Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ
Team Udayavani, Jan 12, 2025, 1:25 PM IST
ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರು ನನ್ನ ಸಲಹೆ ಪಡೆಯಲು ಭೇಟಿಯಾದರು. ಇದಕ್ಕೆ ಮೊದಲು ಆತ ಇನ್ನೊಬ್ಬ ಮೂಳೆತಜ್ಞರ ಸಲಹೆ ಪಡೆದಿದ್ದರು. “”ನನಗೆ ವೈದ್ಯರು ಅದೇನೋ… ಆಸ್ಟಿಯೋ (Osteo).. ಕಾಯಿಲೆ ಎಂದು ಹೇಳಿದರು”… ಇದು ನಮ್ಮಲ್ಲಿ ನಡೆದ ಸಂವಾದ.
ಯಾವುದೇ ಕಾಯಿಲೆಯ ಪೂರ್ತಿ ಹೆಸರು ತಿಳಿಯುವುದು ಅತೀ ಅಗತ್ಯ. ಉದಾಹರಣೆಗೆ ಆಸ್ಟಿಯೋ ಎಂಬ ಹೆಸರಿನಿಂದ ಆರಂಭವಾಗುವ ಕಾಯಿಲೆಗಳು ಬಹಳ ಇವೆ- Osteoarthritis, Osteoporosis, Osteosarcoma, Osteomalacia… ಇತ್ಯಾದಿ.
ವೃದ್ಧಾಪ್ಯದಲ್ಲಿ ಕಂಡುಬರುವ ಮೂಳೆ ಹಾಗೂ ಸಂಧಿ ಸವೆತ
ಮಾನವ ದೇಹದ ಅಂಗಾಂಗಗಳು ವಯಸ್ಸಾದಂತೆ ದುರ್ಬಲಗೊಳ್ಳುತ್ತವೆ. ಇದಕ್ಕೆ ದೇಹದ ಮೂಳೆಗಳು ಹಾಗೂ ಕಾಲಿನ ಮಂಡಿಗಳೂ ಹೊರತಾಗಿಲ್ಲ.
ಮೂಳೆಸವೆತಕ್ಕೆ ‘Osteoporosis’ ಎಂಬ ಹೆಸರು, ಮಂಡಿ ಸವೆತಕ್ಕೆ ‘ Osteoarthritis’ ಎಂಬ ಹೆಸರು ಇದೆ.
ಮೂಳೆಸವೆತ (Osteoporosis) 45-50 ವರ್ಷ ವಯಸ್ಸಿನಲ್ಲಿ ಕಾಣಬರುತ್ತದೆ (Postmenopausal Osteoporosis). ಪುರುಷರು 60-65 ವರ್ಷ ವಯಸ್ಸಿಗೆ ಈ ಕಾಯಿಲೆಯಿಂದ ಬಳಲುತ್ತಾರೆ. (Senile Osteoporosis) ಈ ಕಾಯಿಲೆಯಲ್ಲಿ ದೇಹದ ಎಲ್ಲ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ಪರಿಣಾಮ ಬೆನ್ನುಮೂಳೆ ಹಾಗೂ ಸೊಂಟದ ಮೂಳೆಯ ಮೇಲೆ ಜಾಸ್ತಿ. ಈ ಇಳಿವಯಸ್ಸಿನಲ್ಲಿ ಆಯತಪ್ಪಿ ಬಿದ್ದಾಗ ಅಥವಾ ಉಳುಕಿದಾಗ ಬೆನ್ನಿನ ಅಥವಾ ಸೊಂಟದ ಹತ್ತಿರದ ಮೂಳೆ ಮುರಿತ ಉಂಟಾಗುತ್ತದೆ.
ಧೂಮಪಾನ, ಮದ್ಯಪಾನ, ದೀರ್ಘಕಾಲ ಸ್ಟಿರಾಯ್ಡ್ ಔಷಧ ಬಳಕೆ, ಕ್ಯಾಲ್ಸಿಯಂ ಹಾಗೂ ವಿಟಮಿನ್ “ಡಿ’ ಕೊರತೆ, ಬದಲಾದ ಜೀವನ ಶೈಲಿ, ಆತಂಕದಿಂದ ಕೂಡಿದ ವೃತ್ತಿ ಜೀವನ… ಇವೆಲ್ಲ ಮೂಳೆಸವೆತಕ್ಕೆ ಕಾರಣಗಳು.
ರೋಗ ಪತ್ತೆಹಚ್ಚುವ ವಿಧಾನಗಳು
ಹಲವು ಬಗೆಯ ರಕ್ತ ಪರೀಕ್ಷೆಯ ಜತೆಗೆ, X-rays, Dexa Scan, DMD ಎಂಬ ಒಂದು ಪರೀಕ್ಷಾ ವಿಧಾನ ಮೂಳೆಸವೆತದ ತೀವ್ರತೆಯನ್ನು ಪತ್ತೆಹಚ್ಚುತ್ತದೆ.
