Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Team Udayavani, Jan 13, 2025, 6:45 AM IST
ಮುಂಬಯಿ: ಮುಂಬ ಯಿಯ ಪ್ರತಿಷ್ಠಿತ “ವಾಂಖೇಡೆ ಸ್ಟೇಡಿಯಂ’ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. 50ನೇ ವರ್ಷದ ಸವಿನೆನಪಿಗಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜ. 19ರಂದು ಪ್ರಧಾನ ಕಾರ್ಯಕ್ರಮ ಏರ್ಪಡಲಿದೆ.
ರವಿವಾರದ ಸಮಾರಂಭದಲ್ಲಿ ಮುಂಬಯಿಯ ಕೆಲವು ಖ್ಯಾತ ಕ್ರಿಕೆಟಿಗ ರನ್ನು ಗೌರವಿಸಲಾಯಿತು. ಇವರಲ್ಲಿ ಸುನೀಲ್ ಗಾವಸ್ಕರ್, ವಿನೋದ್ ಕಾಂಬ್ಳಿ ಮೊದಲಾದವರು ಸೇರಿದ್ದರು.
ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮ, ದಿಲೀಪ್ ವೆಂಗ್‌ಸರ್ಕಾರ್, ರವಿ ಶಾಸಿŒ, ಅಜಿಂಕ್ಯ ರಹಾನೆ, ಟಿ20 ನಾಯಕ ಸೂರ್ಯಕುಮಾರ್ ಯಾದವ್, ವನಿತಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರೂ ಈ ಸಮ್ಮಾನ ಸಮಾರಂಭದ ಭಾಗವಾಗಿರಲಿದ್ದಾರೆ. ವಾಂಖೇಡೆಯ ಗ್ರೌಂಡ್ಸ್‌ಮನ್, ವಾಂಖೇಡೆಯಲ್ಲಿ ಮೊಟ್ಟಮೊದಲ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವಾಡಿದ ಮುಂಬಯಿ ಆಟಗಾರರನ್ನೂ ಸಮ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ಮಾತಾಡಿದ ಸುನೀಲ್ ಗಾವಸ್ಕರ್, “ಓರ್ವ ಆರಂಭಕಾರನಾಗಿ ನಾನು ಈ ಕಾರ್ಯಕ್ರಮದ ಆರಂಭಕ್ಕೆ ಸಾಕ್ಷಿಯಾಗಲೇಬೇಕಿತ್ತು. ಅದಕ್ಕಾಗಿ ಇಂದು ಇಲ್ಲಿದ್ದೇನೆ’ ಎಂದು ತಮಾಷೆ ಮಾಡಿದರು.
“ಈ ಐತಿಹಾಸಿಕ ಕ್ರೀಡಾಂಗಣ ಭಾರತೀಯ ಕ್ರಿಕೆಟಿಗೆ ಅದೆಷ್ಟೋ ಕೊಡುಗೆಗಳನ್ನು ನೀಡಿದೆ. 2011ರ ಏಕದಿನ ವಿಶ್ವಕಪ್ ಗೆಲುವು ಇದರಲ್ಲೊಂದು. ವಾಂಖೇಡೆ ಕ್ರೀಡಾಂಗಣ ನನ್ನ ಪಾಲಿನ ಗೌರವ ಹಾಗೂ ಹೆಮ್ಮೆ’ ಎಂಬುದಾಗಿ ಗಾವಸ್ಕರ್ ಹೇಳಿದರು. ಇವರಿಗೆ ಎಂಸಿಎ ಅಧ್ಯಕ್ಷ ಅಜಿಂಕ್ಯ ನಾೖಕ್ ಸ್ಮರಣಿಕೆ ನೀಡಿ ಗೌರವಿಸಿದರು.
1974ರಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೇಡೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಸುನೀಲ್ ಗಾವಸ್ಕರ್ ಕೂಡ ಈ ಪಂದ್ಯದಲ್ಲಿ ಆಡಿದ್ದರೆಂಬುದು ವಿಶೇಷ.
“ನನ್ನ ಪಾಲಿನ ಸರ್ವಸ್ವ’
“ವಾಂಖೇಡೆ ನನಗೆ ಸರ್ವಸ್ವವನ್ನೂ ನೀಡಿದೆ. ನನ್ನನ್ನು ಮೇಲೆತ್ತಿದ್ದೇ ಎಂಸಿಎ. ಇಂಗ್ಲೆಂಡ್ ವಿರುದ್ಧ ಇಲ್ಲಿ ಬಾರಿಸಿದ ಮೊದಲ ದ್ವಿಶತಕ ಸ್ಮರಣೀಯ. ನನ್ನ ಕ್ರಿಕೆಟ್ ಬಾಳ್ವೆಯ ಅನೇಕ ಶತಕಗಳಿಗೆ ಇದು ಸ್ಫೂರ್ತಿಯಾಯಿತು. ಕಠಿನ ಪರಿಶ್ರಮದಿಂದಷ್ಟೇ ಜಾಗತಿಕ ಕ್ರಿಕೆಟ್‌ನಲ್ಲಿ ಮೇಲೇರಲು ಸಾಧ್ಯ’ ಎಂದು ವಿನೋದ್ ಕಾಂಬ್ಳಿ ಹೇಳಿದರು. ಕಾಂಬ್ಳಿ ಇತ್ತೀಚೆಗಷ್ಟೇ ಚೇತರಿಸಿಕೊಂಡು ಐಸಿಯುನಿಂದ ಬಿಡುಗಡೆಗೊಂಡಿದ್ದರು. ಇವರನ್ನು ಮಾಜಿ ಆರಂಭಕಾರ ವಾಸಿಮ್ ಜಾಫರ್ ಸಮ್ಮಾನಿಸಿದರು.
ಮುಂಬಯಿ ಕ್ರಿಕೆಟಿಗೆ ಪ್ರೋತ್ಸಾಹ ನೀಡಿದ ಕ್ರೀಡಾ ಪತ್ರಕರ್ತರನ್ನೂ ಗೌರವಿಸಲಾಯಿತು. ಸಂಜಯ್ ಮಾಂಜ್ರೆàಕರ್, ಪೃಥ್ವಿ ಶಾ, ರಾಜು ಕುಲಕರ್ಣಿ, ಚಂದ್ರಕಾಂತ್ ಪಂಡಿತ್, ಲಾಲ್‌ಚಂದ್ ರಜಪೂತ್ ಮೊದಲಾದ ಮುಂಬಯಿ ಕ್ರಿಕೆಟಿಗರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ
Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ
Bengaluru: ಟ್ರಕ್ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು
Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.