Bengaluru: ಐಶ್ವರ್ಯ ಗೌಡಳಿಂದ ಇನ್ನೊಂದು ಬೆಂಜ್ ಕಾರು ಜಪ್ತಿ
ಉಡುಗೊರೆ ರೂಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊಟ್ಟಿದ್ದ ಐಶ್ವರ್ಯ?
Team Udayavani, Jan 12, 2025, 11:06 AM IST
ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಚಿನ್ನ ಪಡೆದು ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ ಅವರಿಂದ ಬೆಲೆ ಬಾಳುವ ಬೆಂಜ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕಾರನ್ನು ಐಶ್ವರ್ಯ ಗೌಡ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಉಡುಗೊರೆ ರೂಪದಲ್ಲಿ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಐಶ್ವರ್ಯ ಗೌಡ ವಂಚನೆ ಮಾಡಿದ್ದ ಹಣದಿಂದ ಸುಮಾರು 60 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ. ಅದನ್ನು ಉಡುಗೊರೆ ರೂಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಿದ್ದಳು ಎಂದು ಹೇಳಲಾಗುತ್ತಿದೆ. ಇದೀಗ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆ ಬೆಂಜ್ ಕಾರನ್ನು ಜಪ್ತಿ ಮಾಡಿದ್ದಾರೆ. ಈ ಹಿಂದೆ ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿದ್ದ ಐಷಾರಮಿ ಕಾರುಗಳಾದ ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಇದೀಗ ಮತ್ತೂಂದು ಕಾರನ್ನು ವಶಪಡಿಸಿಕೊಂಡಿದ್ದು, ಈ ಮೂಲಕ ಒಟ್ಟು 4 ಕಾರುಗಳನ್ನು ಜಪ್ತಿ ಮಾಡಿದಂತೆ ಆಗಿದೆ.
ವಂಚನೆ ಸಂಬಂಧ ಐಶ್ವರ್ಯಾಗೌಡ ದಂಪತಿ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ 1, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಪೊಲೀಸರಿಂದ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಐಶ್ವರ್ಯಗೆ ಮಂಡ್ಯ ಪೊಲೀಸರಿಂದ ನೋಟಿಸ್ ಮಂಡ್ಯ: ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಐಶ್ವರ್ಯಗೌಡ ಹಾಗೂ ಪತಿ ಹರೀಶ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಉಪ ಅಧೀಕ್ಷಕ ಜಿ.ಆರ್.ಶಿವಮೂರ್ತಿ ಅವರು ಆರೋಪಿ ಐಶ್ವರ್ಯಗೌಡ ಹಾಗೂ ಪತಿ ಹರೀಶ್ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ನಿಮ್ಮ ವಿಚಾರಣೆ ಅಗತ್ಯವಿರುವುದರಿಂದ ನಿಮಗೆ ನೋಟಿಸ್ ತಲುಪಿದ ಕೂಡಲೇ ತನಿಖಾಧಿ ಕಾರಿಯಾದ ನನ್ನ ಮುಂದೆ ತಪ್ಪದೇ ಠಾಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ. 62 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಐಶ್ವರ್ಯಗೌಡ, ಪತಿ ಹರೀಶ್ ಹಾಗೂ ಸಹೋದರ ಹಳ್ಳಿ ಮಂಜುನಾಥ್ ವಿರುದ್ಧ ವಂಚನೆಗೊಳಗಾದ ಗುತ್ತಲು ರಸ್ತೆಯ ಬಸವನಗುಡಿ ನಿವಾಸಿ ರವಿಕುಮಾರ್ ಹಾಗೂ ಆತನ ಅತ್ತಿಗೆ ಗುತ್ತಲು ರಸ್ತೆಯ ಅರಕೇಶ್ವರ ನಗರದ ನಿವಾಸಿ ಪೂರ್ಣಿಮಾ ಎಂಬುವರು ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.