ಪರಿಹಾರ ಕ್ರಮಗಳು
ಮೂಳೆಸವೆತದ ತೀವ್ರತೆಯನ್ನು ಅನುಸರಿಸಿ ಹಲವು ಬಗೆಯ ಔಷಧಗಳನ್ನು ಬಳಸಬೇಕಾಗುತ್ತದೆ. ನೋವು ಉಪಶಮನ, ಕ್ಯಾಲ್ಸಿಯಂ, ವಿಟಮಿನ್ “ಡಿ’… ಇತ್ಯಾದಿ. ಸೊಂಟದ ಮೂಳೆಮುರಿತ ಉಂಟಾಗಿದ್ದಲ್ಲಿ ಸೂಕ್ತ ಬಗೆಯ ಶಸ್ತ್ರಚಿಕಿತ್ಸೆಯ ಅಗತ್ಯ ಕಂಡುಬರುತ್ತದೆ. ಇದರ ಜತೆಗೆ ಪೌಷ್ಠಿಕಾಂಶ ಗಳನ್ನು ಹೊಂದಿದ ಆಹಾರ, ನಿಯಮಿತ ವ್ಯಾಯಾಮ, ದುಷcಟಗಳಿಂದ ದೂರ ಇರುವುದು… ಇವೆಲ್ಲ ಅಗತ್ಯ.
ಮಂಡಿ ಸವೆತ (Osteoarthritis) ಸತತ ಬಳಕೆಯಿಂದ ದೇಹದ ಭಾರ ಹೊತ್ತಿರುವ ಮೊಣಕಾಲು ಹಾಗೂ ಸೊಂಟದ ಬಳಿಯ ಮಂಡಿ ಸವೆತಕ್ಕೆ ತುತ್ತಾಗುತ್ತವೆ. ಇದರಿಂದಾಗಿ ರೋಗಿಗೆ ಮಹಡಿಯ ಮೆಟ್ಟಿಲು ಹತ್ತುವುದು, ಕಕ್ಕಸಿನಲ್ಲಿ ಕುಳಿತುಕೊಳ್ಳುವುದು ಬಹಳ ಪ್ರಯಾಸಕಾರಿಯಾಗಿ ಕಾಣುತ್ತದೆ.
ಚಿಕಿತ್ಸಾ ವಿಧಾನಗಳು
ಆರಂಭಿಕ ಹಂತದಲ್ಲಿ ಮಂಡಿ ಸವೆತ ರೋಗವನ್ನು ಔಷಧಗಳ ಮೂಲಕ ಹತೋಟಿಯಲ್ಲಿ ಇಡಬಹುದು.
ನೋವು ನಿವಾರಕ ಮಾತ್ರೆಗಳು, ವ್ಯಾಯಾಮ (Physiotherapy), ಮಂಡಿಯ ಪದರವನ್ನು ದೃಢಗೊಳಿಸುವ ಔಷಧಗಳು ಈ ನಿಟ್ಟಿನಲ್ಲಿ ಸಹಕಾರಿ. ಮಂಡಿಸವೆತ ತುಂಬಾ ಮುಂದುವರಿದ ಹಂತದಲ್ಲಿ ಶಸ್ತ್ರಚಿಕಿತ್ಸೆ ಬಹಳ ಪರಿಣಾಮಕಾರಿ. ಸವೆದು ಹೋದ ಮಂಡಿಯನ್ನು ಕೃತಕ ಮಂಡಿ ಅಳವಡಿಸುವ ಶಸ್ತ್ರಚಿಕಿತ್ಸೆ (Total Joint Replacemen ಬಹಳ ಹೆಸರುವಾಸಿಯಾಗಿದೆ.
ಸಂದೇಶ
ರೋಗಿಗೆ ಮೂಳೆಸವೆತದ ರೋಗವೇ ಅಥವಾ ಮಂಡಿಸವೆತದ ತೊಂದರೆಯೇ ಎಂಬುವುದನ್ನು ಗುರುತಿಸಿಕೊಂಡು ತಕ್ಕ ಪರಿಹಾರ ಕ್ರಮಗಳನ್ನು ವೈದ್ಯರು ಸೂಚಿಸುತ್ತಾರೆ. ಕಾಯಿಲೆಯ ಬಗ್ಗೆ ಅರೆಬರೆ ತಿಳಿವಳಿಕೆ ಹೊಂದಿಕೊಂಡು ಸ್ವಯಂ ಚಿಕಿತ್ಸೆಗೆ ಒಳಗಾಗುವುದು ಒಳಿತಲ್ಲ. ತಜ್ಞ ವೈದ್ಯರ ಸೂಕ್ತ ಸಲಹೆ ಪಡೆದು ನೋವು ರಹಿತ ಜೀವನದತ್ತ ಮುನ್ನಡೆಯೋಣ…!
-ಡಾ| ಬಿ. ಸೀತಾರಾಮ ರಾವ್,
ಮೂಳೆತಜ್ಞ ವೈದ್ಯ,
ಆರ್ಥೋಪೆಡಿಕ್ಸ್ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್ಸ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.