Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ
ತತ್‌ಕ್ಷಣ ಆರೋಪಿಗಳ ಸೆರೆ ಹಿಡಿಯಲು ಸೂಚಿಸಿದ ಸಚಿವ ಜಮೀರ್ ಅಹ್ಮದ್
Team Udayavani, Jan 12, 2025, 11:24 PM IST
ಹೊಸಪೇಟೆ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಹಿಂಸೆ ನೀಡಿರುವ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ, ಅವರನ್ನು ಪತ್ತೆ ಹಚ್ಚಿ ಕಠಿನ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರವಿವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ಈ ಪ್ರಕರಣದ ತಪ್ಪಿತಸ್ಥರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಈ ಪ್ರಕರಣ ಕುರಿತು ಹಿಂದೂ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದರು.
ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಯಾರೇ ಕೃತ್ಯ ಎಸಗಿದ್ದರು ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಸುದ್ದಿಗಾರರಿಗೆ ತಿಳಿಸಿದರು.
ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅವರು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಚಿವ ಜಮೀರ್ ಭೇಟಿ, ಘೋರ ಶಿಕ್ಷೆಗೆ ಸೂಚನೆ
ಚಾಮರಾಜಪೇಟೆ ವಿನಾಯಕ ನಗರದಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಕ್ಷೇತ್ರದ ಶಾಸಕರೂ ಆದ ಸಚಿವ ಜಮೀರ್ ಅಹಮದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೊಂದು ಅಕ್ಷಮ್ಯ ಅಪರಾಧ. ನಾಗರಿಕ ಸಮಾಜ ತಲೆತಗ್ಗಿಸಬೇಕಾದ ವಿಚಾರ ಎಂದರಲ್ಲದೆ, ತತ್‌ಕ್ಷಣ ಆರೋಪಿಗಳನ್ನು ಸೆರೆ ಹಿಡಿಯಬೇಕು ಎಂದು ಪೊಲೀಸರಿಗೆ ಸೂಚಿಸಿದರು. ಕೃತ್ಯ ಯಾರೇ ಮಾಡಿರಲಿ, ದುಷ್ಕರ್ಮಿಗಳಿಗೆ ಘೋರ ಶಿಕ್ಷೆ ಆಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.