Belman: ಕರಿಯತ್ತಲಗುಂಡಿ ನೇಪಥ್ಯಕ್ಕೆ ಸರಿದ ಅಣೆಕಟ್ಟು !

ಮುಂಡ್ಕೂರು-ಉಳೆಪಾಡಿ: ಸಂಪರ್ಕ ರಸ್ತೆಯ ಚಿಂತನೆಯೂ ನನೆಗುದಿಗೆ

Team Udayavani, Jan 12, 2025, 3:25 PM IST

7

ಬೆಳ್ಮಣ್‌: ಮುಂಡ್ಕೂರು, ಉಳೆಪಾಡಿ, ಸಂಕಲಕರಿಯ, ಏಳಿಂಜೆ ಭಾಗದ ನೂರಾರು ಕೃಷಿಕರ ಸಾವಿರಾರು ಎಕರೆ ಕೃಷಿಭೂಮಿಗೆ ಜೀವಾಳವಾಗಿದ್ದ ಬಹುಪಯೋಗಿ ಮುಂಡ್ಕೂರು ಕರಿಯತ್ತಲ ಗುಂಡಿ ಶಾಂಭವಿ ನದಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದಾಗಿ ನೇಪಥ್ಯಕ್ಕೆ ಸೇರಿದೆ. ಅಳವಡಿಸಬೇಕಾದ ಹಲಗೆಗಳೂ ನೀರು ಪಾಲಾಗಿವೆ. ಇದೀಗ ಈ ಅಣೆಕಟ್ಟು ನೀರಿನ ರಭಸಕ್ಕೆ ಬಂದ ಮರದ ದಿಮ್ಮಿಗಳು ಸಿಲುಕಿ ಕೊಚ್ಚಿ ಹೋಗುತ್ತಿದೆ. ಈ ಮೂಲಕ ಈ ಭಾಗದ ಕೃಷಿಕರ ಬಹು ನಿರೀಕ್ಷಿತ ಕೃಷಿ ಪೂರಕ ವ್ಯವಸ್ಥೆಯೂ ಕೊಚ್ಚಿ ಹೋಗುತ್ತಿದೆ.

30 ವರ್ಷಗಳ ಹಿಂದಿನ ಯೋಜನೆ
ಮುಂಡ್ಕೂರು, ಉಳೆಪಾಡಿ, ಸಂಕಲಕರಿಯ, ಏಳಿಂಜೆ, ಸಂಕಲಕರಿಯ ಭಾಗದ ಸಾವಿರಾರು ಎಕ್ರೆ ಕೃಷಿ ಭೂಮಿಗಳನ್ನು ಹಸಿರಾಗಿಸಲು ಅಂದಿನ ಕಾಪು ಶಾಸಕ ದಿ.ವಸಂತ ವಿ.ಸಾಲ್ಯಾನ್‌ರವರ ಮುತುವರ್ಜಿಯಲ್ಲಿ ಪ್ರಾರಂಭಗೊಂಡ ಈ ಅಣೆಕಟ್ಟು ಪ್ರಾರಂಭದ ಕೆಲ ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಇತರ ಸಮಾನ ಮನಸ್ಕ ಕೃಷಿಕರ ಸಹಕಾರದಿಂದ ನಿರ್ವಹಣೆಯಿಂದ ಜನೋಪಯೋಗಿಯಾಗಿತ್ತು. ಬಳಿಕ ನಿರ್ವಹಣೆ ಕೊರತೆ ಕಾಡಿತ್ತು. ಮುಂದೆ ಅಂದಿನ ಸಣ್ಣ ನೀರಾವರಿ ಸಚಿವ ಕುಮಾರ ಬಂಗಾರಪ್ಪನವರ ಕಾಲದಲ್ಲಿ ಅದನ್ನು ದುರಸ್ತಿಪಡಿಸಲಾಗಿತ್ತು. ಬಳಿಕ ನಿರ್ವಹಣೆ ಸರಿಯಾಗಿಲ್ಲದೆ ಈಗ ಶಾಶ್ವತವಾಗಿ ಇಹಿಹಾಸದ ಪುಟ ಸೇರಲಿದೆ. ಅಣೆಕಟ್ಟು ದುರಸ್ತಿ ಹಾಗೂ ನಿರ್ವಹಣೆಗೆ ಭಾರಿ ಮೊತ್ತದ ಅನುದಾನ ಬೇಕಾಗಿರುವುದರಿಂದ ಇಲಾಖೆ ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ

