Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್ ಬಣ ಪಾಠ
ಮೈತ್ರಿಕೂಟದಲ್ಲಿ ಸಂವಹನ ನಡೆಸುವುದು ಅತ್ಯಗತ್ಯ: ಸಂಜಯ್ ರಾವತ್
Team Udayavani, Jan 13, 2025, 10:35 PM IST
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ ಘೋಷಿಸದ ಬೆನ್ನಲ್ಲೇ ಉದ್ಧವ್ ಶಿವಸೇನೆಯು ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿದ್ದು, ಪಕ್ಷಗಳ ನಡುವೆ ಸಂವಾದ ನಡೆಯದಿದ್ದರೆ ಮೈತ್ರಿಕೂಟ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ, “ಕಾಂಗ್ರೆಸ್ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸಲಿದೆಯೇ ಅಥವಾ ಕೂಟದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಲಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಲಾಗಿದೆ. ಈ ಮಧ್ಯೆ ಎನ್‌ಡಿಎಯನ್ನು ನೋಡಿ ಕಲಿಯುವಂತೆಯೂ ಕಿವಿಮಾತು ಹೇಳಿದೆ.
ಸಂವಹನ ಅಗತ್ಯ:
ರಾಷ್ಟ್ರೀಯ ವಿಷಯಗಳು ಬಂದಾಗ ಬಿಜೆಪಿಯು ಎನ್‌ಡಿಎ ಪಕ್ಷಗಳ ಸಭೆ ನಡೆಸಿ, ಸಂಹವನ ನಡೆಸುತ್ತದೆ. ಪ್ರಮೋದ್ ಮಹಾಜನ್, ಅಡ್ವಾಣಿಯಂಥವರು ಪ್ರಾದೇಶಿಕ ಪಕ್ಷಗಳ ಜತೆ ಮಾತನಾಡಲು ಹಿಂಜರಿಯುತ್ತಿರಲಿಲ್ಲ. ಜಾರ್ಜ್ ಫರ್ನಾಂಡಿಸ್‌ನಂಥ ನಾಯಕರು ಸಂಚಾಲಕರಾಗಿದ್ದರು. ಇದನ್ನು ಕಾಂಗ್ರೆಸ್ಸೂ ಕಲಿಯಬೇಕು ಎಂದು ಹೇಳಿದೆ.
ಮಿತ್ರಪಕ್ಷಗಳ ಮೇಲೆ ವೈಯಕ್ತಿಕ ಟೀಕೆ ನಿಲ್ಲಿಸಿ:
ಕಾಂಗ್ರೆಸ್ ಕೂಟದ ಮಿತ್ರಪಕ್ಷಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವ ಜೊತೆಗೆ ಮಿತ್ರಪಕ್ಷಗಳ ಮೇಲೆ ವೈಯಕ್ತಿಕ ಟೀಕೆಗಳ ಮಾಡುವುದು ನಿಲ್ಲಿಸಬೇಕು. ಇತ್ತೀಚೆಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಆಪ್ ನಡುವಿನ ತಿಕ್ಕಾಟದಿಂದ ವಿಧಾನಸಭೆ ಚುನಾವಣೆಯಲ್ಲಿ ಈ ಎರಡು ಪ್ರತ್ಯೇಕವಾಗಿ ಕಣಕ್ಕೆ ಇಳಿಯುತ್ತಿವೆ. ದಿಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಆಪ್ ನಾಯಕ ಕೇಜ್ರಿವಾಲ್‌ರನ್ನು ʼಫರ್ಜಿವಾಲ್ʼ ಹಾಗೂ ರಾಷ್ಟ್ರ ವಿರೋಧಿ ಎಂಬ ಹೇಳಿಕೆಯು ಮೈತ್ರಿ ಬಿಕ್ಕಟ್ಟು ಹೆಚ್ಚಲು ಉದಾಹರಣೆ ನೀಡಬಹುದು ಎಂದು ಉದ್ದವ್ ಶಿವಸೇನೆ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ ಶಿವಸೇನೆಯ ನಾಯಕ ಸಂಜಯ್ ರಾವತ್, ಕೂಟದಲ್ಲಿ ಸಂವಹನ ನಡೆಸಲು ಜವಾಬ್ದಾರಿಯತ ನಾಯಕರ ನೇಮಕ ಅಗತ್ಯ. ಕೂಟದ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಈ ಪಾತ್ರ ನಿರ್ವಹಿಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.