Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Team Udayavani, Jan 13, 2025, 2:11 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯಲ್ಲಿ 6.5 ಕಿ.ಮೀ ಉದ್ದದ ಝಡ್-ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಜ.13) ಉದ್ಘಾಟಿಸಿದರು. ಇದು ಸೋನ್‌ಮಾರ್ಗ್ ಪ್ರವಾಸಿ ತಾಣಕ್ಕೆ ವರ್ಷಪೂರ್ತಿ ಪ್ರವೇಶವನ್ನು ಒದಗಿಸುತ್ತದೆ.
ಪ್ರಧಾನಿ ಮೋದಿ ಅವರು 2,700 ಕೋಟಿ ರೂಪಾಯಿಗಳ ಯೋಜನೆಯನ್ನು ಉದ್ಘಾಟಿಸಿದರು. ಸುರಂಗದ ಮೂಲಕ ಪ್ರಯಾಣಿಸಿ ಅದನ್ನು ಪರಿಶೀಲಿಸಿದರು. ಯೋಜನಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಅವರು ನಿರ್ಮಾಣ ಕಾರ್ಮಿಕರನ್ನು ಭೇಟಿಯಾದರು. ಕಠಿಣ ಪರಿಸ್ಥಿತಿಗಳ ನಡುವೆಯೂ ಸುರಂಗವನ್ನು ಪೂರ್ಣಗೊಳಿಸಿದ್ದಕ್ಕಾಗಿ ಕಾರ್ಮಿಕರನ್ನು ಶ್ಲಾಘಿಸಿದರು.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ವಿಶೇಷ ವಿಮಾನದಲ್ಲಿ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರು. ನಂತರ ಅವರು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸೋನ್ಮಾರ್ಗ್ ನ ನೀಲ್‌ಗ್ರಾಡ್ ಗೆ ತೆರಳಿದರು. ನೀಲ್‌ಗ್ರಾಡ್ ಹೆಲಿಪ್ಯಾಡ್‌ನಿಂದ ಗಗಂಗೀರ್‌ಗೆ ಕಾಲ್ಕೇಡ್ ಮೂಲಕ ಪ್ರಯಾಣಿಸಿದರು.
#WATCH | Sonamarg, Jammu & Kashmir: After inaugurating the Z-Morh tunnel, Prime Minister Narendra Modi inspects the tunnel.
CM Omar Abdullah, LG Manoj Sinha and Union Minister Nitin Gadkari are also present.
(Source: DD/ANI) #KashmirOnTheRise pic.twitter.com/FbOP7COfzm
— ANI (@ANI) January 13, 2025
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡು ಪಥದ, ದ್ವಿಮುಖ ಸುರಂಗವು ಲಡಾಖ್ ಪ್ರದೇಶಕ್ಕೆ ವರ್ಷಪೂರ್ತಿ ರಸ್ತೆ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಜ್ಜಾಗಿದೆ. ಮೂಲಸೌಕರ್ಯ ಯೋಜನೆಯ ನಿರ್ಮಾಣ ಕಾರ್ಯವು ಮೇ 2015 ರಲ್ಲಿ ಪ್ರಾರಂಭವಾಯಿತು, 2023 ರಲ್ಲಿ ಪೂರ್ಣಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್ ಬಣ ಪಾಠ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ
India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.