ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
ಡ್ರಾಮಾ ಮಾಸ್ಟರ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ತಿರುಗೇಟು
Team Udayavani, Jan 12, 2025, 7:03 PM IST
ಚಿಕ್ಕಮಗಳೂರು: ಮೋಹ, ಮದ, ಮತ್ಸರಗಳಿಂದ ಹೊರಗಿದ್ದು ನೋಡಿತ್ತಾರೋ ಅವರಿಗೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮೋಹ ಪರವಶರಾದವರಿಗೆ, ಅಧಿಕಾರ ಮದದಿಂದ ಮಾತ್ಸರ್ಯದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗುವುದಿಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದರು.
ಸಿ.ಟಿ.ರವಿ ಡ್ರಾಮಾ ಮಾಸ್ಟರ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಮುಖ್ಯಮಂತ್ರಿಯಾಗಿ ನ್ಯಾಯದ ಸ್ಥಾನದಲ್ಲಿದ್ದೀರಿ. ಆದರೆ, ಯಾರದು ವಕೀಲರಾಗಿಬಿಟ್ಟಿದ್ದೀರಿ ಎಂದು ಟೀಕಿಸಿದ ಅವರು, ಸಭಾಪತಿಗಳು ರೂಲಿಂಗ್ ನೀಡಿದ ಮೇಲೂ ನಡೆದ ಘಟನೆ ಬಗ್ಗೆ ಗಾಂಧಿಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ. ಎಂದು ಪ್ರಶ್ನಿಸಿದರು.
ಸಿಎಂ ಹುದ್ದೆಗಾಗಿ ಡಿಕೆಶಿ ಡ್ರಾಮಾ:
ನಿಮ್ಮ ಸರ್ಕಾರದ ಪೊಲೀಸರು ಮಾಡಿದ ದೌರ್ಜನ್ಯ ಹಿಂದೆ ಯಾರ ಕುಮ್ಮಕ್ಕಿದೆ, ಯಾರ ಕಾಣದ ಕೈಗಳ ಪಾತ್ರವಿದೆ. ಇದನ್ನು ಮೋಹ, ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡಿದರೇ ಸತ್ಯದ ಅರಿವು ಆಗುತ್ತದೆ. ಯಾರು ಹೇಗಿದ್ದಾರೋ ಇತರರೂ ಹಾಗೇ ಎಂದು ಡಿ.ಕೆ.ಶಿವಕುಮಾರ್ ಭಾವಿಸುತ್ತಾರೆ. ಡಿ.ಕೆ.ಶಿವಕುಮಾರ್ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಹುದ್ದೆಗಾಗಿ ಎಂದು ಕೆಲ ಕಾಂಗ್ರೆಸ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಕೆಚ್ಚಲು ಕೊಯ್ದು ಪ್ರಕರಣ: ಮತಾಂಧರಿಗೆ ಈ ನೆಲದಲ್ಲಿ ಜಾಗವಿಲ್ಲ:
ಬೆಂಗಳೂರಿನ ಚಾಮರಾಜಪೇಟೆಯ ಹಸುವಿನ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇದು ಮತಾಂಧರ ಕೃತ್ಯ, ಇದನ್ನು ಸಹಿಸಿಕೊಳ್ಳಬಾರದು. ಈ ನೆಲದಲ್ಲಿ ಅಂತವರಿಗೆ ಜಾಗವಿಲ್ಲವೆಂದು ಕಿಡಿಕಾರಿದ ಅವರು, ಅಮಾನವೀಯ, ವಿಕೃತಿ ಕೃತ್ಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಸನಾತನ ಧರ್ಮದಿಂದ ಬಂದವರು ನಾವು ಎಲ್ಲದರಲ್ಲೂ ದೇವರನ್ನು ಕಾಣುತ್ತೇವೆ. ನಮ್ಮನ್ನು ಕೆರಳಿಸುವ, ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಇದನ್ನು ಸಹಿಸಿಕೊಳ್ಳಬಾರದು ಮತಾಂಧರಿಗೆ ಶಿಕ್ಷೆಯಾಗಬೇಕು ಎಂದರು.
ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ಪತ್ರ ಬಂದಿದೆ. ತನಿಖೆ ನಡೆಯುತ್ತಿದೆ. ಕಚೇರಿಯಿಂದಲೇ ದೂರು ಕೊಟ್ಟಿದ್ದಾರೆ. ಹೋರಾಟದಿಂದ ಬಂದವನು ನಾನು ಇಂತಹದಕ್ಕೆಲ್ಲ ಹೆದರುವುದಿಲ್ಲ. ನನ್ನ ಡಿಕ್ಷನರಿಯಲ್ಲಿ ಹೆದರಿಕೆಗೆ ಜಾಗವಿಲ್ಲವೆಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.