Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್
Team Udayavani, Jan 12, 2025, 4:42 PM IST
ನವದೆಹಲಿ: ಜನವರಿ 20 ರಂದು ನಡೆಯಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಾಷಿಂಗ್ಟನ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಜೈಶಂಕರ್ ಅವರು ಟ್ರಂಪ್ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ರವಿವಾರ ತಿಳಿಸಿದೆ.
“ಟ್ರಂಪ್-ವಾನ್ಸ್ ಉದ್ಘಾಟನಾ ಸಮಿತಿಯ ಆಹ್ವಾನದ ಮೇರೆಗೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಯುಎಸ್ 47 ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಜೆ. ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ,” ಎಂದು ಪ್ರಕಟಣೆ ತಿಳಿಸಿದೆ.
“ಭೇಟಿಯ ಸಮಯದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರು ಯುಎಸ್ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸುತ್ತಾರೆ, ಮತ್ತು ಆ ಸಂದರ್ಭದಲ್ಲಿ ಯುಎಸ್ ಗೆ ಭೇಟಿ ನೀಡುವ ಇತರ ಕೆಲವು ಗಣ್ಯರೊಂದಿಗೂ ಮಾತುಕತೆ ನಡೆಸಲಿದ್ದಾರೆ” ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dehradun ಉತ್ತರಾಖಂಡ: ಕಮರಿಗೆ ಬಸ್ ಉರುಳಿ 5 ಮಂದಿ ಸಾವು
Chandigarh: ಉದ್ಯಮಿ ಮನೆಯ 4 ನೇ ಮಹಡಿಯಿಂದ ಬಿದ್ದು ಸಹೋದರಿಯರಿಬ್ಬರು ಮೃ*ತ್ಯು
Maha Kumbh; ಪ್ರಯಾಗ್ ರಾಜ್ ನಲ್ಲಿ ಕಳೆಗಟ್ಟಿದ ಸಂಭ್ರಮ..ಸಕಲ ಸಿದ್ಧತೆ
Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.