Bengaluru: ಟ್ರಕ್ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು
Team Udayavani, Jan 13, 2025, 11:05 AM IST
ಬೆಂಗಳೂರು: ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವೇದ ಕಲಿಯಲು ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದ 12 ವರ್ಷದ ಬಾಲಕ ತನ್ನ ಹುಟ್ಟುಹಬ್ಬದ ದಿನವೇ ದುರ್ಮರಣ ಹೊಂದಿದ್ದಾನೆ. ಆಂಧ್ರ ಪ್ರದೇಶದ ಚಿತ್ತೂರು ಮೂಲದ ಆರ್.ಟಿ.ನಗರದಲ್ಲಿ ವಾಸಿಸುತ್ತಿದ್ದ ಭಾನು ತೇಜ ಮೃತ ಬಾಲಕ.
ಆಂಧ್ರ ಪ್ರದೇಶದ ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವೇದ ಕಲಿಯಲು ಕಳೆದ 1 ತಿಂಗಳ ಹಿಂದೆ ಬಂದಿದ್ದ. ಅಲ್ಲಿ ಗುರುಗಳ ಜೊತೆಗೆ ವಾಸವಾಗಿದ್ದ.
ಶನಿವಾರ ಭಾನುತೇಜನ ಹುಟ್ಟುಹಬ್ಬವಾಗಿತ್ತು. ಹುಟ್ಟು ಹಬ್ಬ ಆಚರಿಸಲು ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಸೋಹದರ ಚಕ್ರಧರಣ್ ಜೊತೆಗೆ ಬೈಕ್‌ನಲ್ಲಿ ಹೋಗಿದ್ದ. ಅಕ್ಕನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಬಳಿಕ ರಾತ್ರಿ 11.20ರಲ್ಲಿ ಅಣ್ಣ ಚಕ್ರಧರಣ್ ಜೊತೆಗೆ ಹೊರಮಾವಿನಿಂದ ಆರ್.ಟಿ. ನಗರದತ್ತ ವಾಪಸ್ಸಾಗುತ್ತಿದ್ದ. ಮಾರ್ಗಮದ್ಯೆ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಚರ್ ಟ್ರಕ್ ಹಿಂಬದಿಯಿಂದ ಇವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ಭಾನುತೇಜ್ ಕೆಳಗೆ ಬಿದ್ದಿದ್ದ. ಈ ವೇಳೆ ಬಾಲಕ ತಲೆಯ ಮೇಲೆ ಟ್ರಕ್‌ನ ಎರಡು ಚಕ್ರಗಳು ಹಿರಿದಿವೆ. ಗಂಭೀರವಾಗಿ ಗಾಯಗೊಂಡ ಭಾನು ತೇಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಚಕ್ರ ಧರಣ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ವೇದ ಕಲಿಯಲು ದೇಗುಲದಲ್ಲಿ ತಂಗಿದ್ದ :
ಭಾನು ತೇಜಾ ತಂದೆಗೆ ಪುತ್ರನಿಗೆ ವೇದ ಕಲಿಸಬೇಕೆಂಬ ಆಕಾಂಕ್ಷೆ ಇತ್ತು. 1 ತಿಂಗಳ ಹಿಂದೆ ವೇದ ಕಲಿಯಲು ಭಾನು ತೇಜಾನನ್ನು ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಾಲಕರು ಬಿಟ್ಟಿದ್ದರು. ಶನಿವಾರ ಮಗುವಿನ ಹುಟ್ಟುಹಬ್ಬದ ಅಂಗವಾಗಿಸಹೋದರಿ ಮನೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ. ಊಟ ಮಾಡಿ ಹೊರಡಬೇಕಾದರೆ ಅವಘಡ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಣ್ಣ ವಯಸ್ಸಿನಲ್ಲಿ ಭಾನು ತೇಜನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eddelu Manjunatha 2: ತೆರೆಯತ್ತ ʼಮಠʼ ಗುರುಪ್ರಸಾದ್ ಕೊನೆಯ ಕನಸು
Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ
Kundapura: ಸಂಕ್ರಾಂತಿಗೆ ನಿರೀಕ್ಷೆಯಷ್ಟು ಅರಳದ ಹೆಮ್ಮಾಡಿ ಸೇವಂತಿಗೆ
Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ
Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.