Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

ಸಂತರ ಒಟ್ಟು 13 ಅಖಾಡಗಳು ಮೇಳದಲ್ಲಿ  ಭಾಗಿ­

Team Udayavani, Jan 14, 2025, 1:15 AM IST

Mahakumbaha1

ಧಾರ್ಮಿಕ ಆಚರಣೆ, ಸಂಪ್ರದಾಯ, ಸಾಧನೆ, ಜೋತಿಷ, ಖಗೋಳಶಾಸ್ತ್ರ, ಭಕ್ತಿ ಮತ್ತು ಜ್ಞಾನದ ಮಹಾ ಸಮ್ಮಿಲನವೇ ಕುಂಭಮೇಳ. 2025ನೇ ಸಾಲಿನ ಕುಂಭ­ಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದ್ದು, ಹಠಯೋಗಿಗಳು, ಸಾಧುಗಳು, ಅಘೋರಿಗಳು, ಸನ್ಯಾಸಿಗಳು ಹಾಗೂ ಭಕ್ತರು ಆಗಮಿಸಿ ಈ ಮಹಾ ಆಚರ­ಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 144 ವರ್ಷಗಳಿಗೆ ಒಮ್ಮೆ ಮಾತ್ರ ನಡೆಯುವ ಮಹಾ ಕುಂಭಮೇಳ ಈ ಬಾರಿ ಘಟಿಸುತ್ತಿದೆ.

ಕುಂಭಮೇಳ ಎಂದರೇನು?
ಕುಂಭ ಎಂದರೆ ಮಡಿಕೆ ಹಾಗೂ ಮೇಳ ಎಂದರೆ ಒಗ್ಗೂಡುವುದು ಎಂದರ್ಥ. ಪುರಾಣಗಳ ಪ್ರಕಾರ, ಅಮೃತಕಲಶದ ಬಿಂದು ಬಿದ್ದು ಸೃಷ್ಟಿಯಾದ 4 ಜಾಗಗಳಲ್ಲಿ ಅಮೃತರೂಪದ ನದಿಗಳು ಹುಟ್ಟಿದವಂತೆ. ಆ ಜಾಗದಲ್ಲಿ ಹಿಂದೂ ಪಂಚಾಂಗದಂತೆ ರಾಶಿ- ನಕ್ಷತ್ರಗಳು ಕೂಡಿಬಂದ ದಿನದಂದು ದೈವಿಕಶಕ್ತಿಯ ಚಲನೆ ಯಾಗುತ್ತದೆ.

ಹೀಗಾಗಿ ಆ ದಿನದಂದು ಸಾಧುಗಳು, ಸಂತರು, ಭಕ್ತರು ಒಗ್ಗೂಡಿ ಪುಣ್ಯಸ್ನಾನ ಮಾಡಿ, ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹೀಗೆ ಎಲ್ಲರೂ ಒಗ್ಗೂಡಿ ನಡೆಸುವ ಮಹಾ ಮೇಳವೇ ಕುಂಭ ಮೇಳ. ಮತ್ತೂಂದು ಮೂಲಗಳು ಭಾರತೀಯ ಉಪಖಂಡದಾದ್ಯಂತ ಹಿಂದೂ ಮಠಗಳು, ಸಾಧುಗಳು, ಸಂತರನ್ನು ಒಗ್ಗೂಡಿಸಿ ತಾತ್ವಿಕ ಚರ್ಚೆಗಳನ್ನು ನಡೆಸಲೆಂದು 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಈ ಆಚರಣೆ ಶುರುವಾಯಿತು.

