ಅಂಡರ್-19 ವನಿತಾ ಕ್ರಿಕೆಟ್ ಇರಾ ಜಾಧವ್ 346
Team Udayavani, Jan 12, 2025, 11:53 PM IST
ಆಲೂರು: ಅಂಡರ್-19 ಏಕದಿನ ಟ್ರೋಫಿ ವನಿತಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಬಯಿಯ 14 ವರ್ಷದ ಆಟಗಾರ್ತಿ ಇರಾ ಜಾಧವ್ ಅಜೇಯ 346 ರನ್ ಬಾರಿಸಿ ಸುದ್ದಿಯಾಗಿದ್ದಾರೆ. ಆದರೆ ಇದು ದಾಖಲಾದದ್ದು ದುರ್ಬಲ ಮೇಘಾಲಯದ ಎದುರು.
ಇರಾ ಜಾಧವ್ 157 ಎಸೆತಗಳಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 42 ಬೌಂಡರಿ ಹಾಗೂ 16 ಸಿಕ್ಸರ್. ಇರಾ ಪರಾಕ್ರಮದಿಂದ ಮುಂಬಯಿ 3ಕ್ಕೆ 563 ರನ್ ಪೇರಿಸಿತು. ಜವಾಬಿತ್ತ ಮೇಘಾಲಯ ಕೇವಲ 19 ರನ್ನಿಗೆ ಆಲೌಟಾಗಿ 544 ರನ್ನುಗಳ ಸೋಲನುಭವಿಸಿತು. 6 ಆಟಗಾರ್ತಿಯರು ಖಾತೆ ತೆರೆಯಲು ವಿಫಲರಾದರು.
ಇರಾ ಜಾಧವ್ ಮುಂಬಯಿಯ ಶಾರದಾಶ್ರಮ ವಿದ್ಯಾಮಂದಿರ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿನಿ. ಕಳೆದ ಡಬ್ಲ್ಯುಪಿಎಲ್ ಹರಾಜು ಕಣದಲ್ಲಿದ್ದ ಅತೀ ಕಿರಿಯ ಆಟಗಾರ್ತಿ ಆಗಿದ್ದರು. ಆದರೆ ಮಾರಾಟವಾಗದೇ ಉಳಿದರು. ಬಳಿಕ ಅಂಡರ್-19 ಟಿ20 ವಿಶ್ವಕಪ್ ತಂಡದ ಮೀಸಲು ಆಟಗಾರ್ತಿಯಾಗಿ ಮಲೇಷ್ಯಾಕ್ಕೆ ತೆರಳಿದ್ದರು.
ವನಿತಾ ಅಂಡರ್-19 ಕ್ರಿಕೆಟ್‌ನಲ್ಲಿ ಸರ್ವಾಧಿಕ ವೈಯಕ್ತಿಕ ಗಳಿಕೆಯ ದಾಖಲೆ ದಕ್ಷಿಣ ಆಫ್ರಿಕಾದ ಲಿಝೆಲ್ ಲೀ ಹೆಸರಲ್ಲಿದೆ (427 ರನ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahakumbh: ಇಂದಿನಿಂದ ಮಹಾಕುಂಭಮೇಳ ಸಂಭ್ರಮ; ಮೇಳಕ್ಕೆ ಉ.ಪ್ರದೇಶ ಸರಕಾರದಿಂದ ಸಕಲ ಸಿದ್ಧತೆ
Uttarakhand: ಕಮರಿಗೆ ಬಿದ್ದವನ ರಕ್ಷಿಸಲು 20 ಕಿ.ಮೀ.ನಡೆದರು!
Cast Census: ಜಾತಿಗಳ ಸಮಸ್ಯೆಗೆ ಸಿಎಂ ಪರಿಹಾರವೇನು?: ಎಚ್.ಡಿ.ಕುಮಾರಸ್ವಾಮಿ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.