Bantwal: ಜಕ್ರಿಬೆಟ್ಟು ಬ್ಯಾರೇಜ್‌ಗೆ ಶೀಘ್ರ ಗೇಟ್!
5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸುವ ಸಾಧ್ಯತೆ; ನದಿ ದಡಕ್ಕೆ ಕಲ್ಲು ಹಾಸುವಿಕೆ ಪ್ರಗತಿಯಲ್ಲಿ
Team Udayavani, Jan 13, 2025, 12:49 PM IST
ಬಂಟ್ವಾಳ: ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್) ನಿರ್ಮಾಣ ಪೂರ್ಣಗೊಂಡಿದೆ.
ಕಿಂಡಿ ಅಣೆಕಟ್ಟಿನ ಗೇಟ್ ಹಾಕಿದ ಸಂದರ್ಭದಲ್ಲಿ ಹಿನ್ನೀರು ಖಾಸಗಿ ಭೂಮಿಗಳಿಗೆ ನುಗ್ಗದಂತೆ ನರಿಕೊಂಬು ಭಾಗದಲ್ಲಿ ಕಲ್ಲು ಹಾಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ಐದಾರು ದಿನಗಳಲ್ಲಿ ಅದರ ಕೆಲಸ ಪೂರ್ಣಗೊಳ್ಳುತ್ತದೆ. ಪೂರ್ಣಗೊಂಡ ತತ್‌ಕ್ಷಣ ಗೇಟ್ ಅಳವಡಿಸಿ ನೀರು ಸಂಗ್ರಹಿಸಲಿದ್ದೇವೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.
2022ರ ನವೆಂಬರ್‌ನಲ್ಲಿ ಅಂದಿನ ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದ್ದು, ಕಳೆದ ವರ್ಷ ಸೇತುವೆಯ ಕಾಮಗಾರಿಯೂ ಪೂರ್ಣಗೊಂಡಿತ್ತು. ಪೂರ್ಣಗೊಂಡ ಬಳಿಕ ಕಳೆದ ಜೂನ್‌ನಲ್ಲಿ ಸಣ್ಣ ನೀರಾವರಿ ಇಲಾಖೆಯು ಪ್ರಾಯೋಗಿಕವಾಗಿ ಗೇಟ್ ಅಳವಡಿಕೆಯ ಕಾರ್ಯ ನಡೆಸಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಲಾಗುತ್ತಿದೆ. ಮುಂದಿನ ಬೇಸಗೆಯಲ್ಲಿ ಮಂಗಳೂರು ನಗರ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲ್ಲಿ ಸಂಗ್ರಹಿಸಲ್ಪಟ್ಟ ನೀರು ಸಹಕಾರಿಯಾಗಲಿದೆ. ಜತೆಗೆ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
166 ಎಂಸಿಎಫ್‌ಟಿ ನೀರು ಶೇಖರಣೆ
- ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದೆ.
- ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ.
- ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ.
- 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕವರ್ ಸ್ಲೂಯಿಸ್ ಗೇಟ್‌ಗಳಿರುತ್ತವೆ. ಪ್ರವಾಹ ಸಂದರ್ಭ ನೀರನ್ನು ಕೆಳಗೆ ಕಳುಹಿಸಲು ಇದನ್ನು ಬಳಸಲಾಗುತ್ತದೆ.
- ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವಂತೆ ಈ ಗೇಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
- ಬ್ಯಾರೇಜಿನಲ್ಲಿ ಸಂಗ್ರಹವಾದ ನೀರಿನಿಂದ ಬಂಟ್ವಾಳ ನಗರವೂ ಸೇರಿದಂತೆ ತಾಲೂಕಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ.
ಎರಡೂ ಬದಿ ಸಂಪರ್ಕ ರಸ್ತೆ ಆಗಿಲ್ಲ
ಪುಂಜಾಲಕಟ್ಟೆ-ಬಿ.ಸಿ.ರೋಡು ಹೆದ್ದಾರಿಯ ಸನಿಹದಲ್ಲೇ ಸೇತುವೆ ನಿರ್ಮಾಣವಾಗುತ್ತಿದ್ದು, ಮತ್ತೂಂದು ಬದಿಯಲ್ಲಿ ನರಿಕೊಂಬು ಪುಳಿಕುಕ್ಕು ಪ್ರದೇಶವನ್ನು ಸಂಪರ್ಕಿಸಲಿದೆ. ನೂತನ ಸೇತುವೆಯಲ್ಲಿ ಸುಮಾರು ಒಟ್ಟು 7.50 ಮೀ. ಅಗಲದಲ್ಲಿ ವಾಹನ ಸಾಗುವುದಕ್ಕೆ ಅವಕಾಶವಿದ್ದು, ಜಕ್ರಿಬೆಟ್ಟು ಭಾಗದಲ್ಲಿ 50 ಮೀ. ಹಾಗೂ ನರಿಕೊಂಬು ಭಾಗದಲ್ಲಿ 100 ಮೀ.ನಷ್ಟು ಉದ್ದದ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ.
ನರಿಕೊಂಬು ಭಾಗದಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಭಾಗದಲ್ಲಿ ರಸ್ತೆ ನೇರ ಸಂಪರ್ಕಕ್ಕೆ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಹಾಲಿ ಪುರಸಭಾ ವ್ಯಾಪ್ತಿಯ ಜಾಕ್‌ವೆಲ್ ಬಳಿಯ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸೇತುವೆ ಸಂಪರ್ಕಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
ಐದಾರು ದಿನಗಳಲ್ಲಿ ಕಲ್ಲು ಹಾಸುವಿಕೆ ಪೂರ್ಣ
ಪ್ರಸ್ತುತ ನದಿ ದಂಡೆಯಲ್ಲಿ ಹಲ್ಲು ಹಾಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದು ಐದಾರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದರ ಬಳಿಕ ಗೇಟ್ ಹಾಕುವ ಕಾರ್ಯ ನಡೆಸಲಿದ್ದೇವೆ. ಸೇತುವೆ ಸಂಪರ್ಕಕ್ಕೆ ಸಂಬಂಧಿಸಿ ನರಿಕೊಂಬು ಭಾಗದಲ್ಲಿ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಭಾಗದಲ್ಲಿ ಹಾಲಿ ಇರುವ ರಸ್ತೆಯನ್ನೇ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಸುತ್ತಿದ್ದೇವೆ.
– ಶಿವಪ್ರಸನ್ನ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.