ರಸ್ತೆ ನಿರ್ಮಿಸಿದರೆ ಭಾರೀ ಅನುಕೂಲ
ಈ ಅಣೆಕಟ್ಟಿನ ಕಬ್ಬಿಣದ ರಾಡ್‌ಗಳು ಸಂಪೂರ್ಣ ತುಕ್ಕು ಹಿಡಿದಿದ್ದು ನೀರು ಹಾದು ಹೋಗುವಲ್ಲಿ ದೊಡ್ಡ ಮರಗಳ ರೆಂಬೆಗಳು ಸಿಕ್ಕಿ ಹಾಕಿಕೊಂಡಿದೆ. ಅಣೆಕಟ್ಟಿನ ಮೂಲಕ ಶಾಲೆ, ಕಾಲೇಜು, ಮಾರ್ಕೆಟ್‌ಗೆ ಹೋಗುವವರು ನಡೆದುಕೊಂಡು ಹೋಗುತ್ತಾರೆ. ಈ ಅಣೆಕಟ್ಟಿನ ಪಕ್ಕದಲ್ಲಿ ರಸ್ತೆ ನಿರ್ಮಾಣದ ಬೇಡಿಕೆ ಇದೆ. ರಸ್ತೆ ನಿರ್ಮಿಸಿದರೆ ಮುಂಡ್ಕೂರಿನಿಂದ ಉಳೆಪಾಡಿಗೆ ಹತ್ತಿರದ ಸಂಪರ್ಕ ಸಾಧ್ಯವಾಗಲಿದೆ. ಈಗ ಏಳಿಂಜೆ ಪಟ್ಟೆ ಕ್ರಾಸ್‌ ಮೂಲಕ ಎಂಟು ಕಿ.ಮೀ ಪ್ರಯಾಣಿಸಬೇಕು.

ಮೂಡುಬಿದಿರೆ- ಕಾರ್ಕಳ ಶಾಸಕರಿಗೆ ಮನವಿ
ಈ ಶಾಂಭವಿ ನದಿ ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಬೇರ್ಪಡಿಸುವ ಮುಖ್ಯ ಗಡಿಯಾಗಿದ್ದು ಈ ಆಣೆಕಟ್ಟು ನಿರ್ವಹಣೆ ಹಾಗೂ ಸಂಪರ್ಕ ರಸ್ತೆಯ ಜವಾಬ್ದಾರಿ ಈ ಎರಡೂ ಭಾಗದ ಶಾಸಕರದ್ದಾಗಿದೆ. ಉಮಾನಾಥ ಕೋಟ್ಯಾನ್‌ ಹಾಗೂ ವಿ.ಸುನಿಲ್‌ ಕುಮಾರ್‌ ಸೇರಿ ಈ ಯೋಜನೆ ಪುನಃನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ.

ತುರ್ತು ಕ್ರಮ ಅಗತ್ಯ
ಈ ಅಣೆಕಟ್ಟುವಿನಿಂದ ನಮ್ಮೂರಿಗೆ ಭಾರೀ ಅನುಕೂಲವಾಗುತ್ತಿತ್ತು. ಕೃಷಿಕರೂ ಖುಷಿಯಲ್ಲಿದ್ದರು. ಆದರೆ ನಿರ್ವಹಣೆಯ ಕೊರತೆಯಿಂದಾಗಿ ನೇಪಥ್ಯಕ್ಕೆ ಜಾರಿದೆ. ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ತುರ್ತು ಕ್ರಮ ಕೈಗೊಂಡು ದುರಸ್ತಿಪಡಿಸಲಿ.
– ಸುಧಾಕರ ಶೆಟ್ಟಿ, ಪ್ರಗತಿಪರ ಕೃಷಿಕ, ಉಳೆಪಾಡಿ ಬಾಲಕೃಷ್ಣ ಶೆಟ್ಟಿ, ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘ ಮುಂಬಯಿ

ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Ajekar: ಎಷ್ಟು ದಿನ ಟವರ್‌ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್‌ ಕೊಡಿ ಸ್ವಾಮಿ!

5

Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

4

Kundapur: ಸಿಆರ್‌ಪಿಎಫ್‌ ನಿವೃತ್ತ ಸೈನಿಕ ಕುಸಿದು ಬಿದ್ದು ಸಾವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.