Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್
ಮಣಿಪಾಲ ಸಮೂಹ ಸಂಸ್ಥೆಗಳ ಹೊಸವರ್ಷದ ಪ್ರಶಸ್ತಿ ಸ್ವೀಕರಿಸಿ ಡಾ| ಮೋಹನ ರಾವ್
Team Udayavani, Jan 13, 2025, 1:56 AM IST
ಮಣಿಪಾಲ: ಧೂಮಪಾನ ಮತ್ತು ಮದ್ಯಪಾನ ಮಾನವ ಶರೀರ ಸ್ವಾಸ್ಥ್ಯದ ಶತ್ರುಗಳು. ನಾವೀಗ ದುಡ್ಡು ಖರ್ಚು ಮಾಡಿ ವಿಷ ಸೇವನೆ ಮಾಡುತ್ತಿದ್ದೇವೆ ಎಂದು ಹೊಸಕೋಟೆ ಎಂವಿಜೆ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ, ಬೆಂಗಳೂರು ಟೈಟಾನ್ ಕಂಪೆನಿಯ ವೈದ್ಯಕೀಯ ಸಲಹೆಗಾರ ಡಾ| ಪಿ. ಮೋಹನ ರಾವ್ ಕಳವಳ ವ್ಯಕ್ತಪಡಿಸಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ), ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ.(ಎಂಎಂಎನ್‌ಎಲ್) ಹಾಗೂ ಡಾ| ಟಿಎಂಎ ಪೈ ಫೌಂಡೇಶನ್ ವತಿಯಿಂದ ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ಹೊಸ ವರ್ಷದ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೈಗೆಟಕುವ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಆದಾಯ ಗುಂಪುಗಳ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಜೀವನಮಟ್ಟವನ್ನು ಸುಧಾರಿಸಿದ ಕೀರ್ತಿ ಡಾ|ಟಿಎಂಎ ಪೈಯವರಿಗೆ ಸಲ್ಲುತ್ತದೆ.
ಆದ್ದರಿಂದಲೇ ಇಲ್ಲಿ ದಶಕಗಳ ಕಾಲಘಟ್ಟದಿಂದ ದೇಶಕ್ಕೇ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು ಬೀರಿವೆ ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಿವೃತ್ತ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ತೆಕ್ಕಾರು ಯಶವಂತ ಪ್ರಭು ಹೇಳಿದರು. ಜ್ಞಾನವನ್ನು ಪಡೆದುಕೊಂಡು ಕೌಶಲವನ್ನು ವೃದ್ಧಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಎನ್ನುವುದನ್ನು ನನ್ನ ಹಿರಿಯ ಸಹೋದ್ಯೋಗಿಗಳು ನನಗೆ ಕಲಿಸಿ ಕೊಟ್ಟರು. ಇದೇ ಮಂತ್ರವನ್ನು ನಮ್ಮ ಮುಂದಿನ ಪೀಳಿಗೆಯವರೂ ಅನುಸರಿಸ ಬೇಕು ಎಂದು ಪ್ರಭು ಹೇಳಿದರು.
2018ರಲ್ಲೇ ಆಮಂತ್ರಿಸಿದ್ದರು
2018ರಲ್ಲಿ ನನಗೆ ಇದೇ ಪ್ರಶಸ್ತಿಯನ್ನು ಸ್ವೀಕರಿಸಲು ಡಾ| ರಾಮದಾಸ್ ಪೈಯವರು ಆಮಂತ್ರಣ ನೀಡಿದ್ದರು. ಆಗ ನಾನು ಲೋಕಾಯುಕ್ತ ಹುದ್ದೆಯಲ್ಲಿದ್ದೆ. ಆ ಹುದ್ದೆಯಲ್ಲಿರುವಾಗ ಪ್ರಶಸ್ತಿ ಸ್ವೀಕರಿಸುವುದು ಬೇಡವೆಂದೆ. ನಿವೃತ್ತಿಯಾದ ಬಳಿಕ ಈಗ ಮತ್ತೆ ಪ್ರೀತಿಯಿಂದ ಕರೆದು ಪ್ರಶಸ್ತಿ ನೀಡಿರುವುದಕ್ಕೆ ಕೃತಜ್ಞನಾಗಿದ್ದೇನೆಂದು ನಿವೃತ್ತ ಲೋಕಾಯುಕ್ತ ನ್ಯಾ|ಮೂ| ಪಿ.ವಿಶ್ವನಾಥ ಶೆಟ್ಟಿ ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರದ ನಿರ್ದೇಶಕಿ ಡಾ| ವಸುಂಧರಾ ದೊರೆಸ್ವಾಮಿಯವರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.
ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಎಂಎಂಎನ್‌ಎಲ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ, ಡಾ| ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಟಿ.ಅಶೋಕ್ ಪೈ, ಎಜಿಇ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ|ಎಂ.ಡಿ.ವೆಂಕಟೇಶ್ ಅವರು ಸಾಧಕರಿಗೆ ಹೊಸವರ್ಷದ ಪ್ರಶಸ್ತಿ ನೀಡಿ ಗೌರವಿಸಿದರು. ಡಾ| ಎಚ್.ಎಸ್.ಬಲ್ಲಾಳ್ ಸ್ವಾಗತಿಸಿ, ಲೆ| ಜ| ಡಾ|ಎಂ.ಡಿ.ವೆಂಕಟೇಶ್ ಅಭಿನಂದಿಸಿ ದರು. ಮಾಹೆ ಸಹಕುಲಪತಿ ಡಾ| ನಾರಾಯಣ ಸಭಾಹಿತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.