Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

ಮಂಗಳೂರು ನಗರದಲ್ಲಿ ಐಟಿ ಕಂಪೆನಿಗಳಿಂದ ವರ್ಕ್ ಸ್ಪೇಸ್ ಗಳಿಗೆ ಹೆಚ್ಚಿದ ಬೇಡಿಕೆ

Team Udayavani, Jan 12, 2025, 7:38 PM IST

1-mukund

ಇದೀಗ ಕೆಲ ವರ್ಷಗಳಿಂದ, ಅದರಲ್ಲೂ ಕೋವಿಡ್ ನಂತರದ ಸನ್ನಿವೇಶ ಬದಲಾಗಿದ್ದು ಊರಿನಿಂದ ದೂರ ಉಳಿದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಐಟಿ ಕ್ಷೇತ್ರದ ಸಾವಿರಾರು ಉದ್ಯೋಗಿಗಳು ಮತ್ತೆ ಊರಿಗೆ ಮರಳಿದ್ದು ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಅವರಿಗೆ ಹೈಸ್ಪೀಡ್ ಇಂಟರ್ನೆಟ್, ತಡೆರಹಿತ ವಿದ್ಯುತ್ ಕನೆಕ್ಷನ್ ಮೊದಲಾದ ಸಮಸ್ಯೆ ಉಂಟಾಗಿತ್ತು. ಈ ಸಂಧರ್ಭ `ವರ್ಟೆಕ್ಸ್ ವರ್ಕ್ ಸ್ಪೇಸ್’ ಹೊಸ ಅವಕಾಶ ಕಲ್ಪಿಸಿತು ಮಾತ್ರವಲ್ಲದೆ ಬೇಕಾದ ಎಲ್ಲಾ ಉಪಕರಣಗಳು ಮತ್ತು ಉಪಯುಕ್ತತೆಗಳನ್ನು ಒದಗಿಸಿಕೊಟ್ಟಿತು.

ಇನ್‌ವೆಸ್ಟ್ ಸ್ಮಾರ್ಟ್-ಇನ್‌ವೆಸ್ಟ್ ಇನ್ ಮಂಗಳೂರು
ರಾಜ್ಯ ಸರಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್’ ಕಾರ್ಯಕ್ರಮ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತು. ಇದರಿಂದ ಮಂಗಳೂರು ನಗರದಲ್ಲಿ ಕಳೆದ 3 ವರ್ಷಗಳಲ್ಲಿ 150 ಕ್ಕಿಂತಲೂ ಹೊಸ ಐಟಿ, ಕಾಪೋರೇಟ್ ಸಂಸ್ಥೆಗಳು ತಮ್ಮ ನೆಲೆಯನ್ನು ಸ್ಥಾಪಿಸಿದ್ದು ಇದರಿಂದ 6000 ಕ್ಕೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿವೆ. ಇದೀಗ ಮತ್ತಷ್ಟು ಐಟಿ ಕಂಪೆನಿಗಳು ಮಂಗಳೂರಿಗೆ ಬರಲು ಉತ್ಸುಕತೆಯನ್ನು ಹೊಂದಿದ್ದು ವರ್ಕ್ ಸ್ಪೇಸ್ ಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ನಗರದ ಬಿಜೈ-ಕಾಪಿಕಾಡ್‌ನಲ್ಲಿ ಅಶೋಕಾ ಬ್ಯುಸಿನೆಸ್ ಸೆಂಟರ್ ಯೋಜನೆಯ ನಿರ್ಮಾಣ ಭರದಿಂದ ನಡೆಯುತ್ತಿದೆ. ಈಗಾಗಲೇ ಶೇ.50 ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಈ ಯೋಜನೆಯನ್ನು 2025 ರ ಮಧ್ಯಾಂತರದಲ್ಲಿ ಹಸ್ತಾಂತರ ಮಾಡಲು ಹಲವಾರು ಐಟಿ ಕಂಪೆನಿಗಳು ಬೇಡಿಕೆ ಇಟ್ಟಿವೆ.
ಇಲ್ಲಿ 1.2 ಲಕ್ಷ ಚ.ಅಡಿ ವರ್ಕ್ ಸ್ಪೇಸ್ ಸಿದ್ದಗೊಳ್ಳುತ್ತಿದ್ದು, 2500 ಕ್ಕೂ ಹೆಚ್ಚುವರಿ ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.

