Trinadha Rao Nakkina: ನಟಿಯ ʼಸೈಜ್ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ
Team Udayavani, Jan 13, 2025, 12:58 PM IST
ಹೈದರಾಬಾದ್: ಸಿನಿಮಾದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕರೊಬ್ಬರು ನಟಿಯ ಬಗ್ಗೆ ಆಡಿರುವ ಮಾತೊಂದು ವಿವಾದಕ್ಕೆ ಸಿಲುಕಿದೆ.
ಟಾಲಿವುಡ್‌ನಲ್ಲಿ ʼಮಜಾಕಾʼ ( Mazaka) ಎನ್ನುವ ಸಿನಿಮಾವೊಂದು ತೆರೆ ಕಾಣಲಿದೆ. ಭಾನುವಾರ (ಜ.12ರಂದು) ಹೈದರಾಬಾದ್‌ನಲ್ಲಿ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತ್ರಿನಾಥ್ ರಾವ್ ನಕ್ಕಿನ ನಿರ್ದೇಶನದ ಈ ಸಿನಿಮಾದಲ್ಲಿ ಸಂದೀಪ್ ಕಿಶನ್, ರಿತು ವರ್ಮಾ ಮತ್ತು ಅಂಶು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವುಳ್ಳ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸಿನಿಮಾದ ಬಗ್ಗೆ ಮಾತನಾಡುವ ವೇಳೆ ನಟಿ ಅಂಶು (Actress Anshu) ಅವರ ಬಗ್ಗೆ ನಿರ್ದೇಶಕ ತ್ರಿನಾಥ್‌ರಾವ್ ನಕ್ಕಿನ ( Trinadha Rao Nakkina) ಅವರು ಮಾತನಾಡಿದ ರೀತಿಗೆ ನೆಟ್ಟಿಗರಿಂದ ಭಾರೀ ಆಕ್ರೋಶ ಕೇಳಿ ಬರುತ್ತಿದೆ.
“ಮನ್ಮಧುಡು ಸಿನಿಮಾ ನೋಡುವಾಗ ಈ ಹುಡುಗಿ ಲಡ್ಡು ತರ ಇದ್ದಳು. ಈಗ ಇವಳು ತೆಳ್ಳಗಿದ್ದಾಳೆ. ತೆಲುಗಿಗೆ (ಸಿನಿಮಾ) ಸಾಕಾಗುವುದಿಲ್ಲ. ಗಾತ್ರ ದೊಡ್ಡದಾಗಿರಬೇಕು ಎಂಬ ಕಾರಣಕ್ಕಾಗಿ ನಾನು ಅವಳಿಗೆ ಹೆಚ್ಚು ತಿನ್ನಲು ಮತ್ತು ತೂಕವನ್ನು ಹೆಚ್ಚಿಸಲು ಕೇಳಿದ್ದೆ. ಅವಳು ಈಗ ಸುಧಾರಿಸಿದ್ದಾಳೆ. ಅವಳು ಮತ್ತಷ್ಟು ಸುಧಾರಿಸುತ್ತಾಳೆ “ ಎಂದು ನಿರ್ದೇಶಕರು ಹೇಳಿದ್ದಾರೆ.
ಈ ಮಾತನ್ನು ಕೇಳಿ ಮುಜುಗರಕ್ಕೆ ಒಳಗಾದ ನಟಿ ಅಂಶು ಅದನ್ನು ತೋರಿಸಿಕೊಳ್ಳದೆ ನಗುತ್ತಲೇ ಸುಮ್ಮನೆ ಕೂತಿದ್ದಾರೆ.
ನಿರ್ದೇಶಕರು ಈ ರೀತಿ ಒಬ್ಬ ನಟಿಯ ಬಗ್ಗೆ ಎಲ್ಲರ ಮುಂದೆ ಮಾತನಾಡಿರುವುದು ʼಅಸಹ್ಯಕರʼವೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇದೊಂದು ಅತ್ಯಂತ ಕೆಟ್ಟ ಹೇಳಿಕೆ ಮತ್ತು ಕೀಳು ಮನಸ್ಥಿತಿ” ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ತಮಾಷೆ ಸಂಗತಿಯಲ್ಲ, ಇದು ನಿಜಕ್ಕೂ ಅಶ್ಲೀಲ ಹಾಗೂ ಅವಹೇಳನಕಾರಿ ಆಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
Trinadha Rao Nakkina controversial statements 🤢🤢👎🏻👎🏻
Tini penchamma Telugu ki saripodhu anni
Koncham ekkuva size lo undali ani cheppadantaWorst statement & worst mindset 👎🏻👎🏻@sundeepkishan is clearly uncomfortable while he was talking!!
#Mazaaka pic.twitter.com/REnlECaK0k
— Vamc Krishna (@lyf_a_zindagii) January 12, 2025
ನಿರ್ದೇಶಕರ ತ್ರಿನಾಥ್ ಈ ರೀತಿ ಅಸಹ್ಯವಾಗಿ ಮಾತನಾಡಿರುವುದು ಇದೇ ಮೊದಲಲ್ಲ. 2024ರಲ್ಲಿ ನಟಿ ಪಾಯಲ್ ರಾಧಾಕೃಷ್ಣ ಅವರನ್ನು ಅಪ್ಪಿಕೊಳ್ಳುವಂತೆ ವೇದಿಕೆಯಲ್ಲಿ ಎಲ್ಲರ ಮುಂದೆ ಹೇಳಿ ವಿವಾದಕ್ಕೆ ಸಿಲುಕಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.