Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Team Udayavani, Jan 12, 2025, 7:14 AM IST
ಮೇಷ: ದೇಹ, ಮನಸ್ಸು ಎರಡಕ್ಕೂ ನೆಮ್ಮದಿ. ಬಂಧುಗಳಿಂದ ಅಪರೂಪದ ಭೇಟಿ. ಗೆಳೆಯನ ನೂತನ ಗೃಹ ಪ್ರವೇಶ. ಪಿತ್ರಾರ್ಜಿತ ಆಸ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ.
ವೃಷಭ: ಹೊಸ ಕಾರ್ಯಗಳಿಗೆ ಪೂರ್ವ ಸಿದ್ಧತೆ. ಉದ್ಯೋಗ ಕ್ಷೇತ್ರದ ಗೆಳೆಯ ರೊಂದಿಗೆ ಭೇಟಿ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಯ ಕುರಿತು ಸಮಾಲೋಚನೆ. ಗೃಹೋತ್ಪನ್ನ ಖಾದ್ಯ ಪದಾರ್ಥಗಳಿಗೆ ಅಧಿಕ ಬೇಡಿಕೆ.
ಮಿಥುನ: ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ವಸ್ತ್ರ, ಸಿದ್ಧ ಉಡುಪು, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ತಾಯಿಯ ಕಡೆಯ ಬಂಧುಗಳಿಂದ ಶುಭ ಸಮಾಚಾರ. ಸಂಗೀತ ಶ್ರವಣ, ಭಜನೆ, ಸತ್ಸಂಗಗಳಲ್ಲಿ ಕಾಲಯಾಪನೆ.
ಕರ್ಕಾಟಕ: ವ್ಯವಹಾರದ ಅಭಿವೃದ್ಧಿಯ ಕುರಿತು ಸವಿವರ ವಿಮರ್ಶೆ. ಕಿರಿಯ ಬಂಧುವಿನ ವಿದ್ಯಾರ್ಜನೆಗೆ ಸಹಾಯ. ಸಹೋದ್ಯೋಗಿಗಳಿಂದ ಸೌಹಾರ್ದ ಭೇಟಿ. ಗೃಹೋತ್ಪನ್ನಗಳಿಗೆ ವ್ಯಾಪಕ ಬೇಡಿಕೆ.ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.
ಸಿಂಹ: ದೂರದ ಊರಿನಿಂದ ಬಂಧುಗಳ ಆಗಮನ. ಅವಿವಾಹಿತ ಹುಡುಗರಿಂದ ಸೂಕ್ತ ಬಾಳಸಂಗಾತಿಗಾಗಿ ಶೋಧ. ಉದ್ಯಮಿ ಬಂಧುಗಳೊಡನೆ ಸಹಚಿಂತನೆ. ಪೂರ್ಣಗೊಳ್ಳದ ಕಾಮಗಾರಿಗಳ ಸಮಸ್ಯೆ.
ಕನ್ಯಾ: ಕ್ರಿಯಾಶೀಲರಿಗೆ ಕೆಲಸದ ಬದಲಾವಣೆಯಲ್ಲೇ ವಿಶ್ರಾಂತಿಯ ಅನುಭವ. ಸ್ಥಳೀಯ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಮುಖರೊಂದಿಗೆ ಸಮಾಲೋಚನೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ. ರಕ್ತದಾನ ಮಾಡುವ ಅವಕಾಶ.
ತುಲಾ: ಅಸಾಧ್ಯವೆಂದು ಎಣಿಸಿದ ಕಾರ್ಯ ಗಳು ಸುಲಭ ಸಾಧ್ಯವಾಗುತ್ತವೆ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಕೃಷಿ ಕ್ಷೇತ್ರಕ್ಕೆ ಭೇಟಿಯಿತ್ತು ಕಾರ್ಯ ವೀಕ್ಷಣೆ. ಹರಿಕಥಾ ಶ್ರವಣದಲ್ಲಿ ಪಾಲುಗೊಳ್ಳುವ ಅವಕಾಶ.
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಧನಾಗಮ. ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳ ಸಾಧನೆಗೆ ಸರ್ವತ್ರ ಪ್ರಶಂಸೆ. ಕೃಷಿಕ್ಷೇತ್ರಕ್ಕೆ ಪ್ರವೇಶದಿಂದ ಕಿರಿಯರಿಗೆ ಹೊಸ ಬದುಕಿನ ಆಶೆ. ಪಾಲುದಾರಿಕೆಯಲ್ಲಿ ಹೈನೋದ್ಯಮ ಆರಂಭ.
ಧನು: ತಾತ್ಕಾಲಿಕ ಹಿನ್ನಡೆಗಳಿಂದ ಬಿಡುಗಡೆ. ಸಹೋದ್ಯೋಗಿ ಮಿತ್ರರೊಂದಿಗೆ ಪ್ರಾಕೃತಿಕ ತಾಣಕ್ಕೆ ಭೇಟಿ. ಸಮಾಜದ ಸಮಗ್ರ ಏಳಿಗೆ. ಪರಿಸರ ಸ್ವತ್ಛತೆಯ ಕಾರ್ಯಗಳಲ್ಲಿ ಪಾಲುಗೊಳ್ಳುವಿಕೆ. ದೇವತಾ ನುಗ್ರಹ ಉತ್ತಮ.
ಮಕರ: ಸಾಮೂಹಿಕ ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಸಂದರ್ಭ. ಗುರುಸಮಾನ ವ್ಯಕ್ತಿಯಿಂದ ಮನೆಗೆ ಭೇಟಿ. ಧಾರ್ಮಿಕ ಗ್ರಂಥ ವಾಚನ.ಆಪ್ತ ಸಲಹೆಯಿಂದ ವ್ಯಕ್ತಿತ್ವ ವಿಕಾಸ ಕಾರ್ಯದಲ್ಲಿ ಮುನ್ನಡೆ. ತಂದೆಯ ಕಡೆಯ ಬಂಧುಗಳ ಮನೆಯಲ್ಲಿ ಶುಭಕಾರ್ಯ.
ಕುಂಭ: ವೈವಿಧ್ಯಮಯ ಕಾರ್ಯಗಳಿಂದ ಮನೋಲ್ಲಾಸ. ವಿರಾಮದ ದಿನದಲ್ಲೂ ಹೊಸ ಕಾರ್ಯಗಳನ್ನು ನಿರ್ವಹಿಸಲು ಆಹ್ವಾನ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ. ಗೃಹಿಣಿಯರ ಸ್ಯೋದ್ಯೋಗ ಯೋಜನೆಗಳ ಜಯಭೇರಿ.
ಮೀನ: ಶನಿ ಪ್ರಭಾವದಿಂದ ಕಾರ್ಯ ವಿಳಂಬ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ವಿಶೇಷ ಯತ್ನ. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ. ದಾಂಪತ್ಯ ಜೀವನ ಸುಖಮಯ, ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.