Mangaluru: ಕದ್ರಿ ಪಾರ್ಕ್‌ನಲ್ಲಿ ಕಲಾಲೋಕ ವೈಭವ

ಕಲಾಪರ್ಬಕ್ಕೆ ಚಾಲನೆ; ವಿನೂತನ ಕಲಾ ಪ್ರಕಾರಗಳ ಪ್ರದರ್ಶನ

Team Udayavani, Jan 12, 2025, 1:06 PM IST

2(1

ಮಹಾನಗರ: ಮಂಗಳೂರಿನ ಶರಧಿ ಪ್ರತಿಷ್ಠಾನ, ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ಸಹಯೋಗದೊಂದಿಗೆ ಕದ್ರಿಪಾರ್ಕ್‌ನಲ್ಲಿ ನಡೆಯುವ ಎರಡು ದಿನಗಳ ಕಲಾಪರ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕದ್ರಿ ಪಾರ್ಕ್‌ ರಸ್ತೆಯಲ್ಲಿ ಅನಾವರಣಗೊಂಡ ಕಲಾ ಜಗತ್ತು ಕಲಾ ರಸಿಕರ ಮನ ತಣಿಸುತ್ತಿದೆ. ಕಲಾಪರ್ಬದಲ್ಲಿ 118 ಮಳಿಗೆಗಳಿವೆ.

ವಿನೂತನ ಕಲಾ ಪ್ರದರ್ಶನಗಳು
ಆಯಿಲ್‌ ಪೈಂಟಿಂಗ್‌, ಪೆನ್ಸಿಲ್‌ ಆರ್ಟ್‌, ಅಕ್ರೇಲಿಕ್‌, ಲೈನ್‌ ಆರ್ಟ್‌, ಸಿರಾಮಿಕ್‌ ಆರ್ಟ್‌, ಪೊರ್ಟ್ರೇಟ್‌, ನೇಚರ್‌ ಪೈಂಟಿಂಗ್‌ ಇತ್ಯಾದಿಗಳು ಗಮನ ಸೆಳೆಯುತ್ತಿವೆ. ಗೃಹಿಣಿಯರು ಮನೆಯಲ್ಲೇ ತಯಾರಿಸಿದ ಆಕರ್ಷಕ ಕೈಮಗ್ಗದ ಅಲಂಕಾರಿಕ ವಸ್ತುಗಳು ಕಲಾಪರ್ಬದಲ್ಲಿವೆ. ಕೂಳೂರು ಮೂಲದ ಗೃಹಣಿಯೊಬ್ಬರು ರಚಿಸಿರುವ ಅಲಂಕಾರಿಕೆಗಳು ಗಮನ ಸೆಳೆಯುತ್ತಿವೆ. ಅನೇಕ ಮಹಿಳೆಯರು ಮನೆಯಲ್ಲಿ ತಯಾರಿಸಿದ ಕಸೂತಿ ವಸ್ತುಗಳ ಮಳಿಗೆ ಕಲಾಪರ್ಬದಲ್ಲಿವೆ.

ಕಲೆಗೆ ವಿಶೇಷ ಶಕ್ತಿ ಇದೆ: ಶಾಸಕ ಕಾಮತ್‌
ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು, ಕಲೆಗೆ ಗತಕಾಲದ ವಿಚಾರ ತಿಳಿಸುವ ವಿಶೇಷ ಶಕ್ತಿ ಇದ್ದು, ಸಂಸ್ಕೃತಿ ಉಳಿವಿಗೆ ಹಿರಿಯರು ನೀಡಿದ ಕೊಡುಗೆ ಸ್ಮರಿಸಲು ಕಲಾ ಪ್ರದರ್ಶನ ವೇದಿಕೆಯಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪೂಜಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸಿಇಒ ಡಾ| ಆನಂದ್‌, ಜಿಲ್ಲಾ ಎಸ್‌ಪಿ ಯತೀಶ್‌ ಎನ್‌., ಕಾರ್ಪೋರೆಟರ್‌ ಶಕೀಲಾ ಕಾವ, ಉದ್ಯಮಿ ಲಾಂಚುಲಾಲ್‌ ಕೆ.ಎಸ್‌., ಪ್ರಮುಖರಾದ ಕೋಟಿ ಪ್ರಸಾದ್‌ ಆಳ್ವ, ಬಿ.ಪಿ. ಮೋಹನ್‌ ಕುಮಾರ್‌, ಡಿ. ರಮೇಶ್‌ ನಾಯಕ್‌, ಪುನೀಕ್‌ ಶೆಟ್ಟಿ, ದಿನೇಶ್‌ ಹೊಳ್ಳ, ಮೋಹನ್‌ ಉಪಸ್ಥಿತರಿದ್ದರು. ಚೇತನ್‌ ಶೆಟ್ಟಿ ನಿರೂಪಿಸಿದರು.

