UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ


Team Udayavani, Jan 13, 2025, 5:44 PM IST

22

ಕಾಲ ಸರಿದಂತೆ ವರುಷಗಳು ಅದೇಷ್ಟೂ ಬೇಗ ಸರಿದು ಹೋಗುತ್ತದೆ, ಮತ್ತೆ ಈ ವರುಷ ಬದಲಾಗಿ ಹಳೆ ನೆನಪುಗಳೊಂದಿಗೆ ಹೊಸ ಕನಸಿನ ಪಯಣ ಆರಂಭಿಸಲು ಹೊಸವರುಷ ಮತ್ತೆ ಕಾಲಿಡುತ್ತಿದೆ. ಹೀಗೆ ಕಳೆದು ಹೋದ ವರ್ಷದ ಪುಟಗಳಲ್ಲಿ ನಮ್ಮ ನೋವು- ನಲಿವಿನ ನೆನಪುಗಳು ಅಧ್ಯಾಯವಾಗಿ ಉಳಿಯುವುದಷ್ಟೇ ವಾಸ್ತವವಾಗಿರುತ್ತದೆ. ಕಾಲದ ವಿಪರೀತ ವೇಗವು ಕ್ಷಣಿಕವೆನಿಸುತಿರುವಂತೆ ಅನಿಸುವುದು, ಏಕೆಂದರೆ ಕಣ್ಣು ಮುಚ್ಚಿ ತೆರೆಯುವುದರೊಳಗೆ ಈ ವರುಷ ಕಳೆದು ಹೋಯಿತು. ಆದರೆ ವರುಷದ ಕೊನೆಯ ಪುಟಕ್ಕೇ ವಿರಾಮ ನೀಡಿ ಪುಟವನ್ನು ತಿರುಚಿದಾಗ ಮತ್ತೆ ಹೊಸ ಕನಸುಗಳ ಬರವಣಿಗೆಯ ಪುಸ್ತಕವನ್ನು ತೆರೆಯಲೇ ಬೇಕು ಅಲ್ಲವೇ.

ಸಮಯ ಅದೆಷ್ಟು ಬೇಗ ಕಳೆದು ಹೋಯಿತು ಅನ್ನುವಷ್ಟರಲ್ಲಿ ಒಂದು ವರ್ಷ ಹೇಗೆ ಕಳೆದು ಹೋಯಿತು ಎಂಬ ಅಂದಾಜು ಸಿಗದಷ್ಟು ವೇಗವಾಗಿ ಕಾಲ ಓಡುತ್ತಿದೆ. ಹೊಸ ವರುಷ ಹೊಸ ಕನಸುಗಳಿಗೆ ವೇದಿಕೆ.ಬದಲಾಗುವ, ಪರಿವರ್ತನೆ ಹೊಂದುವ ಪ್ರತಿಯೊಂದು ಹಂತಗಳಲ್ಲಿ ನಾವು ಏನಾದರೂ ಬದಲಾವಣೆ ಕಾಣಬೇಕು, ಏನನ್ನಾದರೂ ಮಾಡಬೇಕು ಎಂಬ ಬಲವಾದ ಕನಸು ನಮ್ಮಲ್ಲಿ ಹೊರ ಹೊಮ್ಮಲೇ ಬೇಕು. ಈ ವರುಷದಲ್ಲಿ ನಮ್ಮ ಕನಸುಗಳ ಹಾದಿಯಲ್ಲಿ ಯಾವ ರೀತಿಯಲ್ಲಿ ಬದಲಾವಣೆ ತಂದಿದೆ, ಮುಂದಿನ ಹಂತ ಹೇಗೆ ಸಾಗಬೇಕು ಎಂಬುದರ ಅರಿವು ಸ್ಪಷ್ಟವಾಗಿದ್ದರೆ ಯಶಸ್ಸು ನಮ್ಮದಾಗುವುದು ಖಂಡಿತ.

ವರುಷ ಕಳೆದಂತೆ ಹೊಸ ರೂಪಗಳೊಂದಿಗೆ ಕ್ಯಾಲೆಂಡರ್‌ಗಳು ಬದಲಾಗಿ ಬಿಡುತ್ತದೆ ಆದರೆ ನಮ್ಮ ಕನಸು ಗುರಿಗಳಲ್ಲ. ಆಡಂಭರದ ಆಚರಣೆಗಳು, ವಿಭಿನ್ನ ರೀತಿಯಲ್ಲಿ ಹೊಸ ವರುಷವನ್ನು ಸ್ವಾಗತಿಸುವ ರೀತಿಯ ಅಬ್ಬರವಾದರೆ, ಭವಿಷ್ಯದ ಕನಸುಗಳ ನಿರ್ಮಾಣವು ಹೊಸ ವರುಷದ ತಿರುವು ಎಂದು ಭಾವಿಸಿ ಮುನ್ನಡೆದಾಗ ಹೊಸದು ಎಂಬ ಪದವು ಅರ್ಥ ಪಡೆದಂತೆಯೇ ಸರಿ ಅನಿಸುವುದು.

