UV Fusion: ಕೊಂಕು ಹುಡುಕುವ ಮುನ್ನ…


Team Udayavani, Jan 12, 2025, 3:28 PM IST

14-uv-fusion

ಅಂದೊಂದು ದಿನ ಅಜ್ಜಿ ಹೇಳಿದ ಕಥೆ ಇಂದು ನಿಜ ಅನಿಸುತ್ತಿದೆ. ಸಮುದ್ರ ತೀರದಲ್ಲೊಂದು ಏಡಿ ನಡೆದುಕೊಂಡು ಹೊರಟಿತ್ತಂತೆ. ತನ್ನ ಹೆಜ್ಜೆ ಗುರುತುಗಳನ್ನು ನೋಡಿ ಖುಷಿಪಡುತಿದ್ದ ಏಡಿಯ ಹೆಜ್ಜೆಗಳನ್ನು ಸಮುದ್ರದ ಅಲೆಗಳು ಅಳಿಸಿ ಬಿಡುತಿತ್ತು. ಇದರಿಂದ ಕೆಲವೇ ಕ್ಷಣಗಳಲ್ಲಿ ಆ ಏಡಿಯ ಖುಷಿ ಮರೆಯಾಗುತ್ತಿತ್ತು. ಪ್ರತಿ ಬಾರಿ ಇದನ್ನು ನೋಡಿ ಬೇಸತ್ತ ಏಡಿ “ನೀನೊಬ್ಬ ನನ್ನ ಉತ್ತಮ ಸ್ನೇಹಿತನಾಗಿದ್ದರೂ ಹೀಗೇಕೆ ಹೆಜ್ಜೆ ಗುರುತು ಅಳಿಸಿ ನನ್ನ ಖುಷಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತೀಯ’ ಎಂದು ಸಮುದ್ರವನ್ನು ಕೇಳಿತಂತೆ.

ಅದಕ್ಕೆ ಉತ್ತರಿಸಿದ ಸಮುದ್ರ ಮೀನು ಹಿಡಿಯುವವರು ಅದನ್ನು ನೋಡಿದರೆ, ಅವರು ನಿನ್ನನ್ನು ಹಿಡಿಯಬಹುದು ಆಗ ನಿನ್ನ ಈ ಸ್ವತ್ಛಂದ ಆನಂದ ಸಂಪೂರ್ಣವಾಗಿ ಹೋಗಿಬಿಡಬಹುದು ಎಂಬ ಭಯಕ್ಕೆ ಹಾಗೆ ಮಾಡುವೆ ಎಂದು ಹೇಳಿದಾಗ ಆಗ ಏಡಿ ತನ್ನ ತಪ್ಪಿನ ಅರಿವಾಗಿ ತಲೆಬಾಗಿತಂತೆ.

ಈಗ ನಡೆಯುತ್ತಿರುವುದು ಹಾಗೆಯೇ ಅಲ್ಲವೆ? ಹಿರಿಯರ ಬುದ್ಧಿ ಮಾತುಗಳು, ಶಿಕ್ಷಕರ ಸಲಹೆಗಳು ಕಿರಿಯರಾದ ನಮಗೆ ರುಚಿಸುವುದೇ ಇಲ್ಲ. ಯಾವುದಾದರು ಕೆಲಸದಲ್ಲಿ ಮಾಡಿದ ತಪ್ಪನ್ನು ಎತ್ತಿ ತೋರಿಸಿದಾಗ, ಮನೆಯಿಂದಾಚೆ ಹೆಜ್ಜೆ ಇಡುವಾಗ ಅವರ ಬುದ್ಧಿ ಮಾತುಗಳು ಕಿವಿಗೆ ಬಂದು ತಾಕಿದಾಗ ನನ್ನ ಪ್ರತಿ ವಿಷಯದಲ್ಲೂ ಇವರದೊಂದು ಕೊಂಕು ಇದ್ದದ್ದೇ ಎಂದು ಗೊನುಗುತ್ತ ಅವರ ಮಾತನ್ನು ತಲೆಗೆ ಹಾಕಿಕೊಳ್ಳದೆ ನಮ್ಮಿಷ್ಟದಂತೆ ಇರಲು ಬಯಸುತ್ತೇವೆ.

