Puttur-ಸುಬ್ರಹ್ಮಣ್ಯ; 4 ರೈಲ್ವೇ ಮೇಲ್ಸೇತುವೆ

ಪುರುಷರಕಟ್ಟೆ , ಗಡಿಪಿಲ, ಕೋರಿಯಾರ್‌, ಬಜಕೆರೆಯಲ್ಲಿ 24 ಕೋಟಿ ವೆಚ್ಚದ ಕಾಮಗಾರಿ

Team Udayavani, Jan 12, 2025, 12:42 PM IST

1

ಸವಣೂರು: ಕೇಂದ್ರ ಸರಕಾರದ ಅಮೃತ್‌ ಭಾರತ್‌ ವಿಶೇಷ ಯೋಜನೆಯಡಿ ಮೈಸೂರು ರೈಲ್ವೇ ವಿಭಾಗದ ಮಂಗಳೂರು -ಸುಬ್ರಹ್ಮಣ್ಯ ಮಧ್ಯೆ ನಾಲ್ಕು ಕಡೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್‌ ಅಂತ್ಯದೊಳಗೆ ಮುಕ್ತಾಯವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2024ರ ಫೆ.26ರಂದು ದೇಶಾದ್ಯಾಂತ ‘ನನ್ನ ಕುಟುಂಬ ಸದಸ್ಯರಿಗೆ 41 ಸಾವಿರ ಕೋಟಿ ರೂ ಮೌಲ್ಯದ ರೈಲ್ವೇ ಯೋಜನೆಗಳ ಉಡುಗೊರೆ’ ಎನ್ನುವ ಘೋಷಣೆಯೊಂದಿಗೆ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅಮೃತ ಭಾರತ್‌ ಸ್ಪೆಷಲ್‌ ಯೋಜನೆ ಯಲ್ಲಿ 554 ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ ಹಾಗೂ 1500 ರಸ್ತೆ ಮೇಲ್ಸೇತುವೆಗಳು ಹಾಗೂ ಅಂಡರ್‌ಪಾಸ್‌ಗಳ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಒಂದು ಭಾಗವೇ ಈ ನಾಲ್ಕು ಮೇಲ್ಸೇತುವೆಗಳು.

ಎಲ್ಲೆಲ್ಲಿ ನಿರ್ಮಾಣ?
ಮಂಗಳೂರು-ಬೆಂಗಳೂರು ರೈಲೆÒà ಹಳಿಯ ಮೇಲೆ ಬರುವ ಸುಬ್ರಹ್ಮಣ್ಯ -ಮಂಗಳೂರು ಮಧ್ಯೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಸಾಂದೀಪನಿ ವಿದ್ಯಾ ಸಂಸ್ಥೆಯ ಬಳಿ ಹಾಗೂ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ, ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್‌, 102ನೇ ನೆಕ್ಕಿಲಾಡಿ ಗ್ರಾಮದ ಬಜಕರೆ, ನಾಲ್ಕು ಕಡೆ ಸುಮಾರು 24 ಕೋಟಿ ರೂ ವೆಚ್ಚದಲ್ಲಿ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ.

ಈ ಪೈಕಿ ಗಡಿಪಿಲದ ಕಾಮಗಾರಿ ಹೊರತುಪಡಿಸಿ ಉಳಿದ ಮೂರು ಕಾಮಗಾರಿಗಳು ಶೇ. 60ರಷ್ಟು ಮುಗಿದಿದೆ. ಕೋರಿಯಾರ್‌, ಬಜಕರೆ ಹಾಗೂ ಪುರುಷರಕಟ್ಟೆಯ ಮೇಲ್ಸೇತುವೆ ಕಾಮಗಾರಿ ಫೆಬ್ರವರಿ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಹೇಳಲಾಗಿದೆ. ಗಡಿಪಿಲದ ಕಾಮಗಾರಿ ಎಪ್ರಿಲ್‌ ತಿಂಗಳಿಗೆ ಕೊನೆಗೊಳ್ಳಲಿದೆ. ಮೇಲ್ಸೇತುವೆಗಳ ಕಾಮಗಾರಿ ಶೀಘ್ರ ಮುಗಿದಲ್ಲಿ ಆಯಾ ಭಾಗದ ಜನರ ಬಹುಕಾಲದ ಕನಸು ಈಡೇರಿದಂತಾಗುತ್ತದೆ.

