UV Fusion: ಸಮಯ ಪಾಲನೆ ಅನುಸರಿಸೋಣ
Team Udayavani, Jan 12, 2025, 4:40 PM IST
ಸವಿಯದ ಸಮಯ ಸಾವಿಗೆ ಸಮಾನ ಸವಿಯುವ ಸಮಯ ಸನ್ಮಾನಕ್ಕೆ ಸಮಾನ ಸಮಯವು ಪ್ರತಿಯೊಬ್ಬರ ಜೀವನವನ್ನು ಬದಲಿಸುವಂತಹ ಪ್ರಮುಖವಾದಂತಹ ಆಯುಧವಾಗಿದೆ. ಇಂತಹ ಅತ್ಯಮೂಲ್ಯ ಸಮಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಹೊಸ ವರ್ಷವನ್ನು ನಾವೆಲ್ಲರು ಆರಂಭ ಮಾಡಬೇಕಿದೆ.
ಪ್ರತಿಯೊಬ್ಬನು ಜೀವನದಲ್ಲಿ ಜಯ ಸಾಧಿಸಬೇಕೆಂದರೇ ಟೈಮ್ ಸಮಯ ಪಾಲನೆ ಅನುಸರಿಸಬೇಕು. ಸಮಯ ವೆಂಬುವುದು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಳೆದು ಹೋಗುತ್ತದೆ. ನಿರ್ಧಾರ ಕೈಗೊಳ್ಳಲು, ನಾಯಕತ್ವ ಬೆಳವಣಿಗೆಗೆ, ಸಮಯ ಹೊಂದಿಸಲು, ಸಮಯ ಪಾಲನೆ ತುಂಬಾ ಮುಖ್ಯ. ಇದು ಎಲ್ಲರೂ ಒಪ್ಪಲೇಬೇಕಾದ ಸತ್ಯ. ಪ್ರತಿ ವ್ಯಕ್ತಿಯನ್ನು ನಿಯಂತ್ರಿಸುವ ಶಕ್ತಿ ಸಮಯಕ್ಕೆ ಮಾತ್ರ ಇದೆ.
ಯಾವ ವ್ಯಕ್ತಿ ಸಮಯಕ್ಕೆ ಬೆಲೆಯನ್ನು ನೀಡುವುದಿಲ್ಲವೋ ಆ ವ್ಯಕ್ತಿಯು ಗಂಭೀರವಾದಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಸಮಯವನ್ನು ಸರಿಯಾಗಿ ಉಪಯೋಗಿಸದೆ ಇದ್ದರೆ ಯಾವುದೇ ವ್ಯಕ್ತಿಯು ಗಾಬರಿ ಒಳಗಾಗುತ್ತಾನೆ ಎಂಬುದು ಬಹಳ ಮುಖ್ಯವಾಗಿದೆ.
ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ ಅದೇ ರೀತಿಯಾಗಿ ಸಮಯವು ಕೂಡ ಯಾರಿಗಾಗಿಯೂ ಕಾಯುವುದಿಲ್ಲ ಸಮಯವನ್ನು ನಾವು ಹುಡುಕಿಕೊಂಡು ಸದುಪಯೋಗವನ್ನು ಮಾಡಿಕೊಂಡಾಗ ಮಾತ್ರ ನಮ್ಮ ಜನ್ಮ ಸಾರ್ಥಕ ಎನಿಸುತ್ತದೆ.
ಸಮಯ ಪಾಲನೆ ಅತ್ಯಂತ ಸವಾಲಿನ ಕೆಲಸ. ಸವಾಲನ್ನು ಸ್ವೀಕರಿಸಿ ಯಾರು ಸಮಯ ಪಾಲನೆ ಮಾಡುತ್ತಾರೋ, ಅವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಕಲೆಯಿಂದ ಹೆಚ್ಚಿನ ಸಾಧನೆ ಮಾಡಬಹುದು.ವ್ಯಕ್ತಿಯು ಸಮಯದ ಪ್ರಜ್ಞೆಯನ್ನು ಬೆಳಸಿಕೊಳ್ಳದೆ ಹೋದರೆ ನಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಮರೀಚಿಕೆಯಾಗುತ್ತದೆ.
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆ ನಮ್ಮ ಜೀವನದಲ್ಲಿ ಬರುವುದಿಲ್ಲ.ಸಮಯವು ಹಣಕ್ಕಿಂತ ಬೆಲೆಯುಳ್ಳದ್ದು. ಹಣ ಹೋದರೆ ಸಂಪಾದಿಸಬಹುದು. ಆದರೇ ಸಮಯದ ವಿಷಯ ಹಾಗಲ್ಲ. ಕಳೆದು ಹೋದ ಸಮಯ ಮತ್ತೆ ಮರಳಿ ಬರಲಾರದು.
ಶರಣಬಸವ ವಾಳದ, ವಿವಿ, ಕೊಪ್ಪಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.