ಪಕ್ಷದ ಶಾಸಕಾಂಗ ಸಭೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.

ಅತ್ತ ಸಚಿವರ ಔತಣ ಕೂಟಕ್ಕೆ ತಡೆ ಬಿದ್ದಿರುವುದು ಕೆಲವು ಸಚಿವರನ್ನು ಕೆರಳಿಸಿದೆ. ಇತ್ತ ಹಲವು ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯು ಜ. 16ರ ಸಂಪುಟ ಸಭೆ ಮುಂದೆ ಬರಲಿದೆ ಎಂಬ ಗುಲ್ಲೆದ್ದಿರುವುದು ಮತ್ತೂಂದಿಷ್ಟು ಸಚಿವರ ಕಣ್ಣು ಕೆಂಪಾಗಿಸಿದೆ. ಇವೆಲ್ಲರ ಮಧ್ಯೆ ಸಂಪುಟ ಸಭೆ ಸೇರುತ್ತಿರುವುದು ಹಲವು ಆಯಾಮಗಳಿಂದ ಚರ್ಚೆಗೆ ಕಾರಣವಾಗುತ್ತಿದೆ.

ಉಪಚುನಾವಣೆ ಗೆಲುವಿನ ಬಳಿಕ ಸಂಪುಟ ವಿಸ್ತರಣೆ, ಪುನಾರಚನೆ ಚರ್ಚೆಗಳು ಹುಟ್ಟಿಕೊಂಡಿದ್ದವಲ್ಲದೆ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಧ್ವನಿಗಳು ಎದ್ದಿದ್ದವು. ಈ ಕುರಿತು ಬಹಿರಂಗ ಹೇಳಿಕೆಗಳಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮೂಲಕ ತಡೆಯೊಡ್ಡುವಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಫ‌ಲರಾಗಿದ್ದರು.

ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೆರೆಸಲೆಂದೇ ಅಹಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಬಿಂಬಿತವಾಗಿದ್ದ ಸಮಾವೇಶವನ್ನು ಪಕ್ಷದ ನೆರಳಿನಡಿಯಲ್ಲೇ ನಡೆಸುವಲ್ಲಿಯೂ ಡಿ.ಕೆ. ಶಿವಕುಮಾರ್‌ ಫ‌ಲಪ್ರದರಾಗಿದ್ದರು. ಬಳಿಕ ಶಿವಕುಮಾರ್‌ ವಿದೇಶ ಪ್ರವಾಸದಲ್ಲಿ ಇರುವಾಗಲೇ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದ್ದು, ಅದಕ್ಕೆ ಖುದ್ದು ಸಿದ್ದರಾಮಯ್ಯ ತೆರಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಸಚಿವ ಡಾ| ಜಿ.ಪರಮೇಶ್ವರ್‌ ಔತಣ ಕೂಟ ಆಯೋಜಿಸಿದ್ದಕ್ಕೆ ಶಿವಕುಮಾರ್‌ ತಡೆ ಹಾಕಿಸಿದ್ದಾರೆ. ವಿದೇಶ ಪ್ರವಾಸದಿಂದ ನೇರ ದಿಲ್ಲಿಗೆ ತೆರಳಿದ್ದ ಡಿಕೆಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿಗಳ ಮೂಲಕ ಔತಣ ಕೂಟ ಮುಂದೂಡುವ ಸಂದೇಶ ರವಾನಿಸಿದ್ದರು.

ಜಾತಿ ಗಣತಿ ವರದಿ ಸ್ಫೋಟ?
ಔತಣ ಕೂಟ ಸಭೆ ರದ್ದಾಗಿದ್ದು ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಷ್ಟರಲ್ಲಿ ಜಾತಿ ಗಣತಿ ವಿಚಾರ ಪ್ರಸ್ತಾವವಾಗಿದ್ದು, ಈ ಕುರಿತು ಸಮಾಲೋಚನೆ ನಡೆಸುವ ಉದ್ದೇಶದಿಂದ ಸಭೆ ಸೇರುವುದಾಗಿ ಕೆಲ ಸಚಿವರು ಹೇಳಿದ್ದರು. ಅದರಲ್ಲೂ ಕೆ.ಎನ್‌. ರಾಜಣ್ಣ ಅವರಂತೂ ನಾವೇನಾದರೂ ಡಿಕೆಶಿ ಅವರ ಆಸ್ತಿ ಕೇಳಿದ್ದೇವಾ ಎಂದು ಪ್ರಶ್ನಿಸಿದ್ದರು. ಇವೆಲ್ಲವೂ ಹಿರಿಯ ಸಚಿವರ ನಡುವೆ ಶೀತಲ ಸಮರ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿತ್ತು.

ಈ ಬೆಳವಣಿಗೆಗಳಿಂದ ಕೆಲವು ಶಾಸಕರೂ ಅಸಮಾಧಾನಗೊಂಡಿದ್ದು, ಶಾಸಕಾಂಗ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ವರದಿ ಜಾರಿ ಮಾಡದಂತೆ ಡಿಸಿಎಂ ಶಿವಕುಮಾರ್‌ ಅವರ ಮೇಲೆ ಒಕ್ಕಲಿಗ ಸಮುದಾಯದ ಒತ್ತಡವೂ ಇದೆ. ಈ ವಿಚಾರದಲ್ಲಿ ಶಾಸಕಾಂಗ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಸಂಪುಟ ಸಭೆಯಲ್ಲಿ ಇದಕ್ಕೆ ಹೇಗೆ ತಡೆಯೊಡ್ಡ ಬಹುದು ಎನ್ನುವ ತಂತ್ರವನ್ನು ಡಿ.ಕೆ. ಶಿವಕುಮಾರ್‌ ಹೆಣೆಯುವ ಅಂದಾಜಿಸಿದೆ.

ಟಾಪ್ ನ್ಯೂಸ್

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

6

Ajekar: ಎಷ್ಟು ದಿನ ಟವರ್‌ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್‌ ಕೊಡಿ ಸ್ವಾಮಿ!

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

5

Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.