Manipal: ಮಕ್ಕಳ ಪಾರ್ಕ್‌ ಉರುಳಿದೆ, ಚಿಟ್ಟೆ ಪಾರ್ಕ್‌ ಎಲ್ಲಿದೆ?

ಮಣ್ಣಪಳ್ಳದ ಸದ್ಯದ ಪರಿಸ್ಥಿತಿಯ ರೂಪಕದಂತಿದೆ ಕತ್ತು ಮುರಿದುಕೊಂಡು ಬಿದ್ದ ಜಿಂಕೆಯ ಪ್ರತಿಕೃತಿ

Team Udayavani, Jan 13, 2025, 3:14 PM IST

9(1

ಮಣಿಪಾಲ: ಮಣಿಪಾಲದ ಅಸ್ಮಿತೆಯಂತೆ ಇರಬೇಕಾಗಿದ್ದ ಮಣ್ಣಪಳ್ಳ ಕೆರೆ ಪರಿಸರದಲ್ಲಿ ಕಾಲ ಕಾಲಕ್ಕೆ ಕೆಲವೊಂದು ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ. ಕೆಲವು ಜಿಲ್ಲಾಧಿಕಾರಿಗಳು ಇದನ್ನೊಂದು ಉತ್ತಮ ತಾಣವಾಗಿಸಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿ ಜಾರಿಗೆ ತಂದಿದ್ದರು. ಆದರೆ, ಅದನ್ನು ಸರಿಯಾಗಿ ನಿರ್ವಹಿಸದೆ ಅವೆಲ್ಲವೂ ಜೀರ್ಣಾವಸ್ಥೆ ತಲುಪಿವೆ.

ನೀವು ಪ್ರಸನ್ನಗಣಪತಿ ದೇವಸ್ಥಾನ ಪಕ್ಕದ ಪ್ರವೇಶ ದ್ವಾರದ ಮೂಲಕ ಮಣ್ಣಪಳ್ಳ ಕೆರೆಯನ್ನು ಪ್ರವೇಶಿಸುವುದಾದರೆ ಬಲಭಾಗದಲ್ಲಿ ಅಲ್ಲೊಂದು ಮಕ್ಕಳ ಪಾರ್ಕ್‌ ಕಾಣುತ್ತದೆ. ಮಣಿಪಾಲ ಹಿಲ್ಸ್‌ ರೋಟರಿ ಸಂಸ್ಥೆ ಮಣ್ಣಪಳ್ಳ ಮತ್ತು ಮಕ್ಕಳ ಮೇಲಿನ ಪ್ರೀತಿಯಿಂದ ಒಂದು ಸುಂದರ ಉದ್ಯಾನವನ್ನು ಇಲ್ಲಿ ನಿರ್ಮಿಸಿದೆ. ಆದರೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇಲ್ಲಿ ಆಟವಾಡಲು ಸಾಕಷ್ಟು ಮಕ್ಕಳು ಬರುತ್ತಾರೆ. ಆದರೆ, ಪರಿಕರಗಳು ಮೂಲ ಸ್ವರೂಪವನ್ನು ಕಳೆದುಕೊಂಡಿವೆ.

ಇಲ್ಲಿ ಪುಣ್ಯ ಕೋಟಿಯ ಕಥೆಯನ್ನು ನೆನಪಿಸುವ ಹುಲಿ-ದನಗಳ ಚಿತ್ರಣವಿದೆ. ಅದರ ಸುತ್ತಮುತ್ತ ಧೂಳು ಆವರಿಸಿದೆ, ತರಗೆಲೆಗಳು ರಾಶಿ ರಾಶಿಯಾಗಿ ಬಿದ್ದಿವೆ. ಅವುಗಳನ್ನು ಸ್ವತ್ಛಗೊಳಿಸುವ ಕೆಲಸ ನಡೆಯುತ್ತಿಲ್ಲ.

