Editorial: ಪಂಚಾಯತ್‌ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ


Team Udayavani, Jan 13, 2025, 12:41 PM IST

1

ಯಾವುದೇ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕಾದರೂ ತೆರಿಗೆಯೇ ಪ್ರಮುಖ ಆರ್ಥಿಕ ಮೂಲವಾಗಿದ್ದು, ಅದರಲ್ಲೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪಂಚಾಯತ್‌ಗಳಲ್ಲಿ ಸಂಗ್ರಹವಾಗುವ ತೆರಿಗೆ ಬಹಳ ಮುಖ್ಯವಾಗಿದೆ. ಸಾಕಷ್ಟು ಪಂಚಾಯತ್‌ಗಳು ತೆರಿಗೆ ಸಂಗ್ರಹದಲ್ಲಿ ಬಹಳ ಹಿಂದಿದ್ದು, ಶೇ. 100 ತೆರಿಗೆ ಸಂಗ್ರಹ ಪ್ರಗತಿಗಾಗಿ ಸರಕಾರ ಸ್ಪಷ್ಟ ಕಾನೂನು ರೂಪಿಸುವ ಅಗತ್ಯವಿದೆ.

ಪಂಚಾಯತ್‌ಗಳಿಗೆ ಕೇಂದ್ರ, ರಾಜ್ಯ ಸರಕಾರಗಳಿಂದ ದುಡ್ಡು ಬರುತ್ತದೆ, ನಾವು ತೆರಿಗೆ ಪಾವತಿಸದೆ ಇದ್ದರೂ ಚಿಂತೆ ಇಲ್ಲ ಎಂಬ ಭಾವನೆ ಸಾಕಷ್ಟು ಮಂದಿಯಲ್ಲಿದ್ದು, ಇದು ಖಂಡಿತವಾಗಿಯೂ ತಪ್ಪು. ನಮ್ಮ ಊರಿನ ಅಭಿವೃದ್ಧಿ ನಮ್ಮ ತೆರಿಗೆಯ ಮೇಲೆ ನಿಂತಿದೆ ಎಂಬ ಭಾವನೆ ಬರುವ ರೀತಿಯಲ್ಲಿ ಪ್ರತಿಯೊಬ್ಬರೂ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಪಂಚಾಯತ್‌ಗಳು ತೆರಿಗೆಯಲ್ಲಿ ಪ್ರಗತಿ ಸಾಧಿಸಿದ್ದೇ ಆದಲ್ಲಿ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.

ಪಂಚಾಯತ್‌ಗಳಿಗೆ ಬೇರೆ ಬೇರೆ ರೀತಿಯ ತೆರಿಗೆಗಳು ಸಂಗ್ರಹವಾಗಬೇಕಿದ್ದು, ಒಂದೊಂದು ಕುಟುಂಬಗಳು ಸಾವಿರಾರು ರೂಪಾಯಿ ತೆರಿಗೆ ಬಾಕಿ ಇಟ್ಟಿರುವುದನ್ನು ಕಾಣಬಹುದಾಗಿದೆ. ಅಂತಹ ಕುಟುಂಬಗಳ ಮನಃಪರಿವರ್ತಿಸಿ ತೆರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರೇರೇಪಿಸಬೇಕಿದೆ.

ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕಿದ್ದು, ತೆರಿಗೆ ಪಾವತಿಯ ನಿಟ್ಟಿನಲ್ಲಿ ಪಂಚಾಯತ್‌ಗಳಿಗೆ ಬೆಂಬಲವಾಗಿ ನಿಲ್ಲಬೇಕಿದೆ. ತೆರಿಗೆ ಪಾವತಿಸದೆ ಇರುವ ಕುಟುಂಬಗಳಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿ ಬಳಿಕ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಹೀಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದಾಗ ತೆರಿಗೆ ಪಾವತಿ ಸಹಜ ಸ್ಥಿತಿಗೆ ಬರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆದಾಗ ತೆರಿಗೆ ಪಾವತಿದಾರರು ಕೂಡ ಜಾಗೃತರಾಗಿ ಕ್ಲಪ್ತ ಸಮಯಕ್ಕೆ ತೆರಿಗೆ ಪಾವತಿ ಮಾಡುತ್ತಾರೆ.

