Mahakumbha Mela: ಮಹಾಕುಂಭ ಮೇಳದಲ್ಲೂ ಗ್ರಾಹಕರಿಗೆ ನಂದಿನಿ ಉತ್ಪನ್ನ, ಚಹಾ ಮಳಿಗೆ!
ಚಾಯ್ ಪಾಯಿಂಟ್ ಜತೆ ಕೆಎಂಎಫ್ ಪಾಲುದಾರಿಕೆ, ಸಿಹಿ ಉತ್ಪನ್ನ, ಮಿಲ್ಕ್ ಶೇಕ್ ಸೇರಿ ವಿವಿಧ ನಂದಿನಿ ಉತ್ಪನ್ನ ಮಾರಾಟ
Team Udayavani, Jan 14, 2025, 7:15 AM IST
ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಲ (ಕೆಎಂಎಫ್) ಇದೀಗ ಚಾಯ್ ಪಾಯಿಂಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ ನಂದಿನಿ ಸಿಹಿ ಉತ್ಪನ್ನಗಳು, ಮಿಲ್ಕ್ ಶೇಕ್ ಸೇರಿದಂತೆ ಮತ್ತಿತರ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ.
ಮಹಾ ಕುಂಭಮೇಳ -2025ರ ಸಲುವಾಗಿ “ನಂದಿನಿ’ ಯುಎಚ್‌ಟಿ ಗುಡ್‌ಲೈಫ್ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಕೆಎಂಎಫ್ ಈಗ ಚಾಯ್ ಪಾಯಿಂಟ್ ಜತೆಗೆ ಪಾಲುದಾರಿಕೆ ಹೊಂದಿರುವುದಾಗಿ ಘೋಷಣೆ ಮಾಡಿದೆ. ಚಾಯ್ ಪಾಯಿಂಟ್ ಭಾರತದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿದೆ. ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಈ ಸಹಯೋಗದ ಭಾಗವಾಗಿ ಚಾಯ್ ಪಾಯಿಂಟ್ ಕುಂಭ ಮೇಳದ ಸಂಕೀರ್ಣದಲ್ಲಿ 10 ಮಳಿಗೆ ತೆರೆಯಲಾಗಿದೆ. ಈ ಮಳಿಗೆಗಳ ಮೂಲಕ ಒಂದು ಕೋಟಿ ಕಪ್‌ಗಳಿಗಿಂತಲೂ ಹೆಚ್ಚು ಚಹಾವನ್ನು ತಯಾರಿಸಿ ಒದಗಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉತ್ತರ ಭಾರತದ ರಾಜ್ಯಗಳಿಗೂ ವಿಸ್ತರಿಸುವ ಗುರಿ:
ಅತಿ ಹೆಚ್ಚು ಕಪ್ ಚಹಾವನ್ನು ಮಾರಾಟ ಮಾಡಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಗುರಿ ಹೊಂದಲಾಗಿದೆ. ಚಹಾದ ಜತೆ ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ಸಿಹಿ ಉತ್ಪನ್ನ, ಮಿಲ್ಕ್ ಶೇಕ್ ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ಪಾಲುದಾರಿಕೆ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಉತ್ತರ ಭಾಗದ ರಾಜ್ಯಗಳಿಗೂ ವಿಸ್ತರಿಸುವುದು ಮತ್ತು ರಾಷ್ಟ್ರವ್ಯಾಪಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದೆ. ಇದು ಕೆಎಂಎಫ್ ಬದ್ಧತೆ ಹಾಗೂ ಸಮರ್ಪಣೆ ಮನೋಭಾವ ಸಾರಿದಂತಾಗುತ್ತದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚಾಯ್ ಪಾಯಿಂಟ್ ಕೆಎಂಎಫ್ ನಂದಿನಿ ಉತ್ಪನ್ನದ ದೀರ್ಘಾವಧಿಯ ಗ್ರಾಹಕರಾಗಿರುವುದಲ್ಲದೆ ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಎಚ್‌ಟಿ ಗುಡ್‌ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನಿರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ಕೆಎಂಎಫ್ ಮಹಾ ಕುಂಭ ಮೇಳ-2025ರಕ್ಕೆ ಚಾಯ್ ಪಾಯಿಂಟ್ ಅವರೊಂದಿಗೆ ಪಾಲುದಾರರಾಗಿರುವುದು ಖುಷಿ ತಂದಿದೆ. ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನ ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನ ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ
ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ
ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ
Honnali: ಮಹಿಳೆಯನ್ನು ತವರಿನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡ ಹೋದ ಪತಿ, ಸಂಬಂಧಿಕರು
Congress Government: ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಆರ್.ಬಿ.ತಿಮ್ಮಾಪುರ
MUST WATCH
ಹೊಸ ಸೇರ್ಪಡೆ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Ceasefire: ಇಸ್ರೇಲ್, ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ?
Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.