Alnavar: ಬೈಕ್ – ಕಾರು ಅಪಘಾತ; ಬೈಕ್ ಸಹಸವಾರ ಸಾವು
Team Udayavani, Jan 13, 2025, 3:40 PM IST
ಅಳ್ನಾವರ: ಒಣಕಿ ಮಡ್ಡಿ ಸಮೀಪ ಸೋಮವಾರ (ಜ.13) ಬೆಳಿಗ್ಗೆ 8.45 ಕ್ಕೆ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸಹಸವಾರ ಸಾವನಪ್ಪಿದ ಘಟನೆ ನಡೆದಿದೆ.
ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಸರವರ ನಜೀರ್ ಸಾಬ್ ಅಂಬಡ್ಗಟ್ಟಿ (32 ) ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಬೈಕ್ ನಲ್ಲಿದ್ದ ಇಬ್ಬರು ಅಳ್ನಾವರದಿಂದ ಧಾರವಾಡದ ಕಡೆಗೆ, ಕಾರಿನಲ್ಲಿದ್ದವರು ಪ್ರವಾಸಕ್ಕೆಂದು ತಮಿಳುನಾಡಿನಿಂದ ಗೋವಾದ ಕಡೆಗೆ ಹೊರಟಿದ್ದು ದಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಬೈಕ್ ಓಡಿಸುತ್ತಿದ್ದ ಸಿದ್ದು ಭೀಮಪ್ಪ ನಾಯಕ್ (32) ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಐದು ಜನರಿಗೆ ಗಾಯವಾಗಿದ್ದು, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ
Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಬಂಧನ? ಫೋಟೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.