Marathon: ಬೆಳಗಾವಿಯಲ್ಲಿ ಮ್ಯಾರಥಾನ್‌ಗೆ ಸಾನಿಯಾ ಮಿರ್ಜಾರಿಂದ ಚಾಲನೆ


Team Udayavani, Jan 12, 2025, 11:55 AM IST

Marathon: ಬೆಳಗಾವಿಯಲ್ಲಿ ಮ್ಯಾರಥಾನ್‌ಗೆ ಸಾನಿಯಾ ಮಿರ್ಜಾರಿಂದ ಚಾಲನೆ

ಬೆಳಗಾವಿ: ಕ್ರೀಡೆ, ಆರೋಗ್ಯದಿಂದ ಭಾರತ ಸದೃಢವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಆರೋಗ್ಯ ಇದ್ದರೆ ಎಲ್ಲವೂ ಇದೆ. ಶಿಕ್ಷಣದೊಂದಿಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಂತಾರಾಷ್ಟ್ರೀಯ ಟೆನ್ನಿಸ್‌ ಪಟು ಸಾನಿಯಾ ಮಿರ್ಜಾ ಅಭಿಪ್ರಾಯ ಪಟ್ಟರು.

ನಗರದ ಲೋಕಮಾನ್ಯ ಮಲ್ಟಿಪರ್ಪಸ್ ಸೌಹಾರ್ದ ಸೊಸೈಟಿ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆ-ಶಿಕ್ಷಣ ಒಂದೇ ನಾಣ್ಯದ ಮುಖವಿದ್ದಂತೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕ್ರೀಡೆಯಲ್ಲಿ ದೊಡ್ಡ ಸೂಪರ್‌ಸ್ಟಾರ್‌ ಗಳಾಗುತ್ತಿದ್ದಾರೆ. ಕ್ರೀಡೆಯಲ್ಲಿ ಶ್ರಮಪಟ್ಟು ಮುನ್ನುಗ್ಗಿದ್ದರೆ ನೀವು ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ತ್ಯಾಗ, ಪರಿಶ್ರಮವಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಗೆಲುವಿಗಿಂತ ಮುಂಚೆ ಎಲ್ಲರೂ ಸೋಲುತ್ತಾರೆ. ನಂತರದಲ್ಲಿ ಗೆಲುವಿನ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಿರಾಶರಾಗದೆ ನಮ್ಮ ಅರ್ಧ ಜೀವನ ಸೋಲಿನಿಂದಲೇ ಆರಂಭವಾಗುತ್ತದೆ. ನಂತರದಲ್ಲಿ ಆತ್ಮವಿಶ್ವಾದಿಂದ ಮುನ್ನುಗ್ಗಿದರೆ ಗೆಲುವು ನಿಶ್ಚಿತವಾಗುತ್ತದೆ ಎಂದು ಹೇಳಿದರು.

ಬೆಳಗಾವಿಯ ವಾತಾವರಣ ಬಹಳ ಸುಂದರವಾಗಿದೆ. ಮತ್ತೆ ಬೆಳಗಾವಿಗೆ ಬರಬೇಕೆನಿಸುತ್ತದೆ. ಮತ್ತೊಮ್ಮೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ. ಬೆಳಗಾವಿಗೆ ಮೊದಲನೇ ಸಲ ಬಂದಿದ್ದು ಬಹಳ ಖುಷಿ ಆಗಿದೆ. ಸೂರ್ಯ ಉದಯಿಸುವ ಮೊದಲೇ ಜನರು ಅತ್ಯಂತ ಉತ್ಸಾಹದಿಂದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಮ್ಯಾರಥಾನ್ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ತರುಣ ಭಾರತ ಸಂಸ್ಥಾಪಕ ಕಿರಣ ಠಾಕೂರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟಾಪ್ ನ್ಯೂಸ್

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV-Gandhi-bharatha

Congress Session: ಬೆಳಗಾವಿ ರ‍್ಯಾಲಿ ಯಶಸ್ಸಿಗೆ 56 ಶಾಸಕರಿಗೆ ಜವಾಬ್ದಾರಿ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

15

UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

13

UV Fusion: ಬದಲಾವಣೆ ಜಗದ ನಿಯಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.