12 ವರ್ಷಕ್ಕೆ ಪೂರ್ಣ ಕುಂಭ
ಕುಂಭಮೇಳ, ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ ಮತ್ತು ಮಹಾ ಕುಂಭಮೇಳ ಎಂಬ ನಾಲ್ಕು ವಿಧಗಳಿವೆ. ಪ್ರತೀ 3 ವರ್ಷದ ಮೇಳವನ್ನು “ಕುಂಭಮೇಳ’ ಎನ್ನಲಾಗುತ್ತದೆ. 6 ವರ್ಷ­ಕ್ಕೆ ಒಮ್ಮೆ ನಡೆಯುವುದು “ಅರ್ಧ ಕುಂಭಮೇಳ’. 12 ವರ್ಷಕ್ಕೆ ಒಮ್ಮೆ ನಡೆಯುವುದು “ಪೂರ್ಣ ಕುಂಭ.’ ಜತೆಗೆ, ಗುರು ಗ್ರಹವು ಸೂರ್ಯನನ್ನು ಸುತ್ತಿ ಬರಲು 12 ವರ್ಷ ಬೇಕು. ಹಾಗಾಗಿ, ಗ್ರಹಗತಿ ಆಧಾರದ ಮೇಲೆ 12 ವರ್ಷಕ್ಕೆ ಪೂರ್ಣ ಕುಂಭ ನಡೆಯುತ್ತದೆ.

144 ವರ್ಷಕ್ಕೆ ಮಹಾ ಕುಂಭ
ಪುರಾಣದ ಪ್ರಕಾರ, ಸಮುದ್ರ ಮಂಥನದಲ್ಲಿ ದೊರೆತ ಅಮೃತ ಕಲಶವು ಅಸುರರಿಗೆ ಸಿಗದಂತೆ ಇಂದ್ರನ ಮಗ ಜಯಂತನು ತೆಗೆದುಕೊಂಡು ಓಡಿ ಹೋಗುತ್ತಾನೆ. ಆತನ ರಕ್ಷಣೆಗೆ ದೇವತೆಗಳು ಸೂರ್ಯ, ಚಂದ್ರ, ಶನಿ, ಗುರು ಗ್ರಹವನ್ನು ನಿಯೋಜಿಸುತ್ತಾರೆ. ಈ ಗ್ರಹಗಳು 144 ವರ್ಷಕ್ಕೊಮ್ಮೆ ಸರಳ ರೇಖೆಯಲ್ಲಿ ಕಾಣಿಸಿ ಕೊಳ್ಳುತ್ತವೆ. ಆ ಸಂದರ್ಭದಲ್ಲಿ ನಡೆಯುವ ಪೂರ್ಣ ಕುಂಭ ಮೇಳವೇ ಮಹಾಕುಂಭ.

4 ಸ್ಥಳದಲ್ಲಿ ಕುಂಭ ಮೇಳಗಳು
ಇಂದ್ರನ ಮಗ ಜಯಂತನು ಅಮೃತವನ್ನು ಎಲ್ಲರ ಕಣ್ತಪ್ಪಿಸಿ ತೆಗೆದುಕೊಂಡು ಹೋಗುತ್ತಿರುವಾಗ ಆತ 4 ಕಡೆ ಕುಂಭವನ್ನು ಕೆಳಗಿಟ್ಟಿದ್ದನಂತೆ. ಅಲ್ಲೇ ವಿವಿಧ ಕುಂಭ ಮೇಳಗಳು ನಡೆಯುತ್ತದೆ.

ಪ್ರಯಾಗ್‌ರಾಜ್‌: ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ (ತ್ರಿವೇಣಿ ಸಂಗಮ) ಕ್ಷೇತ್ರವಾದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಕುಂಭಮೇಳ ನಡೆ ಯುವ ಪ್ರಮುಖ ಸ್ಥಳ. 3 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳ ಸರತಿಯಂತೆ ಪ್ರಯಾಗ್‌ನಲ್ಲೂ ನಡೆಯುತ್ತದೆ. ಅದರ ಹೊರತಾಗಿ 6 ವರ್ಷಕ್ಕೊಮ್ಮೆ ಅರ್ಧ ಕುಂಭ, 12 ವರ್ಷಕ್ಕೊಮ್ಮೆ ಪೂರ್ಣ ಕುಂಭವೂ ನಡೆಯುತ್ತದೆ.

