Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಯುವಕನನ್ನು ಪ್ರೀತಿಸುತ್ತಿದ್ದ ಗೃಹಿಣಿ; ವಿವಾಹಿತೆಯನ್ನು ಮದುವೆ ಆಗಲು ಸಾಧ್ಯವಾಗದ್ದಕ್ಕೆ ಆತ್ಮಹತ್ಯೆ
Team Udayavani, Jan 12, 2025, 8:31 AM IST
ಯುವಕನ ಮೃತದೇಹ ನೋಡಿ ಮನೆಗೆ ಬಂದು ನೇಣಿಗೆ ಕೊರಳೊಡ್ಡಿದ ಪ್ರೇಯಸಿ ; ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು: ಪ್ರಿಯಕರನ ಸಾವಿನ ಸುದ್ದಿ ತಿಳಿದು ವಿವಾಹಿತ ಪ್ರೇಯಸಿಯೂ ನೇಣಿಗೆ ಶರಣಾದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಥಣಿಸಂದ್ರದ ಜಾನ್ಸನ್ (25) ಹಾಗೂ ದಿಲ್‌ಶಾದ್ (23) ಆತ್ಮಹತ್ಯೆ ಮಾಡಿಕೊಂಡವರು.
ಆಂಧ್ರಪ್ರದೇಶದ ಹಿಂದೂಪುರ ಮೂಲದ ದಿಲ್ ಶಾದ್ 6 ವರ್ಷದ ಹಿಂದೆ ವಿಜಯಪುರ ಮೂಲದ ಕೃಷ್ಣ ಎಂಬವರನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ ಕೃಷ್ಣ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರೆ, ಈಕೆ ಮನೆಯಲ್ಲಿದ್ದಳು.
ಈ ನಡುವೆ ನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಜಾನ್ಸನ್‌ಗೆ ಕೆಲ ತಿಂಗಳ ಹಿಂದೆ ದಿಲ್‌ಶಾದ್‌ಳ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಎಷ್ಟೇ ಆದರೂ ವಿವಾಹವಾದ ಮಹಿಳೆಯನ್ನು ಮತ್ತೆ ತಾನು ಮದುವೆಯಾಗಲು ಆಗುವುದಿಲ್ಲ. ಸಮಾಜ ನಮ್ಮ ಪ್ರೀತಿ ಒಪ್ಪುವುದಿಲ್ಲ ಎಂದು ಜಾನ್ಸನ್ ಮನನೊಂದಿದ್ದ. ಶುಕ್ರವಾರ ಸಂಜೆ ಥಣಿಸಂದ್ರದಲ್ಲಿರುವ ತನ್ನ ಮನೆಯ ಕೊಠಡಿಗೆ ತೆರಳಿದ್ದ ಜಾನ್ ರಾತ್ರಿಯಾದರೂ ಹೊರ ಬಂದಿರಲಿಲ್ಲ. ಇತ್ತ ಕುಟುಂಬಸ್ಥರು ಆತ ನಿದ್ದೆಯಲ್ಲಿರಬಹುದು ಅಂತಾ ಸುಮ್ಮನಾಗಿದ್ದರು. ಶನಿವಾರ ಬೆಳಗ್ಗೆಯೂ ಕೊಠಡಿಯಿಂದ ಬಾರದೆ ಇದ್ದಾಗ ಅನುಮಾನ ಬಂದು ಹತ್ತಿರದಲ್ಲೇ ಇದ್ದ ಅಳಿಯ ಹಾಗೂ ಜಾನ್ಸನ್ ಸ್ನೇಹಿತರನ್ನು ಕರೆದು ರೂಮಿನ ಬಾಗಿಲು ಒಡೆದು ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಣ್ಣೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೇಯಸಿಯೂ ಆತ್ಮಹತ್ಯೆ: ಮತ್ತೂಂದೆಡೆ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಆತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅದನ್ನು ಗಮನಿಸಿದ ದಿಲ್‌ಶಾದ್ ಆತನ ಮನೆ ಬಳಿ ಬಂದು ಶವ ನೋಡಿಕೊಂಡು ಹೋಗಿದ್ದಳು. ನಂತರ ಆಕೆಯ ಮನೆಯಲ್ಲಿಯೇ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಪತಿಯ ಹಲ್ಲೆಯಿಂದ ನೇಣಿಗೆ ಶರಣು: ಆರೋಪ
ದಿಲ್‌ಶಾದ್ ಅವರ ಪತಿ ಕೃಷ್ಣ ಮದ್ಯಪಾನ ಮಾಡಿಕೊಂಡು ಬಂದು ಪತ್ನಿಯನ್ನು ಅನುಮಾನಿಸುತ್ತಿದ್ದ. ಜೊತೆಗೆ ಹಲ್ಲೆ ಮಾಡುತ್ತಿದ್ದ. ಇದೇ ಕಾರಣಕ್ಕೆ ದಿಲ್‌ಶಾದ್ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳಿವೆ ಎಂದ ಆಕೆಯ ಕುಟುಂಬಸ್ಥರು ಆಕೆಯ ಪತಿ ಕೃಷ್ಣನ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿಲ್‌ಶಾದ್ ಹಾಗೂ ಜಾನ್ಸನ್‌ಗೆ ಪರಿಚಯವಾಗಿದ್ದು ಹೇಗೆ, ಇಬ್ಬರ ಆತ್ಮಹತ್ಯೆ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ಬಳಿಕ ನಿಖರವಾದ ಮಾಹಿತಿ ಸಿಗಲಿವೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಲ್ ಶಾದ್ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರ ತಾಯಿ ಬೇಗಂ ನೀಡಿದ ದೂರಿನ ಆಧಾರದ ಮೇಲೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ●ವಿ.ಸಜೀತ್, ಡಿಸಿಪಿ, ಈಶಾನ್ಯ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.