ಈ ನಿಟ್ಟಿನಲ್ಲಿ ಸಂಬಂಧಿಸಿದ ಅ—ಕಾರಿಗಳು ಗಂಭೀರ ಚಿಂತನೆಯ ನಡೆಸಿ ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹದ ನಿಟ್ಟಿನಲ್ಲಿ ಇತರ ಯಾವ ಮಾರ್ಗವನ್ನು ಅನುಸರಿಸಬಹುದು ಎಂದು ಯೋಚನೆ ನಡೆಸಬೇಕಿದೆ. ಹೀಗೆ ಮಾಡಿದಾಗ ಮಾತ್ರ ಪಂಚಾಯತ್‌ ತೆರಿಗೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು. ಇಲ್ಲದೇ ಇದ್ದಲ್ಲಿ ತೆರಿಗೆ ಬಾಕಿಯ ಪಟ್ಟಿ ಇನ್ನಷ್ಟು ಉದ್ದವಾಗಿ ಮುಂದುವರಿಯುವ ಸಾಧ್ಯತೆ ಇದೆ. ಸ್ಥಳೀಯವಾಗಿ ಪಂಚಾಯತ್‌ಗಳ ಆಡಳಿತ ಮಂಡಳಿಗಳು ಕೂಡ ತೆರಿಗೆ ಸಂಗ್ರಹದ ನಿಟ್ಟಿನಲ್ಲಿ ಯೋಚನೆಯನ್ನು ಮಾಡಬೇಕಿದ್ದು, ಪಂಚಾಯತ್‌ ಸದಸ್ಯರು ಸ್ಥಳೀಯರೇ ಆಗಿರುವುದರಿಂದ ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆ ಇದೆ.

ಪಂಚಾಯತ್‌ ಸದಸ್ಯರು ತಮ್ಮ ಗ್ರಾಮದಲ್ಲಿ ಯಾರ ತೆರಿಗೆ ಬಾಕಿ ಇದೆ, ಅವರನ್ನು ಹೇಗೆ ಮನವೊಲಿಸಬಹುದು ಎಂಬ ಆಲೋಚನೆ ಮಾಡಿದಾಗ ತೆರಿಗೆ ಸಂಗ್ರಹ ವೇಗವನ್ನು ಪಡೆಯಬಹುದು. ಇದರಿಂದ ತಾವು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ನೀಡಿದ ಭರವಸೆಗಳ ಈಡೇರಿಕೆಗೂ ಅನುಕೂಲವಾಗಲಿದೆ.

ಸರಕಾರ, ಪಂಚಾಯತ್‌ ಜನಪ್ರತಿನಿಧಿಗಳು, ಪಂಚಾಯತ್‌ ಅಧಿಕಾರಿಗಳು ಸಂಘಟಿತ ಪ್ರಯತ್ನ ನಡೆಸಿದಾಗ ಪಂಚಾಯತ್‌ಗಳ ಆದಾಯದ ಮೂಲ ತೆರಿಗೆ ಪಾವತಿ ಹೆಚ್ಚಳವಾಗಬಹುದು.

ಟಾಪ್ ನ್ಯೂಸ್

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

Mangaluru ರಬ್ಬರ್‌ ಟ್ಯಾಪರ್‌: ವಿಮೆ ಯೋಜನೆ

Mangaluru ರಬ್ಬರ್‌ ಟ್ಯಾಪರ್‌: ವಿಮೆ ಯೋಜನೆ

Rain ಕಾರ್ಕಳ ಪರಿಸರ: ಉತ್ತಮ ಮಳೆ

Rain ಕಾರ್ಕಳ ಪರಿಸರ: ಉತ್ತಮ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Editorial: ಸಾರಿಗೆ ವ್ಯವಸ್ಥೆ ಮತ್ತಷ್ಟು ಜನೋಪಯೋಗಿಯಾಗಲಿ

5

Editorial: ಇಂಟರ್‌ನೆಟ್‌-ನೆಟ್‌ವರ್ಕ್‌ ಸುಧಾರಣೆಗೆ ಸರಕಾರ ಮುಂದಾಗಲಿ

3

Editorial: ಕುಡಿಯುವ ನೀರಿನ ಪರಿಶುದ್ಧತೆಯ ಪ್ರಶ್ನೆ ಬಾರದಿರಲಿ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

1-eewqeqw

Australian Open-2025: ದ್ವಿತೀಯ ಸುತ್ತಿಗೆ ಜೊಕೋ, ಸಿನ್ನರ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.