6.52 ಮೀಟರ್‌ ಎತ್ತರದ ಸೇತುವೆ
– ರೈಲ್ವೇ ಹಳಿಯಿಂದ ಸುಮಾರು 6.52 ಮೀಟರ್‌ ಎತ್ತರ (ಅಗತ್ಯ ಬಿದ್ದಲ್ಲಿ ಸ್ವಲ್ಪ ಬದಲಾವಣೆ ಯಾಗಬಹುದು) , 7.5 ಮೀಟರ್‌ ಅಗಲ,10 ಮೀಟರ್‌ ಉದ್ದದ ಸೇತುವೆ ನಿರ್ಮಾಣವಾಗಲಿದೆ, ಇದಕ್ಕೆ ಪೂರಕವಾದ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ಅದರ ಕಾಂಕ್ರಿಟೀಕರಣ ಆಗಲಿದೆ.
– ಬೆಂಗಳೂರು ಮೂಲದ ಎಸ್‌.ವಿ. ಕನ್‌ಸ್ಟ್ರಕ್ಷನ್ಸ್‌ನವರು ಗುತ್ತಿಗೆ ಪಡೆದು ಕಾಮಗಾರಿ ಕೈಗೆತ್ತಿಕೊಂಡಿದ್ದು, ಮಳೆ ದೂರವಾದ ಬಳಿಕ ವೇಗವನ್ನು ಪಡೆದುಕೊಂಡಿದೆ.
– ಈಗಾಗಲೇ ಈ ಭಾಗದ ರೈಲ್ವೇ ನಿಲ್ದಾಣಗಳ ವಿದ್ಯುದ್ಧೀಕರಣ, ಪ್ಲಾಟ್‌ ಫಾರ್ಮ್ ಎತ್ತರಿಸುವ ಕಾರ್ಯಗಳು ನಡೆದು ಅಭಿವೃದ್ಧಿಗೊಂಡಿವೆ.

ಗಂಟೆಗಟ್ಟಲೆ ಕಾಯುವ
ಸಮಸ್ಯೆ ನಿವಾರಣೆ ಕೋರಿಯಾರ್‌ ಹಾಗೂ ಬಜಕರೆಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಿಸುವ ಭರವಸೆಯನ್ನು ಹಿಂದಿನ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನೀಡಿದ್ದರು. ಇದೀಗ ಅಮೃತ ಭಾರತ್‌ ಯೋಜನೆಯಲ್ಲಿ ಅನುದಾನ ಜೋಡಿಸಿಕೊಂಡು ಮೇಲ್ಸೇತುವೆ ನಿರ್ಮಾಣ ಕಾರ್ಯವಾಗುತ್ತಿದೆ. ನಮ್ಮ ಭಾಗದ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿಯ ಬಗ್ಗೆ ಈಗಿನ ಸಂಸದ ಬ್ರಿಜೇಶ್‌ ಚೌಟ ಅವರಿಗೆ ಮನವಿ ಮಾಡಲಾಗುವುದು. ಈಗ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿರುವುದರಿಂದ ನಾವು ಈ ಹಿಂದೆ ಗಂಟೆಗಟ್ಟಲೆ ರೈಲ್ವೇ ಗೇಟ್‌ ಬಳಿ ಕಾಯುವ ಸಮಸ್ಯೆ ತಪ್ಪಲಿದೆ.
-ಮೇದಪ್ಪ ಗೌಡ ಡೆಪ್ಪುಣಿ, ಮಾಜಿ ನಿರ್ದೆಶಕರು, ಎ.ಪಿ.ಎಂ.ಸಿ ಪುತ್ತೂರು

ಕಾಮಗಾರಿ ಶೀಘ್ರ ಮುಕ್ತಾಯ
ಕೋರಿಯಾರ್‌, ಬಜಕರೆ, ಹಾಗೂ ಪುರುಷರಕಟ್ಟೆಯಲ್ಲಿ ರೈಲ್ವೇ ರಸ್ತೆ ಮೇಲ್ಸೇತುವೆ ಕಾಮಗಾರಿ ಶೇ. 60ರಷ್ಟು ಪೂರ್ತಿಗೊಳಿಸಲಾಗಿದೆ. ಗಡಿಪಿಲದ ಕಾಮಗಾರಿ ಕೂಡಾ ಪ್ರಾರಂಭಿಸಲಾಗಿದೆ. ಈ ಕಾಮಗಾರಿ ಎಪ್ರಿಲ್‌ ತಿಂಗಳಲ್ಲಿ ಮುಗಿಸಿ ಕೊಡಲಾಗುವುದು. ರೈಲ್ವೇ ಇಲಾಖೆಯ ಸೂಚನೆಯಂತೆ ನಾಲ್ಕು ಮೇಲ್ಸೇತುವೆಗಳ ಕಾಮಗಾರಿಗಳು ಶೀಘ್ರ ಮುಗಿಸಲು ಉದ್ದೇಶಿಸಲಾಗಿದೆ.
-ಗೋವರ್ಧನ್‌ ರೆಡ್ಡಿ, ಪ್ರಾಜೆಕ್ಟ್ ಎಂಜಿನಿಯರ್‌

ಟಾಪ್ ನ್ಯೂಸ್

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

Sullia: ಅಸ್ವಸ್ಥ ಮಹಿಳೆ ಸಾವು

Sullia: ಅಸ್ವಸ್ಥ ಮಹಿಳೆ ಸಾವು

2

Sullia: ಹೋರಿ ಎರಗಿ ವ್ಯಕ್ತಿಗೆ ಗಾಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.