UV Fusion: ನೂತನ ವರುಷಕ್ಕೆ ನವೀನ ಯೋಚನೆಗಳು

Team Udayavani, Jan 13, 2025, 4:35 PM IST

11

ಪ್ರತಿ ಕ್ಯಾಲೆಂಡರ್‌ ವರ್ಷ ಕೊನೆಯಾಗುತ್ತಲೇ ನೂತನ ವರ್ಷದ ಆರಂಭವಾಗುತ್ತದೆ . ಅದರ ಜತೆಗೆ ಸಾಲು-ಸಾಲು ಹಬ್ಬಗಳು ನವ್ಯ ಯೋಜನೆಗಳು ನಮ್ಮನ್ನು ಪ್ರೇರೇಪಿಸುತ್ತವೆ . ಕಳೆದ ವರ್ಷ ಮಾಡಲಾಗದ ಕನಸುಗಳಿಗೆ ಹೊಸ ಹುರುಪು ತುಂಬಿ , ನವೀನ ಆವಿಷ್ಕಾರಗಳಿಗೆ ಹೊಸತಾಗಿ ಆಮಂತ್ರಿಸುತ್ತೇವೆ . ಕೆಲವೊಮ್ಮೆ ನಮ್ಮ ಪರಿಶ್ರಮಕ್ಕೆ ತಕ್ಕಂತೆ ಯೋಜನೆಗಳು ಕಾರ್ಯಗತವಾದರೆ, ಮತ್ತೆ ಕೆಲವೊಮ್ಮೆ ವರುಷದ ಕೊನೆಯವರೆಗೂ ನೆಪವಾಗಿ ಉಳಿದು ಬಿಡುತ್ತವೆ.

ಹೊಸ ವರುಷದ ಜತೆ ಜತೆಗೆ
ಮನದಿ ನವೀನ ಕನಸುಗಳ ಬಿತ್ತನೆ
ಮುನ್ನುಡಿಯಾಗಲಿ ಈ ವರುಷ ಸಾಧನೆಗೆ
ಅಳಿಸಿಬಿಡು ಸೋಲುವ ಯೋಚನೆ

ವರ್ಷಾರಂಭವಾಗುತ್ತಲೇ ಪ್ರಕೃತಿಯ ಮಡಿಲು ಕೂಡ ಹಚ್ಚ ಹಸುರಿನಿಂದ ಸಿಂಗಾರವಾಗಿ ನಿಂತ ಮದುವಣಗಿತ್ತಿಯಾಗಿ, ಫ‌ಲ ಪುಷ್ಪಗಳನ್ನು ನೀಡುತ್ತಾ ಸಂಕ್ರಾಂತಿಗೆ ಸಜ್ಜಾದರೆ , ವರುಷದ ಕೊನೆಯ ಪರೀಕ್ಷೆಗಳಿಗಾಗಿ ತಯಾರಾಗುವ ವಿದ್ಯಾರ್ಥಿಗಳು ಈ ವರುಷ ಒಳ್ಳೆಯ ಅಂಕಗಳನ್ನು ಗಳಿಸುತ್ತೇವೆಂಬ ಪ್ರತಿಜ್ಞೆಯೊಂದಿಗೆ ಪ್ರಯತ್ನ ಆರಂಭಿಸುತ್ತಾರೆ . ಹಾಗೆಯೇ ಉದ್ಯೋಗಿಗಳು , ಉದ್ಯಮ ಸಂಸ್ಥೆಗಳು ಭಿನ್ನ ಆಲೋಚನೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಾರೆ.

ಬಣ್ಣದ ರಂಗೋಲಿ, ಸುಡುಮದ್ದುಗಳ ಪ್ರದರ್ಶನದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವಂತೆಯೇ , ಸುಂದರ ಆಲೋಚನೆಗಳಿಂದ ಆಮಂತ್ರಿಸಿದಾಗ ವರ್ಷ ಅರ್ಥಪೂರ್ಣವಾಗಬಹುದು. ಪರೋಪಕಾರ , ಸಹಾಯದ ಮನಸ್ಥಿತಿ , ತಾಳ್ಮೆ , ಸಂಯಮ ಇಂತಹ ಸೂಕ್ಷ ವಿಷಯಗಳಿಗೆ ಒಂದಿಷ್ಟು ಪ್ರಾಮುಖ್ಯತೆ ನೀಡಿ ಅನ್ಯರ ನೋವಿಗೆ ಸಹಾಯಹಸ್ತ ನೀಡಿ , ಕಣ್ಣೀರು ಒರೆಸುವ ಕೈಗಳು ನಮ್ಮದಾಗಿರಬೇಕು . ಆಗ ನಮ್ಮ ಈ ಬದುಕು ಸಾರ್ಥಕ ಎನಿಸುತ್ತದೆ .

ವರ್ಷಾಂತ್ಯದಲ್ಲಿ ನೆರವೇರದ ಕನಸುಗಳಿಗಾಗಿ ಪಶ್ಚಾತ್ತಾಪ ಪಡದೆ, ಬರುವ ಸುಂದರ ವರ್ಷವನ್ನು ವ್ಯರ್ಥವಾಗದಂತೆ ಬಳಸಿಕೊಳ್ಳೋಣ. ಶ್ರಮ ವ್ಯರ್ಥವಾಗದೆ, ಕಾರ್ಯಗಳು ನೆರವರಲಿ ಎಂಬ ಆಶಯದೊಂದಿಗೆ 2025ನ್ನು ಬರಮಾಡಿಕೊಳ್ಳೋಣ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
-ಭಾಗ್ಯಶ್ರೀ ಶೆಟ್ಟಿ, ತೀರ್ಥಹಳ್ಳಿ

ಟಾಪ್ ನ್ಯೂಸ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

UV Fusion: ಹೊಸ ಅಧ್ಯಾಯ 2025

22

UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

20

UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ

19

UV Fusion: ಸ್ನೇಹ ಜೀವಿಗಳ ವರ್ಷವಾಗಲಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

6-sirsi

Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ

15

Parvathy Movie: ಪಾರು ಪಾರ್ವತಿಯ ಕಾರ್‌ಬಾರು 

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.