ಹರಿದ್ವಾರ: ಉತ್ತರಾಖಂಡದ ಗಂಗಾ ತಟದ ಹರಿದ್ವಾರ ದೈವಭೂಮಿ ಎಂದೇ ಕರೆಸಿಕೊಂಡಿರುವ ಸ್ಥಳ. ಕುಂಭ, ಅರ್ಧ ಕುಂಭ, ಪೂರ್ಣ ಕುಂಭ ಇಲ್ಲಿ ನಡೆಯುತ್ತದೆ. 2021 ರಲ್ಲಿ ಇಲ್ಲಿ ಕುಂಭಮೇಳ ಜರಗಿತ್ತು.

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ನ ಗೋದಾವರಿ ನದಿ ತೀರದಲ್ಲಿ ಸರತಿಯಂತೆ ಕುಂಭ ಮೇಳ ನಡೆಯುತ್ತದೆ. ಇಲ್ಲಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭವೂ ನೆರವೇರುತ್ತದೆ. 2015ರಲ್ಲಿ ನಾಸಿಕ್‌ನಲ್ಲಿ ಪೂರ್ಣಕುಂಭ ನೆರವೇರಿತ್ತು. 2027ರಲ್ಲಿ ಪೂರ್ಣಕುಂಭ ಜರಗಲಿದೆ.

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಶೈವ ಧಾರ್ಮಿಕ ಕ್ಷೇತ್ರ. ಶಿಪ್ರಾ ನದಿ ತಟದಲ್ಲಿಯೂ ಕುಂಭ ಮೇಳ ಜರಗುತ್ತದೆ. 2016ರಲ್ಲಿ ಇಲ್ಲಿ ಪೂರ್ಣಕುಂಭ ನೆರವೇರಿತ್ತು ಮತ್ತೆ 2028ರಲ್ಲಿಯೂ ಪೂರ್ಣ ಕುಂಭ ನಡೆಯಲಿದೆ.

ಕುಂಭಕ್ಕೆ ಅಖಾಡ ನೇತೃತ್ವ
ಪ್ರತೀ ಕುಂಭ ಮೇಳವನ್ನು ಆಯಾ ಅಖಾಡಗಳು ನೇತೃತ್ವ ವಹಿಸುತ್ತವೆ. ಸಂತರು, ಸಾಧುಗಳು, ವಿದ್ವಾಂಸರು, ಹಠಯೋಗಿ, ನಾಗಾ ಸಾಧುಗಳು, ಅಘೋರಿಗಳು, ಕಾಪಾಲಿಕರು ಹೀಗೆ ಸಾಧುಪರಂಪರೆಯಲ್ಲಿ ವಿಶಿಷ್ಟ ಸಾಧನೆಗೆ ಮುಂದಾಗಿರುವ ಸಂತರ ಗುಂಪುಗಳನ್ನೇ ಅಖಾಡ ಎನ್ನುತ್ತೇವೆ. ಸಂತರ ಈ ಅಖಾಡವು ಕುಂಭ ಪ್ರವೇಶಿಸುವುದೇ ವೈಭೋಗ. ಕುದುರೆ, ಆನೆ, ರಥಗಳ ಮೇಲೇರಿ ಸಾಧುಗಳು ಕುಂಭ ಪ್ರವೇಶಿಸುತ್ತಾರೆ.