ಇನ್ನೊಂದು ಕಡೆ ಜಿಂಕೆಗಳ ಕಲಾಕೃತಿ ಗಳನ್ನು ಜೋಡಿಸಲಾಗಿದೆ. ಹಾಗೆ ಇಟ್ಟ ಜಿಂಕೆಯ ಪ್ರತಿಕೃತಿಯೊಂದು ಕತ್ತು ಮುರಿದು ಕೊಂಡು ಅಲ್ಲೇ ಬಿದ್ದಿದೆ. ಇದು ಜಿಂಕೆಯ ಅಸಹಾಯಕತೆ ಮಾತ್ರವಲ್ಲ, ಇಡೀ ಮಣ್ಣ ಪಳ್ಳದ ಸ್ಥಿತಿಯ ರೂಪಕವಾಗಿ ಕಾಣಿಸುತ್ತಿದೆ.

ಇಲ್ಲೊಂದು ಚಿಟ್ಟೆ ಪಾರ್ಕ್‌ ಇತ್ತಂತೆ!
ಮಣ್ಣಪಳ್ಳದ ಬಗ್ಗೆ ಸಾಕಷ್ಟು ಕಾಳಜಿ ಉಳ್ಳವರು ಅಲ್ಲೊಂದು ಚಿಟ್ಟೆ ಪಾರ್ಕ್‌ ಇತ್ತೆಂದು ನೆನಪು ಮಾಡಿಕೊಳ್ಳುತ್ತಾರೆ. ಹಾಗಂತ ಇದೇನೋ ಶತಮಾನಗಳ ಹಿಂದಿನ ಕಥೆಯಲ್ಲ. ಏಳೆಂಟು ವರ್ಷಗಳ ಹಿಂದೆ ಇಲ್ಲೊಂದು ಚಿಟ್ಟೆ ಪಾರ್ಕ್‌ ನಿರ್ಮಾಣವಾಗಿತ್ತಂತೆ.

ಅವರು ಹೇಳುವಂತೆ ಚಿಟ್ಟೆ ಪಾರ್ಕನ್ನು ಹುಡುಕಿಕೊಂಡು ಬೋಟಿಂಗ್‌ ಪ್ರದೇಶದಿಂದ ಎಡ ಭಾಗಕ್ಕೆ ಸಾಗಿದರೆ ಅಲ್ಲೊಂದು ನಾಮಫ‌ಲಕ ಕಾಣಿಸುತ್ತದೆ. ಅದರಲ್ಲಿ ಔಷಧ ವನ/ಮೆಡಿಸಿನಲ್‌ ಪ್ಲಾಂಟ್ಸ್‌ ಎಂದು ಬರೆದಿದೆ. ಅದರ ಒಳಗಿರುವುದೇ ಚಿಟ್ಟೆ ಪಾರ್ಕ್‌ ಅಂತೆ. ಅದನ್ನು ನಂಬಿಕೊಂಡು ಒಂದೆರಡು ಮೆಟ್ಟಿಲು ಹತ್ತಿದರೆ ಕಾಣುವುದು ಔಷಧ ವನವೂ ಅಲ್ಲ, ಚಿಟ್ಟೆ ಪಾರ್ಕೂ ಅಲ್ಲ. ಬರೀ ಕಾಡುಗುಡ್ಡೆ, ಪೊದರು, ಹುಲ್ಲು! ಇಲ್ಲಿ ಹೆಜ್ಜೆ ಇಡಲೂ ಭಯವಾಗುವ ಪರಿಸ್ಥಿತಿ ಇದೆ.

ನಿಜವೆಂದರೆ, ಇಲ್ಲೊಂದು ಔಷಧ ವನವೋ, ಚಿಟ್ಟೆಗಳ ಪಾರ್ಕೋ ಇದ್ದಿರಬಹುದಾದ ಕುರುಹಂತೂ ಇದೆ. ಹಂತ ಹಂತವಾಗಿ ಮೆಟ್ಟಿಲುಗಳಂತೆ ಗಿಡಗಳನ್ನು ನೆಡಲು ಮಾಡಿರುವ ವ್ಯವಸ್ಥೆಗಳು ಇಲ್ಲಿವೆ.

