Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಐದು ಬಾರಿ ಆಯ್ಕೆಯಾದ ಬಿಜೆಪಿಯ ಹಿರಿಯ ಶಾಸಕಗಿಲ್ಲ ಟಿಕೆಟ್
Team Udayavani, Jan 12, 2025, 8:48 PM IST
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಕುರಿತು ರವಿವಾರ ಅಸಮಾಧಾನ ಹೊರಬಿದ್ದಿದ್ದು, ದೆಹಲಿ ಘಟಕದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಾಗಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಕೈತಪ್ಪಿದ ಕರ್ವಾಲ್ ನಗರದ ಶಾಸಕ ಆಕ್ರೋಶ ಹೊರ ಹಾಕಿದ್ದಾರೆ.
ದಕ್ಷಿಣ ದೆಹಲಿಯ ತುಘಲಕಾಬಾದ್‌ನಿಂದ ಬಂದ ಪ್ರತಿಭಟನಾಕಾರರ ಗುಂಪು ದೆಹಲಿಯ ಬಿಜೆಪಿ ಕಚೇರಿಯ ಗೇಟ್‌ನಲ್ಲಿ ಧರಣಿ ನಡೆಸಿತು, ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸುವಂತೆ ಒತ್ತಾಯಿಸಿತು.
“ವಿಕ್ರಮ್ ಬಿಧುರಿ ತುಮ್ ಸಂಘರ್ಷ್ ಕರೋ; ಮೋದಿ ಸೇ ಬೈರ್ ನಹೀ, ರೋಹ್ತಾಸ್ ತೇರಿ ಖೈರ್ ನಹೀ” ಎಂದು ಪಕ್ಷದ ಮುಖಂಡರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಂತೆ ಬಹುತೇಕ ಯುವಕರು ಸೇರಿದಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಶನಿವಾರ ಪ್ರಕಟವಾದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ, ರೋಹ್ತಾಸ್ ಬಿಧುರಿ ತುಘಲಕಾಬಾದ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
2020 ರ ಚುನಾವಣೆಯಲ್ಲಿ, ಪಕ್ಷದ ಹಿರಿಯ ನಾಯಕ ರಮೇಶ್ ಬಿಧುರಿ ಅವರ ಸಂಬಂಧಿ ವಿಕ್ರಮ್ ಬಿಧುರಿ ಅವರು ಎಎಪಿಯ ಸಾಹಿರಾಮ್ ವಿರುದ್ಧ 13,000 ಮತಗಳಿಂದ ಸೋತಿದ್ದರು.
ಈ ತಿಂಗಳ ಆರಂಭದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ನಂತರ ಮೆಹ್ರೌಲಿ ಅಭ್ಯರ್ಥಿ ಗಜೈಂದರ್ ಯಾದವ್ ವಿರುದ್ಧ ದೆಹಲಿ ಬಿಜೆಪಿ ಕಚೇರಿಯ ಹೊರಗೆ ಕೆಲವು ಪಕ್ಷದ ಕಾರ್ಯಕರ್ತರು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು.
ಕರ್ವಾಲ್ ನಗರದಿಂದ ಐದು ಬಾರಿ ಆಯ್ಕೆಯಾದ ಬಿಜೆಪಿಯ ಹಿರಿಯ ಶಾಸಕ ಮೋಹನ್ ಸಿಂಗ್ ಬಿಷ್ತ್ ಅವರು ತಮ್ಮ ಭದ್ರಕೋಟೆಯಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗಿನ ಸಭೆಯ ನಂತರ ಅವರು ಸಮಾಧಾನಗೊಂಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
“ನೀವು ಉತ್ತರಾಖಂಡಿ ಸಮುದಾಯಕ್ಕೆ ಸವಾಲು ಹಾಕಿದ್ದೀರಿ, ಮೋಹನ್ ಸಿಂಗ್ ಬಿಷ್ತ್ ಅಲ್ಲ. ಈ ನಿರ್ಧಾರದಿಂದ ಕರವಾಲ್ ನಗರ, ಬುರಾರಿ, ಮುಸ್ತಫಾಬಾದ್ ಮತ್ತು ಗೋಕಲ್‌ಪುರಿ ಸೇರಿದಂತೆ ಬಿಜೆಪಿ ಕನಿಷ್ಠ 8-10 ಸ್ಥಾನಗಳನ್ನು ಕಳೆದುಕೊಳ್ಳಲಿದೆ,” ಎಂದು ಬಿಷ್ತ್ ಎಚ್ಚರಿಸಿದ್ದಾರೆ.
2020 ರ ವಿಧಾನಸಭಾ ಚುನಾವಣೆಯ ನಂತರ ಭಾರೀ ಕೋಮುಗಲಭೆಯಿಂದ ನಲುಗಿದ್ದ ಈಶಾನ್ಯ ದೆಹಲಿಯ ಕರ್ವಾಲ್ ನಗರದಿಂದ ಹಿಂದುತ್ವವಾದಿ ಕಪಿಲ್ ಮಿಶ್ರಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ದಿಲ್ಲಿಯಲ್ಲಿ ಗೆದ್ದರೆ ನಿರುದ್ಯೋಗಿಗಳಿಗೆ ಮಾಸಿಕ 8,500: ಕಾಂಗ್ರೆಸ್ ಭರವಸೆ
Delhi ಚುನಾವಣೆ ಎದುರಿಸಲು ಧನಸಹಾಯ ಮಾಡಿ: ದಿಲ್ಲಿ ಸಿಎಂ ಆತಿಶಿ
ಕೊಳೆಗೇರಿ ಜಾಗಗಳನ್ನು ಕಸಿಯಲಿರುವ ಬಿಜೆಪಿ: ಕೇಜ್ರಿವಾಲ್ ಆರೋಪ
Kerala: ಬಾಲ ಆ್ಯತ್ಲೀಟ್ ರೇಪ್: 14 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
Sanjay Rawat: “ಐಎನ್‌ಡಿಐಎ’ ಕೂಟ, ಅಘಾಡಿ ವಿಸರ್ಜಿಸಬೇಕು ಎಂದಿಲ್ಲ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.