-ಸಿ.ಇ. ಕಾಮತ್‌ ಕುಶಲಕರ್ಮಿಗಳ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಮರ, ಲೋಹ ಹಾಗೂ ಕಲ್ಲಿನಿಂದ ತಯಾರಿಸಿದ ಶಿಲ್ಪಗಳು.
-ಪ್ರಶಾಂತ್‌ ಆಚಾರ್ಯ ಅವರು ಪೆನ್ಸಿಲ್‌ ಲೆಡ್‌ನ‌ಲ್ಲಿ ತಯಾರಿಸಿರುವ ಸೂಕ್ಷ್ಮ ಕಲಾಕೃತಿ
-ಪಡುಬಿದ್ರಿಯ ರೂಪಾ ಅವರು ವಿವಿಧ ಎಲೆಗಳಿಂದ ವೈವಿಧ್ಯಮಯ ಕಲಾ ಪ್ರಕಾರ ಸೃಷ್ಟಿಸಿದ್ದಾರೆ.
-ಚಿತ್ರಾಪುರದ ಪದ್ಮಾ ಕರ್ಕೇರ ಚಿಪ್ಪುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ.
-ಬಿಜೈನ ಜೇನ್‌ ನೊರೋನ್ಹಾ ಅವರು ಕಾಫಿ ಪುಡಿಯಲ್ಲಿ ರಚಿಸಿರುವ ಕಲಾಕೃತಿಗಳು..

ಪೇಪರ್‌ ಕೊಲಾಜ್‌ ಮೂಲಕ ಜಾಗೃತಿ
ಶ್ರೀನಿವಾಸ್‌ ಕಾಲೇಜಿನ ವಿದ್ಯಾರ್ಥಿಗಳು ಹಳೇ ಪತ್ರಿಕೆಗಳನ್ನು ಬಳಸಿಕೊಂಡು ಪ್ರತಿಕೃತಿ ರಚಿಸಿದ್ದಾರೆ. ಅದರ ಮೂಲಕ ಸಾರ್ವಜನಿಕ ಜಾಗದಲ್ಲಿ ಎಸೆದ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಬುಡಕಟ್ಟು ಸಿದ್ದಿ ಸಮುದಾಯದ ಸಂಸ್ಕೃತಿ ಅನಾವರಣ
ಯಲ್ಲಾಪುರ ಮಂಚಿಕೆರೆಯ ಸಿದ್ದಿ ಬುಡಕಟ್ಟು ಸಮುದಾಯದ ಪನ್ನಿಕ ಸಿದ್ದಿ ನೇತೃತ್ವದಲ್ಲಿ ಸಿದ್ದಿ ಢಮಾಮಿ ನೃತ್ಯ ಪ್ರದರ್ಶನ ಗಮನ ಸೆಳೆದಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಕ್ಸ್‌ಪರ್ಟ್‌ ಸಂಸ್ಥೆಯ ಅಂಕುಶ್‌ ನಾಯಕ್‌ ಅವರ ತಂಡದಿಂದ ಸಂಗೀತ ಪ್ರದರ್ಶನ, ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(1

Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ

4(1

Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್‌ ಅಳವಡಿಕೆ ಪೂರ್ಣ

3

Mangaluru: ಬಂದರಿನಲ್ಲಿ ಐಪಿಎಲ್‌ ಮಾದರಿ ಗಲ್ಲಿ ಕ್ರಿಕೆಟ್‌!

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.