BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್
Team Udayavani, Jan 13, 2025, 9:22 AM IST
ಬೆಂಗಳೂರು: ಬಿಗ್ ಬಾಸ್ ಮನೆಯಿಂದ 14ನೇ ವಾರ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಕಣ್ಣೀರಿಡುತ್ತಾ, ತಮ್ಮ ಪಯಣದ ಮಾತನಾಡುತ್ತಲೇ ಚೈತ್ರಾ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಚೈತ್ರಾ ಅವರ ಎಲಿಮಿನೇಷನ್ ಬಳಿಕ ಬಿಗ್ ಬಾಸ್ ಮನೆಯ ಆಟ ರೋಚಕ ಘಟ್ಟದತ್ತ ಸಾಗುತ್ತಿದೆ. ಫಿನಾಲೆಗೆ ಉಳಿದಿರೋದು ಇನ್ನು ಕೆಲವೇ ದಿನಗಳಷ್ಟೇ. ಫಿನಾಲೆಗೆ ಈಗಾಗಲೇ ಹನುಮಂತು ಅವರು ಎಂಟ್ರಿ ಪಡೆದುಕೊಂಡಿದ್ದಾರೆ. ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಶುರುವಾಗಿದೆ.
ವಾರದ ಮಧ್ಯದಲ್ಲೇ ಒಬ್ಬರು ಮನೆಯಿಂದ ಆಚೆ ಬರಲಿದ್ದಾರೆ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಟಾಸ್ಕ್ ಗೆಲ್ಲುವ ಒಬ್ಬ ಸ್ಪರ್ಧಿ ಮಿಡ್ ವೀಕ್ ಎಲಿಮಿನೇಷನ್‌ನಿಂದ ಸೇಫ್ ಆಗಲಿದ್ದಾರೆ.
ವಾರದ ಟಾಸ್ಕ್ ಗೆಲ್ಲುವ ಒಬ್ಬ ಸದಸ್ಯ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಾಲಿದ್ದಾರೆ. ಹೆಚ್ಚು ಮರದ ತುಂಡನ್ನು ನೆಟ್‌ನಲ್ಲಿ ಹೊಂದಿರುವ ಸದಸ್ಯ ಟಾಸ್ಕ್ ನಿಂದ ಹೊರಗೆ ಉಳಿಯಲಿದ್ದಾರೆ. ಈ ಅವಕಾಶವನ್ನು ಭವ್ಯಾ ಹಾಗೂ ಮೋಕ್ಷಿತಾ ಟೀಮ್ ಮಾಡಿಕೊಂಡು ಬಳಸಿದ್ದು, ರಜತ್ ಅವರನ್ನು ಟಾರ್ಗೆಟ್ ಮಾಡಿ ಮರದ ತುಂಡನ್ನು ಅವರ ಭಾವಚಿತ್ರವಿರುವ ನೆಟ್ ಒಳಗೆ ಹಾಕಿ, ಅವರನ್ನು ಟಾಸ್ಕ್‌ನಿಂದ ಹೊರಗೆ ಇಡಲು ಪ್ರಯತ್ನಿಸಿದ್ದಾರೆ.
ನನಗೆ ನೀವಿಬ್ಬರು ಮಾತನಾಡಿದ್ದೀರಿ ಅಂಥ ಚೆನ್ನಾಗಿ ಗೊತ್ತಿತ್ತು. ಆದರೆ ನಿನ್ನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲವೆಂದು ಮೋಕ್ಷಿತಾ ಮೇಲೆ ರಜತ್ ಅಸಮಾಧಾನ ಹೊರಹಾಕಿದ್ದಾರೆ.
ಸೆಮ್ಮಿ-ಫಿನಾಲೆಯಲ್ಲಿ ಮಣ್ಣು ಮುಕ್ಕಿಸೋಕೆ ಸ್ಕೆಚ್ ರೆಡಿ!ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/Jc90w663QG
— Colors Kannada (@ColorsKannada) January 13, 2025
ಟಿಕೆಟ್ ಟು ಫಿನಾಲೆಗೆ ಹೋಗಬಾರದು ಅಂಥ ನೀವು ಭವ್ಯಾ ಅವರ ಹೆಸರನ್ನು ತೆಗೆದುಕೊಳ್ಳುತ್ತೀರಿ. ನಾಮಿನೇಷನ್ ನಿಂದ ಉಳಿಯಬೇಕೆಂದು ಭವ್ಯಾ ಜತೆ ಸೇರಿ ಆಡ್ತೀರಾ ಎಂದು ತಿವಿಕ್ರಮ್ ಮೋಕ್ಷಿತಾಗೆ ಹೇಳಿದ್ದಾರೆ. ಇದಕ್ಕೆ ನಾವು ನಿಯತ್ತಾಗಿ ಆಡಿದ್ದೇವೆ ಎಂದಿದ್ದಾರೆ. ಸಮರ್ಥನೆ ಬೇಡ ನಿಮ್ಮ ಮನಸ್ಸಿಗೆ ಗೊತ್ತಿದ್ರೆ ಸಾಕು ಎಂದು ರಜತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
MUST WATCH
ಹೊಸ ಸೇರ್ಪಡೆ
Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ
Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್ ಬಳಸುವಂತಿಲ್ಲ!
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
Tollywood: ರಿಲೀಸ್ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್ʼ HD ಪ್ರಿಂಟ್ ಲೀಕ್
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.