ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಬಿಜೆಪಿ ಕಾರ್ಯಕರ್ತರ ಮೇಲೂ ಸುಳ್ಳು ಪೊಲೀಸ್ ಕೇಸು, ಬೆದರಿಕೆ ಒಡ್ಡಿ ದಬ್ಬಾಳಿಕೆ: ಬಿಜೆಪಿ ರಾಜ್ಯಾಧ್ಯಕ್ಷ
Team Udayavani, Jan 12, 2025, 4:07 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ, ದರ್ಪ ಹೆಚ್ಚಾಗಿದೆ. ಪ್ರತಿಪಕ್ಷಗಳು ಸೇರಿದಂತೆ ಸಾಮಾನ್ಯ ಜನರು ಕೂಡ ಸರ್ಕಾರವನ್ನು ಟೀಕಿಸಬಾರದೆಂಬ ಧೋರಣೆ ಇವರದು. ಇಂತಹ ದಬ್ಟಾಳಿಕೆಯ ವಿರುದ್ಧ ಧ್ವನಿ ಎತ್ತುವ ಹಿಂದೂ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡುವುದು ಕಾನೂನು ಪ್ರಕೋಷ್ಠದ ಕರ್ತವ್ಯ. ಮುಂದಾಳತ್ವ ವಹಿಸಿ ಧೈರ್ಯ, ಸ್ಥೈರ್ಯ ತುಂಬಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ಈ ಸರ್ಕಾರ ವಿಪಕ್ಷದವರನ್ನು ಬೆದರಿಸುತ್ತಿದ್ದು, ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲು ಸಾಧ್ಯವೇ ಎಂದು ಕೇಳಿದರು. ಹಿಂದೂ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಿದ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸು, ಬೆದರಿಕೆ ಒಡ್ಡಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇದು ಆಡಳಿತ ಪಕ್ಷದ ಘನಂದಾರಿ ಕೆಲಸ. ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ರಕ್ಷಣೆ ಕಾನೂನು ಪ್ರಕೋಷ್ಠದ ಆದ್ಯ ಕರ್ತವ್ಯ. ಹಾಗಾಗಿ ಈ ಸಭೆ ನಡೆಸಲಾಗುತ್ತಿದೆ ಎಂದರು.
ಸಮರ್ಪಣಾ ಭಾವದಿಂದ ಶ್ರಮಿಸುತ್ತಿರುವ ಕಾನೂನು ಪ್ರಕೋಷ್ಠವು ಪಕ್ಷದ ಮುಂಬರುವ ಎಲ್ಲ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡು ವಿರೋಧ ಪಕ್ಷವಾಗಿ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಎದುರಾಗಬಹುದಾದ ಸುಳ್ಳು ಮೊಕದ್ದಮೆಗಳು, ಹಿಂದೂ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಹೇರುತ್ತಿರುವ ದ್ವೇಷಪೂರಿತ ಪ್ರಕರಣಗಳೂ ಸೇರಿದಂತೆ ಕಾನೂನು ಸಮಸ್ಯೆಗಳಿಗೆ ಮುಂದಾಳತ್ವ ವಹಿಸಿ ಧೈರ್ಯ, ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ಸಹಸಂಯೋಜಕ ಎನ್.ವಿ. ಫಣೀಶ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ಸಹ-ಸಂಚಾಲಕ ಲಕ್ಷ್ಮಣ್ ಸಿ.ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ವಿಶ್ವನಾಥ್ ಮತ್ತು ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಹ್ವಾನಿತ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
The Rise Of Ashoka: ಅಶೋಕನ ರಕ್ತಚರಿತೆ
Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ
Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.