ತಿಥಿ ಪ್ರಕಾರ ಸ್ಥಳ, ದಿನ ನಿಗದಿ
ನಾಲ್ಕು ಕಡೆ ಕುಂಭಮೇಳ ನಡೆಯಲು ಒಂದೊಂದು ಮುಹೂರ್ತ ಇದೆ. ಗುರು ಗ್ರಹವು ಕುಂಭ ರಾಶಿಗೆ ಮತ್ತು ಸೂರ್ಯ ಮೇಷ ರಾಶಿ ಪ್ರವೇಶಿ­ಸಿದಾಗ ಉತ್ತ­ರಾಖಂಡದ ಹರಿದ್ವಾರದಲ್ಲಿ ಕುಂಭ ನಡೆಯುತ್ತದೆ. ಅಮಾವಾಸ್ಯೆ ದಿನ ಗುರು ಮತ್ತು ಸೂರ್ಯ ಮೇಷ ರಾಶಿ ಪ್ರವೇಶಿಸಿ, ಚಂದ್ರ ಮಕರ ರಾಶಿ­ ಪ್ರವೇಶಿ­ಸಿದಾಗ ಪ್ರಯಾಗ್‌ರಾಜ್‌ನಲ್ಲಿ ಕುಂಭ ನಡೆಯು ತ್ತದೆ. ಜತೆಗೆ ಸೂರ್ಯ ಮಕರ ರಾಶಿಗೆ, ಗುರು ವೃಷಭ ರಾಶಿಗೆ ಪ್ರವೇಶಿಸಿ­ದಾಗಲೂ ಪ್ರಯಾ­ಗದಲ್ಲಿ ಕುಂಭ ಜರಗುತ್ತದೆ. ಇನ್ನು ಗುರು ಗ್ರಹ ಸಿಂಹರಾಶಿಗೆ ಅಥವಾ ಅಮಾವಾಸ್ಯೆಗೆ ಗುರು, ಸೂರ್ಯ, ಚಂದ್ರ ಕರ್ಕಾಟಕ ರಾಶಿ ಗೆ ಪ್ರ­ವೇ­­­ಶಿ­ಸಿದಾಗ ನಾಸಿಕ್‌ನಲ್ಲಿ ಹಾಗೂ ಸೂರ್ಯ ಮೇಷ ರಾಶಿಗೆ ಪ್ರವೇಶಿಸಿ­ದಾಗ ಉಜ್ಜಯ­ನಿಯಲ್ಲಿ ಕುಂಭ ಘಟಿಸುತ್ತದೆ.

ಕುಂಭದ ಪೌರಾಣಿಕ ಹಿನ್ನೆಲೆ
ಪುರಾಣ ಪ್ರಕಾರ ಸಮುದ್ರ ಮಥನ ಈ ವೇಳೆ ದೊರೆತ ಅಮೃತವನ್ನು ವಿಷ್ಣು, ಮೋಹಿನಿ ರೂಪತಾಳಿ ಅಸುರರ ಕಣಿ¤ಪ್ಪಿಸಿ ಕೊಂಡೊಯ್ಯುವಾಗ ಕುಂಭದಿಂದ 4 ಹನಿ ಭೂಮಿ ಮೇಲೆ ಬಿದ್ದಿದ್ದು, ಅದೇ ಜಾಗದಲ್ಲಿ ಮೇಳ ಆಚರಿಸಲಾಗುತ್ತದೆ. ಮತ್ತೂಂದು ಕಥೆ ಪ್ರಕಾರ, ಇಂದ್ರನ ಮಗ ಜಯಂತ ಕುಂಭ ಪಡೆದುಕೊಂಡು ಓಡು­ತ್ತಾನೆ. ರಾಕ್ಷ­ಸ­ರರು ಬೆನ್ನಟ್ಟಿರುತ್ತಾರೆ. ಜಯಂತನ ಸುರಕ್ಷೆಗೆ ಸೂರ್ಯ, ಚಂದ್ರ, ಶನಿ, ಬೃಹಸ್ಪತಿ ಗ್ರಹ ನಿಲ್ಲುತ್ತಾರೆ. 12 ದಿನ ಓಡುತ್ತಲೇ ಇದ್ದ ಜಯಂತ ಈ ನಡುವೆ 4 ಸ್ಥಳಗಳಲ್ಲಿ ಕುಂಭ ಕೆಳ ಗಿಟ್ಟಿದ್ದನಂತೆ. ಆ 4 ಸ್ಥಳಗಳಲ್ಲೇ ಗ್ರಹಗಳು ವಿಶಿಷ್ಟ ರಾಶಿಗಳಲ್ಲಿ ನಿಂತು ಕುಂಭ ರಕ್ಷಿಸಿದ್ದರಂತೆ. ಆ ಸ್ಥಳಗಳಲ್ಲಿ ಕುಂಭ ನಡೆಯುತ್ತದೆ.

