MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
ಕೋರ್ಟ್‌ನಲ್ಲಿರುವ ಭೂಮಿಗೆ 50:50 ಪರಿಹಾರ: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ನಿವೇಶನ ಪಡೆದವರಿಂದ ಖರೀದಿ: ಜಿಟಿಡಿ
Team Udayavani, Jan 12, 2025, 7:45 AM IST
ಮೈಸೂರು: ಮುಡಾ 50:50 ಅನುಪಾತದ ನಿವೇಶನ ಅಕ್ರಮ ಸಂಬಂಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದಾರೆ.
ಕೋರ್ಟ್‌ನಲ್ಲಿ ವ್ಯಾಜ್ಯವಿರುವ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ.ದೇವೇಗೌಡರು ತಮ್ಮ ಪ್ರಭಾವ ಬಳಸಿ ಚೌಡಯ್ಯ ಎಂಬುವವರ ಹೆಸರಿಗೆ 44,736 ಚದರ ಅಡಿಯ 6 ನಿವೇಶನ ಕೊಡಿಸಿದ್ದಾರೆ. ಇದರಲ್ಲಿ ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು, ಅದನ್ನು ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿವೇಶನ ಹಂಚಿಕೆ ವಿಷಯದಲ್ಲಿ ಜಿಟಿಡಿ ಅವರ ಪ್ರಭಾವ ಇರುವುದು ದಟ್ಟವಾಗಿದೆ. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ಇದೆ. ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ ತಮ್ಮ ಕುಟುಂಬಕ್ಕೆ ನಿವೇಶನ ಬರೆಯಿಸಿಕೊಂಡ ಅನುಮಾನವಿದೆ. ಈ ಭೂಮಿ ಮುಡಾ ವ್ಯಾಪ್ತಿಗೆ ಬಾರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಸಮಗ್ರ ತನಿಖೆ ಅವಶ್ಯ ಎಂದಿದ್ದಾರೆ.
ಸೈಟ್ ಪಡೆದವರಿಂದ ನಿವೇಶನ ಖರೀದಿಸಿದ ಮಗಳು-ಅಳಿಯ: ಜಿಟಿಡಿ
ಮೈಸೂರು: 50:50 ಅನುಪಾತದಲ್ಲಿ ಮುಡಾದಿಂದ ನಿವೇಶನ ಪಡೆದವರಿಂದ ನನ್ನ ಮಗಳು-ಅಳಿಯ ಅಧಿಕೃತವಾಗಿ ಸರ್ಕಾರಿ ಹಣವನ್ನು ಕೊಟ್ಟು ನಿವೇಶನ ಖರೀದಿಸಿದ್ದಾರೆ. ಈ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದು(ಶನಿವಾರ) ಬೆಳಗ್ಗೆ ಮಗಳಿಂದ ತಿಳಿದುಕೊಂಡೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಿವೇಶನ ಪಡೆದು ಮಾರಾಟ ಮಾಡಿದವರಿಗೆ ಮಾರಾಟ ಮಾಡಲು ಹಕ್ಕಿದೆ. ನನ್ನ ಮಗಳು ಯಾರಿಂದ ನಿವೇಶನ ಪಡೆದಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಲೋಕಾಯುಕ್ತರಿಗೆ ಕೊಟ್ಟಿದ್ದರೆ ಸಂತೋಷ. ತಪ್ಪು ಮಾಡಿದ್ದರೆ ತನಿಖೆಯಾಗಲಿ. ಸ್ನೇಹಮಯಿ ಕೃಷ್ಣ ನಮ್ಮ ಹುಡುಗನೇ ಒಳ್ಳೆ ಕೆಲಸ ಮಾಡುತ್ತಿದ್ದಾನೆ. ತಪ್ಪಿತಸ್ಥರ ವಿರುದ್ಧ ಹೋರಾಟ ಮಾಡುತ್ತಿದ್ದಾನೆ. ಯಶಸ್ಸು ಸಿಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.