Tollywood: ರಿಲೀಸ್ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್ʼ HD ಪ್ರಿಂಟ್ ಲೀಕ್
Team Udayavani, Jan 13, 2025, 2:27 PM IST
ಹೈದರಾಬಾದ್: ದಿಗ್ಗಜ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಅಭಿನಯದ ʼಡಾಕು ಮಹಾರಾಜ್ʼ (Daaku Maharaaj) ಭಾನುವಾರ (ಜ.12ರಂದು) ರಿಲೀಸ್ ಆಗಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ʼಡಾಕು ಮಹಾರಾಜ್ʼ ರಿಲೀಸ್ ಆಗಿದೆ. ವಾರಾಂತ್ಯದಲ್ಲಿ ತೆಲುಗು ಸಿನಿಮಾ ರಿಲೀಸ್ ಆಗುವುದು ಹೊಸತೇನಲ್ಲ. ಬಾಲಕೃಷ್ಣ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುವುದು ಕಮ್ಮಿ. ಮಾಸ್ ರಾಜನಂತೆ ಡೈಲಾಗ್ಸ್‌ಗಳನ್ನು ಹೇಳಿದರೆ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆಯೂ ಅಷ್ಟೇ ಜೋರಾಗಿ ಕೇಳುತ್ತದೆ.
ಬಾಕ್ಸಾಫೀಸ್‌ನಲ್ಲೂ ʼಡಾಕು ಮಹಾರಾಜ್ʼ ಅಬ್ಬರ ಜೋರಾಗಿದೆ. ಮೊದಲ ದಿನವೇ ಭಾರತದಲ್ಲಿ 26 ಕೋಟಿ ರೂ. ಗಳಿಕೆ ಕಂಡಿದೆ. ಆ ಮೂಲಕ ಜಬರ್ ದಸ್ತ್ ಓಪನಿಂಗ್ ಪಡೆದುಕೊಂಡಿದೆ. ಇದರಲ್ಲಿ 23 ಕೋಟಿ ರೂ. ತೆಲುಗು ರಾಜ್ಯದಿಂದಲೇ ಹರಿದು ಬಂದಿದೆ.
ವೀಕ್ ಡೇಸ್ ಹಾಗೂ ಸಂಕ್ರಾಂತಿ ವೇಳೆಗೆ ʼಡಾಕು ಮಹಾರಾಜ್ʼ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ ಎನ್ನಲಾಗುತ್ತಿದೆ. ಆದರೆ ಈ ನಡುವೆ ಚಿತ್ರಕ್ಕೆ ಪೈರಸಿ ಕಾಟ ಕಾಡಿದೆ. ಇಡೀ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ಫಿಲ್ಮಿಜಿಲ್ಲಾ, ಟೆಲಿಗ್ರಾಮ್, ತಮಿಳುರಾಕರ್ಸ್ ನಂತಹ ಪೈರೇಟೆಡ್ ಸೈಟ್‌ಗಳಲ್ಲಿ ಚಿತ್ರ ಲೀಕ್ ಆಗಿದೆ.
ಇತ್ತೀಚೆಗೆ ಸೌತ್ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗುತ್ತಿರುವುದು ಹೆಚ್ಚಾಗುತ್ತಿದೆ. ʼವಿದುತಲೈ 2ʼ, ʼಗೇಮ್ ಚೇಂಜರ್ʼ, ʼಯುಐʼ ಚಿತ್ರಗಳಿಗೆ ಪೈರಸಿ ಕಾಟ ಕಾಡಿತ್ತು.
ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಯ್ಯ, ಬಾಬಿ ಡಿಯೋಲ್,ಶ್ರದ್ಧಾ ಶ್ರೀನಾಥ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.