ಅದರಿಂದ ಅನಾಹುತಗಳಾದ ಮೇಲೆ ಹೀಗೆ ಮಾಡಬಾರದಿತ್ತೇನೋ ಎಂದು ದುಃಖಪಡುತ್ತೇವೆ. ಸಮಸ್ಯೆ ಎದುರಾಗುವ ಮೊದಲೇ ಅವರ ಸಲಹೆ ಪಡೆದಿದ್ದರೆ ಅನಾಹುತ ಆಗುತ್ತಿರಲಿಲ್ಲ ಅಲ್ಲವೆ! ಅರ್ಥವಾಗುವ ಮುಂಚೆಯೆ ಸಮಯ ಮೀರಿ ಹೋಗಿರುತ್ತದೆ.

ಸಮಾಜದಲ್ಲಿಯೂ ಹೀಗೆ ಹೆಚ್ಚಿನ ಜನರು ಒಳ್ಳೆಯ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅವರ ಮಾತು, ಕೆಲಸದ ಬಗ್ಗೆ ಅನುಮಾನ ಪಡುತ್ತಲೇ ಇರುತ್ತಾರೆ. ಇನ್ನು ನಾವು ಮಾಡುವ ಕಾರ್ಯದಲ್ಲಿ ಅನುಭವಿಗಳು ಸಲಹೆ ಸೂಚನೆ ಕೊಡಲು ಬಂದಾಗ ಅದನ್ನು ಕೇಳುವ ತಾಳ್ಮೆಯೆ ಇರುವುದಿಲ್ಲ. ತಮ್ಮದೆ ನಿಜ ಎನ್ನುವಂತೆ ವರ್ತಿಸುತ್ತಾರಲ್ಲ ಎಂದು ಕೋಪಿತರಾಗುತ್ತೇವೆ. ಹಾಗೆ ಅಂದುಕ್ಕೊಳುವ ಬದಲಾಗಿ ಯಾಕೆ ಈ ರೀತಿ ಮಾಡಿರಬೇಕು ಎಂದು ತಾಳ್ಮೆಯಿಂದ ಯೋಚಿಸಿದರೆ ಮೇಲಿನ ಕಥೆಯಲ್ಲಿ ಏಡಿ ಮಾಡಿದ ತಪ್ಪನ್ನು ನಮ್ಮ ಜೀವನದಲ್ಲಾಗದಂತೆ ತಡೆಯಬಹುದು.

ಎಲ್ಲ ವಿಷಯಗಳ ಹಿಂದೆಯೂ ಕೆಟ್ಟ ಉದ್ದೇಶಗಳೇ ಇರುವುದಿಲ್ಲ. ಕುಟುಂಬ ಆಗಲಿ, ಸ್ನೇಹಿತರಾಗಲಿ ಯಾವತ್ತೂ ಕೆಟ್ಟದನ್ನು ಬಯಸುವುದಿಲ್ಲ. ಮನುಷ್ಯ ಮನುಷ್ಯನ ಮೇಲೆ ನಂಬಿಕೆ ಇಟ್ಟು ಯೋಚಿಸಿ, ಪರಿಶೀಲಿಸಿ, ತಾಳೆ ವಹಿಸಿ ಮಾತನಾಡಬೇಕು. ಹಾಗೆ ನಂಬಿಕೆ ಇಟ್ಟವರೊಂದಿಗೆ ಪ್ರತಿಯೊಬ್ಬರು ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಏಕೆಂದರೆ ಈ ಮೌಲ್ಯಗಳು ಮನುಷ್ಯನಲ್ಲಿಯಷ್ಟೇ ಅಲ್ಲವೆ ಕಾಣುವುದು. ಅದಕ್ಕೆ ಅವುಗಳಿದ್ದರಷ್ಟೇ ಅಲ್ಲವೆ ನಾವುಗಳು ಮನುಷ್ಯರೆನೆಸಿಕೊಳ್ಳುವುದು…

ಗಂಗಾ ನೀಲಪ್ಪ ಅಮಾತೆಪ್ಪನವರ

ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ

ಟಾಪ್ ನ್ಯೂಸ್

Ashok-Vijayendra

ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್‌.ಅಶೋಕ್‌

BJP 2

Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

13

UV Fusion: ಬದಲಾವಣೆ ಜಗದ ನಿಯಮ

12(1

UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ

11

UV Fusion: ಸಮಯ ಪಾಲನೆ ಅನುಸರಿಸೋಣ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Ashok-Vijayendra

ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್‌.ಅಶೋಕ್‌

BJP 2

Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.