Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ
Team Udayavani, Jan 13, 2025, 2:38 PM IST
ಅರಂತೋಡು: ಆಲೆಟ್ಟಿ ಗ್ರಾಮದ ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ನಂದಿನಿ (27 ವರ್ಷ) ಯವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಕಾಣೆಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತಿ ರಾಜೇಂದ್ರ (40) ಟೈಲ್ಸ್ ಕೆಲಸ ಮಾಡುವವರಾಗಿದ್ದು ಪರಿವಾರಕಾನದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮಕ್ಕಳು ವೈಷ್ಣವಿ (8 ವರ್ಷ) ಸೆಂಟ್ ಜೋಸೆಪ್ ಶಾಲೆ 2ನೇ ತರಗತಿ ವಿದ್ಯಾರ್ಥಿನಿ. ಇನ್ನೊಬ್ಬಾಕೆ 2 ವರ್ಷ ಪ್ರಾಯದ ಅನುಷ್ಕಾ ಅಂಗನವಾಡಿಗೆ ಹೋಗುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ಗಂಡನು ತನ್ನ ಮೊಬೈಲ್‌ನಲ್ಲಿ ಯಾವಾಗಲು ರೀಲ್ಸ್ ನೋಡಿಕೊಂಡು ಕುಳಿತುಕೊಂಡಿರುವ ವಿಚಾರವಾಗಿ ಜಗಳವಾಗಿ ತನ್ನ ತವರು ಮನೆಗೆ ಮಕ್ಕಳೊಂದಿಗೆ ಹೋಗಿ ಬಂದಿದ್ದರು. ಇದೀಗ ಜ. 7 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ ತನ್ನ ಮನೆಯಿಂದ ತನ್ನ ಮಕ್ಕಳೊಂದಿಗೆ ಕಾಣೆಯಾಗಿರುವುದಾಗಿ ರಾಜೇಂದ್ರ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ
Bantwala: ಡೀಸೆಲ್ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್?
Puttur: ಬಲ್ನಾಡು ಉಳ್ಳಾಲ್ತಿ ಸನ್ನಿಧಿಗೆ ಭಜನೆಯ ನಡಿಗೆಗೆ 100 ವರ್ಷದ ಸಂಭ್ರಮ!
Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ
MUST WATCH
ಹೊಸ ಸೇರ್ಪಡೆ
Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ
Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಬಂಧನ? ಫೋಟೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.