Mahakumbh: ಇಂದಿನಿಂದ ಮಹಾಕುಂಭಮೇಳ ಸಂಭ್ರಮ; ಮೇಳಕ್ಕೆ ಉ.ಪ್ರದೇಶ ಸರಕಾರದಿಂದ ಸಕಲ ಸಿದ್ಧತೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ಧಾರ್ಮಿಕ ಆಚರಣೆ |
Team Udayavani, Jan 13, 2025, 7:10 AM IST
ಪ್ರಯಾಗ್‌ರಾಜ್: ಭೂಮಿ ಮೇಲೆ ಅತೀಹೆಚ್ಚು ಜನ ಒಂದೆಡೆ ಸೇರುವ ಅತೀದೊಡ್ಡ ಆಚರಣೆ ಎಂಬ ಖ್ಯಾತಿಗೆ ಪಾತ್ರವಾದ ಮಹಾಕುಂಭಮೇಳ ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಲಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮ ದಲ್ಲಿ ಪುಣ್ಯ ಸ್ನಾನ ಮಾಡಲು ಈಗಾಗಲೇ ಲಕ್ಷಾಂತರ ಜನ ಪ್ರಯಾಗ್‌ರಾಜ್‌ನಲ್ಲಿ ಸೇರಿದ್ದಾರೆ.
ಕುಂಭಮೇಳ ಆರಂಭವಾಗುವುದಕ್ಕೆ 2 ದಿನ ಬಾಕಿ ಯಿದ್ದರೂ ಶನಿವಾರವೇ 25 ಲಕ್ಷ ಮಂದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸೋಮವಾರದ ದಿನ ಮೊದಲ ಶಾಹಿ ಸ್ನಾನ ನಡೆಯಲಿದ್ದು, ಇದರಲ್ಲಿ ಭಾಗಿಯಾಗಲು ಈಗಾಗಲೇ ಜನ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದ್ದಾರೆ.
ಸಕಲ ಸಿದ್ಧತೆ: ಮಹಾಕುಂಭದಲ್ಲಿ ಭಾಗಿಯಾಗಲು ಆಗಮಿಸುವ ಸಂತರು, ಸಾಧುಗಳು, ಸಾಮಾನ್ಯ ಜನರನ್ನು ಸ್ವಾಗತಿಸಲು ಪ್ರಯಾಗ್‌ರಾಜ್‌ನಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಮಹಾಕುಂಭ ಹೆಸರಿನಲ್ಲಿ ನಗರವನ್ನು ಸ್ಥಾಪನೆ ಮಾಡಲಾಗಿದೆ.
ಬಿಗಿ ಭದ್ರತೆ: ಮಹಾ ಕುಂಭದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಹಾಕುಂಭ ನಗರದಲ್ಲಿ 55 ಪೊಲೀಸ್ ಠಾಣೆಗಳನ್ನು ತೆರೆಯಲಾಗಿದ್ದು, 50,000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪಾರಿವಾಳ ಬಾಬಾ ಆಗಮನ
ಕಳೆದ 9 ವರ್ಷಗಳಿಂದ ತನ್ನ ತಲೆಯ ಮೇಲೆ ಪಾರಿವಾಳವೊಂದನ್ನು ಇಟ್ಟುಕೊಂಡು ಓಡಾಡುತ್ತಿರುವ ಸಂತ ಮಹಾಂತ ರಾಜ್‌ಪುರಿ ಮಹಾರಾಜ್ ಅವರು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಇವರು ಜುನಾ ಅಖಾಡದ ಸದಸ್ಯರಾಗಿದ್ದು, ಜನರ ನಡುವೆ ಪಾರಿವಾಳ ಬಾಬಾ ಎಂದೇ ಪರಿಚಿತರಾಗಿದ್ದಾರೆ.
100 ಅಡಿ ರಾಷ್ಟ್ರಧ್ವಜ ಮೆರವಣಿಗೆ
ಮಹಾಕುಂಭದಲ್ಲಿ ಭಾಗಿಯಾಗಲು ಆಗಮಿಸಿದ ಶ್ರೀ ಪಂಚಾಯಿತಿ ಅಖಾಡದ ಸಾಧುಗಳು ರವಿವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಅವರು 100 ಅಡಿ ಉದ್ದದ ರಾಷ್ಟ್ರಧ್ವಜವನ್ನು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಇದು ಸಾಕಷ್ಟು ಜನರ ಗಮನ ಸೆಳೆಯಿತು.
ಏಕ ಚುನಾವಣೆ ಉಪನ್ಯಾಸ
ಪ್ರಯಾಗ್‌ರಾಜ್‌ನಲ್ಲಿ ಹರಿದ್ವಾರ ಮೂಲದ ಸಂಘಟನೆ ಯೊಂದು “ಒಂದು ದೇಶ ಒಂದು ಚುನಾವಣೆ’ ಸೇರಿ 7 ವಿಷಯಗಳ ಬಗ್ಗೆ ಉಪನ್ಯಾಸ ಏರ್ಪಡಿಸಿದೆ. ಏಕ ಚುನಾವಣೆಯ ಬಗ್ಗೆ ಜ.18ರಂದು ಉಪನ್ಯಾಸ ನಡೆಯಲಿದ್ದು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದರಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಆ್ಯಪಲ್ ಸಂಸ್ಥಾಪಕ ಸ್ಟೀವ್ ಪತ್ನಿ
ಲಾರೆನ್ ಹೆಸರು ಈಗ ಕಮಲಾ
ವಾರಾಣಸಿ: ಮಹಾಕುಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗ ಮಿಸಿರುವ ಆ್ಯಪಲ್ ಸಂಸ್ಥಾಪಕ ದಿ| ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವಲ್ ಜಾಬ್ಸ್ ಶನಿವಾರ ಕಾಶಿ ವಿಶ್ವನಾಥನ ದರ್ಶನ ಪಡೆದರು.
ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಕೈಲಾಶನಂದ ಗಿರಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು. ಆಚಾರ್ಯ ಅವರು ಲಾರೆನ್ ಅವರನ್ನು ತಮ್ಮ ಪುತ್ರಿಯೆಂದು ಹೇಳಿದ್ದು, ನನ್ನ ಗೋತ್ರಕ್ಕೆ ಆಕೆಯನ್ನು ಸೇರಿಸಿದ್ದು ಕಮಲಾ ಎಂದು ನಾಮಕರಣ ಮಾಡಿದ್ದೇನೆ. ಆಕೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದು, ಸೋಮವಾರ ಆರಂಭ ವಾ ಗಲಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳಲಿದ್ದಾಳೆ ಎಂದರು. ಅವರು 1 ತಿಂಗಳ ಕಾಲ “ಪತ್ನಿ ವ್ರತ’ ಕೈಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.