13 ಅಖಾಡಗಳು ಭಾಗಿ
ಸಂತರ ಒಟ್ಟು 13 ಅಖಾಡಗಳು ಮೇಳದಲ್ಲಿ  ಭಾಗಿ­ಯಾಗುತ್ತವೆ. ಈ ಪೈಕಿ ಮಹಾ ನಿರ್ವಾಣಿ, ಅಟಲ್‌, ನಿರಂಜನಿ, ಆನಂದ, ಜುನಾ, ಆವಾಹನ್‌, ಅಗ್ನಿ ಶೈವ ಅಖಾಡ­ಗಳಾದರೆ, ನಿರ್ವಾಣಿ, ದಿಗಂಬರ, ನಿರ್ಮೋಹಿ ವೈಷ್ಣವ ಅಖಾಡಗಳು. ಬಾರಾ ಪಂಚಾಯಿತಿ ಉದಾಸಿನ್‌, ಛೋಟಾ ಉದಾಸಿನ್‌, ನಿರ್ಮಲ್‌ ಸಿಖ್‌ ಅಖಾಡಗಳಿವೆ.

ಪಾಪ ಕಳೆಯುವ ಶಾಹಿಸ್ನಾನ
ಕುಂಭಮೇಳದ ಆಚರಣೆಗಳ ಪೈಕಿ ಶಾಹಿಸ್ನಾನಕ್ಕೆ ವಿಶೇಷ ಸ್ಥಾನವಿದೆ. ಸಾಧು, ಸಂತರು ಪುಣ್ಯತಿಥಿಯಂದು ಅಮೃತ ಬಿಂದುವಿನಿಂದ ಸೃಷ್ಟಿಯಾದ ನದಿಗಳಲ್ಲಿ ಮಿಂದೇ­ಳುವ ಪ್ರಕ್ರಿಯೆಯೇ ಶಾಹಿಸ್ನಾನ. ಸಂತರೆಲ್ಲರೂ ನದಿಯಲ್ಲಿ ಮಿಂದೇಳುತ್ತಾರೆ. ಅಘೋರಿಗಳು ಕತ್ತಿ ಝಳಿಪಿಸುತ್ತಾ ಭೋಲೇನಾಥ ಎನ್ನುತ್ತಾ ಮೀಯುತ್ತಾರೆ. ಭಕ್ತರೂ ಶಾಹಿಸ್ನಾನದ ದಿನಗಳಲ್ಲಿ ಕುಂಭಕ್ಕೆ ಆಗಮಿಸಿ, ನದಿಗಳಲ್ಲಿ ಮಿಂದೇಳುತ್ತಾರೆ. ಇದರಿಂದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ. ಮಿಂದವರಿಗೂ, ಅವರ ಪೂರ್ವ­ಜರಿ­ಗೂ ಮುಕ್ತಿ ಸಿಗು­ತ್ತದೆ ಎಂಬ ಪ್ರತೀತಿ ಇದೆ. ಕುಂಭ ನಡೆವ ಸಂಪೂರ್ಣ ಅವಧಿಯಲ್ಲಿ ಹಲವು ಪುಣ್ಯತಿಥಿಗಳಂದು ಶಾಹಿ ಸ್ನಾನವನ್ನು ನಡೆಯುತ್ತದೆ.

ಒಂದೇ ಕುಂಭದಲ್ಲಿ 6 ಬಾರಿ ಸ್ನಾನ‌
ಜ.13 ಪುಷ್ಯ ಪೂರ್ಣಿಮೆ
ಜ.14 ಮಕರ ಸಂಕ್ರಾಂತಿ
ಜ.29 ಮೌನಿ ಅಮಾವಾಸ್ಯೆ
ಫೆ.03 ವಸಂತ ಪಂಚಮಿ
ಫೆ.12 ಮಾಘ ಪೂರ್ಣಿಮೆ
ಫೆ.26 ಮಹಾ ಶಿವರಾತ್ರಿ

– ಅಶ್ವಿ‌ನಿ .ಸಿ. ಆರಾಧ್ಯ

ಟಾಪ್ ನ್ಯೂಸ್

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

sankranti-karnataka

ನಿಸರ್ಗದ ದಿವ್ಯಾರಾಧನೆಯ ಪ್ರತೀಕ ಮಕರ ಸಂಕ್ರಾಂತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

Mahakumbha

Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.