ಹೊಸ ವರುಷವು ಕನಸಿನ ಅಡಿಪಾಯವಾಗಿ ಮಾಡಬೇಕಾದ ಕರ್ತವ್ಯಗಳ ಗಂಟೆ ನಮ್ಮನ್ನು ಬಡಿದು ಎಚ್ಚರಿಸುವ ರೀತಿಯಿದ್ದು ಹೊಸ ವರುಷದ ವೇಳಾಪಟ್ಟಿ ತಯಾರಿ ನಮ್ಮದಾಗಿರಬೇಕು. ಹೊಸ ವರುಷ ಆರಂಭವಾದಗ ನಾವು ನಮ್ಮ ಕನಸುಗಳೊಂದಿಗೆ ಸ್ವಾಗತಿಸಬೇಕು ವಿನಃ ಆಧುನಿಕ ಆಡಂಬರದ ಜತೆಯಲ್ಲ. ವರ್ಷದಂತೆ ಕನಸುಗಳು ಎಂದು ಬದಲಾಗಬಾರದು ನಮ್ಮ ಕಾರ್ಯಗಳೇನು, ಗುರಿಯ ಹಾದಿ, ಪ್ರಯತ್ನಗಳು ಎತ್ತ ಸಾಗುತ್ತಿದೆ ಇವೆಲ್ಲ ವಿಮರ್ಶೆಗಳು ನಮ್ಮದಾಗಬೇಕು. ನಮ್ಮ ಆಲೋಚನೆಗಳಿಗೆ ಹೊಸದೊಂದು ರೂಪ ನೀಡಲು ಹೊಸ ವರುಷ ಒಂದು ನೆಪವಷ್ಟೇ. ಈ ನೆಪದಲ್ಲದರು ದಿನಚರಿಗಳು ಬದಲಾಗಿ ಒಂದು ಏನನ್ನಾದರೂ ಈ ವರುಷದಲ್ಲಿ ಸಾಧಿಸಬೇಕು ಎಂಬ ಛಲ ನಮ್ಮಲ್ಲಿದ್ದು ಪ್ರತಿಯೊಂದು ದಿನವನ್ನು ಹೊಸ ದಿನವೆಂದು ಭಾವಿಸಿ ಕನಸಿನ ಬೆನ್ನಟ್ಟಬೇಕು.

ಪ್ರತಿ ಪಯಣವು ಸಂತೋಷದ ಒಂದು ಭಾಗವಾಗಿ ಅನುಭವಿಸಿ ಪ್ರತೀ ಅನುಭವಗಳಿಂದ ಕಲಿಯುತಿರಬೇಕು. ದಿನದ ಪ್ರಾರಂಭವು ಒಂದೊಳ್ಳೆ ದಿನವೆಂದು ಪ್ರಾರಂಭಿಸಿ ಆ ದಿನದಲ್ಲಿ ಏನು ಮಾಡಿದೀವಿ ಎಂದು ಕೊಂಚ ಸಮಯವಿಟ್ಟು ಯೋಚಿಸುವ ತಾಳ್ಮೆ ಇವೆಲ್ಲವೂ ನಮ್ಮ ಬದುಕಲ್ಲಿ ಅಳವಡಿಕೆಯಾದಗ ನಮ್ಮ ಬದುಕಿನಲ್ಲಿ ಕನಸುಗಳು ಬಹಳ ಮಹತ್ವಪೂರ್ಣವಾಗಿ ಅಮೂಲ್ಯವೆನಿಸುವುದು. ಕಳೆದು ಹೋದ ವರುಷದ ನೋವು ನಲಿವುಗಳು ನೆನಪಿನ ಜೋಲಿಗೆಯಲ್ಲಿ ಭದ್ರವಾಗಿರುವಂತದ್ದು, ಒಂದು ಹೊಸ ಅಧ್ಯಾಯ ಸೃಷ್ಟಿಸಲು ಈ ವರುಷವೊಂದು ಅವಕಾಶ ನೀಡುತಿದೆ ಎಂದು ಭಾವಿಸಿ ಒಂದೊಳ್ಳೆ ಸಂಕಲ್ಪದೊಂದಿಗೆ ಗುರಿಯತ್ತ ಮುನ್ನಡೆಯಬೇಕು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಈ ವರುಷವೂ ಅಡಿಪಾಯವಾಗಲಿ ಎಂಬ ಅತೀ ದೊಡ್ಡ ಸಂಕಲ್ಪ ನಮ್ಮದಾಗಬೇಕು.

ವಿಜಯಲಕ್ಷ್ಮೀ ಬಿ.ಕೆಯ್ಯೂರು, ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!

Kiccha Sudeep: ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ.. ನಿವೃತ್ತಿ ಬಗ್ಗೆ ಕಿಚ್ಚನ ಮಾತು

Kiccha Sudeep: ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ.. ನಿವೃತ್ತಿ ಬಗ್ಗೆ ಕಿಚ್ಚನ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

UV Fusion: ಹೊಸ ಅಧ್ಯಾಯ 2025

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

20

UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ

19

UV Fusion: ಸ್ನೇಹ ಜೀವಿಗಳ ವರ್ಷವಾಗಲಿ

18

UV Fusion: ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

6-sirsi

Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ

15

Parvathy Movie: ಪಾರು ಪಾರ್ವತಿಯ ಕಾರ್‌ಬಾರು 

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

5-sirsi

Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.