ದೊಡ್ಡ ದೊಡ್ಡ ಪಾತಿಗಳಲ್ಲಿ ಗಿಡಗಳನ್ನು ಹಾಕುವ ವ್ಯವಸ್ಥೆ ಇದ್ದಂತೆ ಕಾಣುತ್ತದೆ. ಅದಕ್ಕಿಂತಲೂ ಮೇರೆ ಹತ್ತಿ ಹೋದರೆ ಇನ್ನಷ್ಟು ಬೆಡ್‌ಗಳನ್ನು ಮಾಡಲಾಗಿದೆಯಂತೆ. ಆದರೆ, ಅಲ್ಲಿಗೆ ಹೋಗಲು ಮುಳ್ಳಿನ ಮರಗಳ ಚಕ್ರವ್ಯೂಹವನ್ನು ಬೇಧಿಸಬೇಕು!

ಎಷ್ಟೊಂದು ಅವಕಾಶವಿದೆ!
ಖಂಡಿತವಾಗಿಯೂ ಇಲ್ಲೊಂದು ಅದ್ಭುತವಾದ ಚಿಟ್ಟೆ ಪಾರ್ಕ್‌ ಮಾಡುವ ಎಲ್ಲ ಅವಕಾಶಗಳಿವೆ. ಒಮ್ಮೆ ಇಡೀ ಪ್ರದೇಶವನ್ನು ಸ್ವತ್ಛಗೊಳಿಸಿದರೆ ಬೇರೆ ಯಾವುದೇ ಔಷಧೀಯ ಸಸ್ಯಗಳು ಬೇಡ ತುಳಸಿಯಂಥ ಸಣ್ಣ ಸಸ್ಯಗಳನ್ನು ಹಾಕಿದರೂ ಸಾಕಾಗುತ್ತದೆ. ಚಿಟ್ಟೆಗಳನ್ನು ಆಕರ್ಷಿಸಬಲ್ಲ ಸಸ್ಯಗಳನ್ನು ನೆಟ್ಟರೆ ಸಾಕು ಚಿಟ್ಟೆಗಳು ಓಡೋಡಿ ಬರುತ್ತವೆ. ಯಾಕೆಂದರೆ ಇಲ್ಲಿನ ಪರಿಸರದಲ್ಲಿ ಸಾಕಷ್ಟು ಚಿಟ್ಟೆಗಳು ಇವೆ. ಆದರೆ, ಇದನ್ನೆಲ್ಲ ಮಾಡುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವುದೇ ಪ್ರಶ್ನೆ!

ಮನಸು ಮಾಡಿದರೆ ಮಣ್ಣಪಳ್ಳ ವನ್ನು ಅತ್ಯುತ್ತಮ ಮಕ್ಕಳ ಉದ್ಯಾನವಾಗಿ ರೂಪಿಸಬಹುದು. ಅಷ್ಟು ಜಾಗ, ಅವಕಾಶಗಳು ಇಲ್ಲಿವೆ. ಅದೇ ನಿಟ್ಟಿನಲ್ಲಿ ಮಕ್ಕಳ ಪುಸ್ತಕಾಲಯ ಇಲ್ಲಿ ಸ್ಥಾಪಿಸಲಾಗಿದೆ. ಇಡೀ ಮಣ್ಣಪಳ್ಳ ಸಮಗ್ರವಾಗಿ ಬದಲಾದರೆ ಮಾತ್ರ ಇದು ಸಾಧ್ಯ.

ಟಾಪ್ ನ್ಯೂಸ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!

sand 1

Mangaluru – ಕಾರ್ಕಳಕ್ಕೆ ಅಕ್ರಮ ಮರಳು ಸಾಗಾಟ

Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ

Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

13

UV Fusion: ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು…

12

UV Fusion: ನಿಮ್ಮೊಳಗಿರಲಿ ಜೀವಕಳೆ

Anegudde ಶ್ರೀ ವಿನಾಯಕ ದೇಗುಲ: ಮಕರ ಸಂಕ್ರಾಂತಿಯಂದು ಹರಿದು ಬಂದ ಭಕ್ತ ಸಮೂಹ

Anegudde ಶ್ರೀ ವಿನಾಯಕ ದೇಗುಲ: ಮಕರ ಸಂಕ್ರಾಂತಿಯಂದು ಹರಿದು ಬಂದ ಭಕ್ತ ಸಮೂಹ

11

UV Fusion: ಬದುಕಿನ ಪರಿಪೂರ್ಣತೆಗೆ ಅಕ್ಷರವೇ ಬೆಳಕು

10

UV Fusion: ನುಡಿಯಲ್ಲಿ ಕೊಂಕುತನ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.