Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ
Team Udayavani, Jan 12, 2025, 5:15 PM IST
ಉಡುಪಿ: ಉತ್ತರ ಪ್ರದೇಶ ಪ್ರಯಾಗರಾಜದ ಪವಿತ್ರ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳದ ಯಶಸ್ಸಿಗಾಗಿ ನಾಡಿನ ಸಮಸ್ತ ಸಾಧು ಸಂತರು ಹಾಗೂ ಪ್ರತೀ ಮನೆ, ಮಂದಿರಗಳಲ್ಲಿ ಸಮಸ್ತ ಹಿಂದು ಸಮಾಜ ದೇವರ ಮುಂದೆ ದೀಪ ಬೆಳಗಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಪೇಕ್ಷಿಸಿದ್ದಾರೆ.
ಮಹಾಕುಂಭ ಮೇಳ ಇಡೀ ಜಗತ್ತಿನ ಒಂದು ಮಹಾಕೌತುಕ. ಪ್ರಪಂಚದ ಅತೀ ದೊಡ್ಡ ಧಾರ್ಮಿಕ ಮೇಳವಾಗಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಉದ್ದೇಶವಾಗಿಟ್ಟುಕೊಂಡು ದೇಶ- ವಿದೇಶಗಳಿಂದ ಕೋಟ್ಯಂತರ ಸನಾತನ ಧರ್ಮೀಯರು ಅತ್ಯಂತ ಧರ್ಮಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ. ನಮ್ಮ ಆಯುರ್ಮಾನದಲ್ಲಿ ಇದು ಘಟಿಸುತ್ತಿದೆ ಎನ್ನುವುದೇ ಸಮಸ್ತ ಭಾರತೀಯರಿಗೆ ದೊಡ್ಡ ಹೆಮ್ಮೆಯಾಗಿದೆ. 40 ದಿನಗಳ ಈ ಉತ್ಸವದ ಅದ್ಭುತ ಯಶಸ್ಸಿಗಾಗಿ ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಕಾರ್ಮಿಕರವರೆಗೆ ಲಕ್ಷಾಂತರ ಜನರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಮಾರು 50 ಕೋಟಿಯಷ್ಟು ಜನ ಭಾಗವಹಿಸುತ್ತಿದ್ದಾರೆ. ಇದರ ಯಶಸ್ಸು ಒಂದು ಮಹಾ ಸವಾಲು. ಮನುಷ್ಯ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಈ ಮಹೋತ್ಸವ ಯಾರೊಬ್ಬರಿಗೂ ಯಾವೊಂದು ರೀತಿಯ ತೊಂದರೆ, ವಿಘ್ನ, ಹಾನಿಗಳೂ ಇಲ್ಲದೇ ಅತ್ಯಂತ ಯಶಸ್ವಿಯಾಗಬೇಕು. ಆ ಯಶಸ್ಸಿನಿಂದ ಇಡೀ ದೇಶದಲ್ಲಿ ಶಾಂತಿ, ಸುಭಿಕ್ಷೆ, ಸುರಕ್ಷೆ, ಸಮೃದ್ಧಿ ನೆಲೆಯಾಗಬೇಕು. ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಸಮಸ್ತ ಹಿಂದುಗಳಿಗೂ ಒಂದು ಪವಿತ್ರ ಕರ್ತವ್ಯವಾಗಿದೆ. ಆದ್ದರಿಂದ ನಾಡಿನ ಎಲ್ಲ ಮಠಾಧೀಶರು, ಸಾಧು ಸಂತರು, ದೇಗುಲಗಳ ಅರ್ಚಕರು, ವೈದಿಕ ವಿದ್ವಾಂಸರು ಹಾಗೂ ಕೋಟ್ಯಂತರ ಹಿಂದೂಗಳು ತಮ್ಮ ಮನೆ, ಮಠ, ಮಂದಿರಗಳಲ್ಲಿ ದೇವರ ಮುಂದೆ ದೀಪಬೆಳಗಿ ಮಹಾಕುಂಭ ಮೇಳದ ಯಶಸ್ಸಿಗಾಗಿ ಪ್ರಾರ್ಥಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಡರ್-19 ವನಿತಾ ಕ್ರಿಕೆಟ್ ಇರಾ ಜಾಧವ್ 346
Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ
BBK11: ಇನ್ಮುಂದೆ ನನ್ನ ಕಿರಿಕಿರಿ ನಿಮಗೆ ಇರಲ್ಲ .. ದೊಡ್ಮನೆಯಿಂದ ಚೈತ್ರಾ ಔಟ್
Udupi; ಗೀತಾರ್ಥ ಚಿಂತನೆ 154: ವೈಯಕ್ತಿಕ ಸುಖ ಬೇಡ, ಲೋಕ ಸುಖ ಬೇಕು
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.