ಈ ಹೊಸ ಪರಿಕಲ್ಪನೆಯಲ್ಲಿ ಟ್ರಾಫಿಕ್ ಕಿರಿಕಿರಿ ರಹಿತ ವರ್ಕ್ ಏರಿಯಾ, ಪರಿಸರ ಸ್ನೇಹೀ ಗ್ರೀನ್ ಬಿಲ್ಡಿಂಗ್, ತಡೆರಹಿತ ಇಂಟರ್‌ನೆಟ್ ಮತ್ತು ವಿದ್ಯುತ್ ಮಾತ್ರವಲ್ಲದೆ, ಪ್ರಶಾಂತ ವಾತಾವರಣ ಹೊಂದಿರುವ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಿ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ ಶೀಘ್ರದಲ್ಲೇ ಮುಕುಂದ್ ಎಂಜಿಎಂ ರಿಯಾಲ್ಟಿಯವರು ಮತ್ತೆರಡು ಬಿಸಿನೆಸ್ ಸೆಂಟರ್‌ಗಳನ್ನು ಪ್ರಾರಂಭಗೊಳಿಸಲಿದ್ದಾರೆ ಹಾಗೂ ಇನ್‌ವೆಸ್ಟ್ ಸ್ಮಾರ್ಟ್-ಇನ್‌ವೆಸ್ಟ್ ಇನ್ ಮಂಗಳೂರು ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಬಂಡವಾಳ ಹೂಡಿಕೆದಾರರೂ ಈ ವರ್ಕ್ ಸ್ಪೇಸ್ ಗಳ ನಿರ್ಮಾಣಕ್ಕೆ ಸಂಸ್ಥೆಯೊಂದಿಗೆ ಕೈ ಜೋಡಿಸಬಹುದಾಗಿದ್ದು ವಿದೇಶಿ ಸಂಸ್ಥೆಗಳಿಂದ ಶೇ.8 ರಷ್ಟು ಬಾಡಿಗೆ ಆದಾಯ ಪಡೆಯಬಹುದಾದ ಸುವರ್ಣಾವಕಾಶ ತಮ್ಮದಾಗಿಸಬಹುದು. ವರ್ಕ್ ಸ್ಪೇಸ್ ಗಳ ಪಸ್ತುತ ದರದಲ್ಲಿ ಶೇ. 20 ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು ಪಸ್ತುತ ದರವನ್ನು 26 ಜನವರಿ 2025 ರವರೆಗೆ ಮಾತ್ರ ಕಾಯ್ದಿರಿಸಲಾಗಿದೆ.

ಗ್ರಾಹಕರ ಸಂತೃಪ್ತಿಯೇ ನಮ್ಮ ಯಶಸ್ಸು
ತಾಯ್ನೆಲದ ಮಣ್ಣಿನಲ್ಲಿ ಆರಾಮದಾಯಕವಾಗಿ ಕೆಲಸ ಮಾಡಿ ಸಂತೃಪ್ತಿಯನ್ನು ಹೊಂದುವ ಗ್ರಾಹಕರ ಸಂತೋಷವೇ ನಮ್ಮ ಯಶಸ್ಸಿನ ಕೀಲಿಕೈ. ಉದ್ಯೋಗಿಗಳಿಗೆ ಬೇಕಾದ ಅವಶ್ಯಕತೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಹೊಸ ಅನ್ವೇಷಣೆಗಳ ಮೂಲಕ ದೀರ್ಘಕಾಲ ಕೆಲಸ ಮಾಡುವ ಸನ್ನಿವೇಶವನ್ನು ನಾವು ಕಲ್ಪಿಸಿ ಕೊಡುತ್ತಿದ್ದೇವೆ. ಈ ಮೂಲಕ ಐಟಿ ಕಂಪೆನಿಗಳ ಬೆಳವಣಿಗೆಗೆ ನಮ್ಮಿಂದಾಗುವ ಕೊಡುಗೆ ನೀಡಲು ಉತ್ಸುಕರಾಗಿದ್ದೇವೆ. ಮುಂಬರುವ ಎಲ್ಲಾ ವರ್ಕ್ ಸ್ಪೇಸ್ ಯೋಜನೆಗಳಲ್ಲಿ ಹೊಸತನಕ್ಕೆ ಆದ್ಯತೆ ನೀಡುತ್ತಿದ್ದೇವೆ. 24*7 ವಿದ್ಯುತ್, ಇಂಟರ್ನೆಟ್ ಸಂಪರ್ಕ ಕಲ್ಪಿಸಿ, ಉದ್ಯೋಗಿಗಳಿಗೆ ನೆರವಾಗುತ್ತಿದ್ದೇವೆ ಎಂದು ಸಂಸ್ಥೆಯ ಪಾಲುದಾರ ಮಹೇಶ್ ಶೆಟ್ಟಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ www.ashokabusinesscenter.com ಅಥವಾ 9611730555 ಸಂಪರ್ಕಿಸಬಹುದಾಗಿದೆ.

ಟಾಪ್ ನ್ಯೂಸ್

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

8(1

Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ

4(1

Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್‌ ಅಳವಡಿಕೆ ಪೂರ್ಣ

3

Mangaluru: ಬಂದರಿನಲ್ಲಿ ಐಪಿಎಲ್‌ ಮಾದರಿ ಗಲ್ಲಿ ಕ್ರಿಕೆಟ್‌!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.