ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
Team Udayavani, Jan 13, 2025, 1:32 PM IST
ಲಕ್ನೋ: ತನ್ನ ಪ್ರೇಯಸಿಯ ಪತಿ ಹಾಗೂ ತಂದೆಯನ್ನು ಕೊಲ್ಲಲು ಬಾಡಿಗೆ ಹಂತಕರಿಗೆ ಸುಪಾರಿ ನೀಡಿದ್ದು ಆದರೆ ಬಾಡಿಗೆ ಹಂತಕರು ಮಾತ್ರ ಯಾರನ್ನು ಹತ್ಯೆಗೈಯಲ್ಲು ಸುಪಾರಿ ಪಡೆದಿದ್ದರೋ ಅವರನ್ನು ಬಿಟ್ಟು ಅಮಾಯಕ ಟ್ಯಾಕ್ಸಿ ಚಾಲಕನೊಬ್ಬನನ್ನು ಹತ್ಯೆಗೈದಿರುವ ಘಟನೆ ಲಕ್ನೋ ದಲ್ಲಿ ಬೆಳಕಿಗೆ ಬಂದಿದೆ.
ಲಕ್ನೋದ ಮದೇಗಂಜ್ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಮೊಹಮ್ಮದ್ ರಿಜ್ವಾನ್ ಹತ್ಯೆಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ವಕೀಲ ಅಫ್ತಾಬ್ ಅಹ್ಮದ್ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ:
ಆರೋಪಿ ವಕೀಲ ಅಫ್ತಾಬ್ ಅಹ್ಮದ್ ಮದುವೆಯಾದ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ ಈ ನಡುವೆ ಅವರ ಪ್ರೀತಿಗೆ ಮಹಿಳೆಯ ಪತಿ ಹಾಗೂ ತಂದೆ ಅಡ್ಡಿಯಾಗುತ್ತಿದ್ದರು ಎಂದು ಹೇಳಲಾಗಿದ್ದು ಇದಕ್ಕೊಂದು ಅಂತ್ಯಕಾಣಲು ಅಫ್ತಾಬ್ ಬಾಡಿಗೆ ಹಂತಕರನ್ನು ಗೊತ್ತುಪಡಿಸಿ ಅವರಿಗೆ ತನ್ನ ಪ್ರೇಯಸಿಯ ಪತಿ ಹಾಗೂ ತಂದೆಯನ್ನು ಹತ್ಯೆಗೈಯ್ಯುವಂತೆ ತಿಳಿಸಿದ್ದಾರೆ, ಅದರಂತೆ ಡಿಸೆಂಬರ್ 30 ರಂದು ದಿನ ನಿಗದಿ ಮಾಡಿ ಮದೇಗಂಜ್ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಮೊಹಮ್ಮದ್ ರಿಜ್ವಾನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ ಹತ್ಯೆಗೂ ಮೊದಲು ಆರೋಪಿ ಬಾಡಿಗೆ ಹಂತಕರಿಗೆ 2 ಲಕ್ಷ ರೂಪಾಯಿ ನೀಡಿದ್ದ ಇದಾದ ಬಳಿಕ ಉಳಿದ ಹಣ ನೀಡುವುದಾಗಿ ಹೇಳಿದ್ದನಂತೆ ಆದರೆ ಬಾಡಿಗೆ ಹಂತಕರು ತಪ್ಪಾದ ವ್ಯಕ್ತಿಯನ್ನು ಹತ್ಯೆ ಮಾಡಿ ಅಫ್ತಾಬ್ ಬಳಿ ಉಳಿದ ಹಣ ನೀಡುವಂತೆ ಕೇಳಿದ್ದಾರೆ ಆದರೆ ಇದಕ್ಕೆ ಆರೋಪಿ ಅಫ್ತಾಬ್ ಹಣ ನೀಡಲು ನಿರಾಕರಿಸಿದ್ದಾನೆ ಇದಾದ ಬಳಿಕ ಕೆಲ ಹೊತ್ತು ವಾಗ್ವಾದ ಕೂಡಾ ನಡೆದಿತ್ತು.
ಈ ನಡುವೆ ಮೊಹಮ್ಮದ್ ರಿಜ್ವಾನ್ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಾಡಿಗೆ ಹಂತಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ, ಈ ವೇಳೆ ಬಾಡಿಗೆ ಹಂತಕರು ಪ್ರಕರಣದ ಇಂಚಿಂಚು ಮಾಹಿತಿ ನೀಡಿದ್ದಾರೆ, ಇದಾದ ಬಳಿಕ ಪ್ರಕರಣದ ಪ್ರಮುಖ ಆರೋಪಿ ವಕೀಲ ಅಫ್ತಾಬ್ ಅಹ್ಮದ್ ನನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್, ಬಂದೂಕು ಜೊತೆಗೆ ಮೂರೂ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Trinadha Rao Nakkina: ನಟಿಯ ʼಸೈಜ್ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್ ಬಣ ಪಾಠ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ
India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.