Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಸರಿಯಾದ ಸಮಯದಲ್ಲಿ ಸರಿಯಾದ ವಿಚಾರಗಳು ನಡೆಯಲಿವೆ ಎಂದ ಪ್ರಧಾನಿ ಮೋದಿ...
Team Udayavani, Jan 13, 2025, 8:39 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಗಂದೇರ್ಬಾಲ್ ಜಿಲ್ಲೆಯಲ್ಲಿ ‘ಸೋನಾಮಾರ್ಗ್ ಸುರಂಗ’ ಎಂದು ಮರುನಾಮಕರಣಗೊಂಡ 6.5-ಕಿಮೀ ಝಡ್-ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮೊದಲು ಸುರಂಗದ ಸ್ಥಳದ ಬಳಿ ಕಳೆದ ವರ್ಷ ಅಕ್ಟೋಬರ್ 20ರಂದು ನಡೆದ ಉಗ್ರರ ದಾಳಿಯಲ್ಲಿ ಮಡಿದ ಏಳು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ಕಾಶ್ಮೀರ ಮತ್ತು ದೆಹಲಿ ನಡುವಿನ ಅಂತರವನ್ನು ತಗ್ಗಿಸುವಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಒಮರ್ ಅಬ್ದುಲ್ಲಾ ಶ್ಲಾಘಿಸಿದರು. ರಾಜ್ಯ ಮರುಸ್ಥಾಪನೆಯ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.
“ನೀವು ನಾಲ್ಕು ತಿಂಗಳೊಳಗೆ ವಿಧಾನಸಭೆ ಚುನಾವಣೆಯ ಭರವಸೆ ನೀಡಿದ್ದೀರಿ ಮತ್ತು ನಿಮ್ಮ ಮಾತಿಗೆ ಬದ್ಧತೆ ತೋರಿದಿರಿ. ಮತದಾನದಲ್ಲಿ ಪಾಲ್ಗೊಳ್ಳಲು ಜನರಿಗೆ ಅವಕಾಶ ಸಿಕ್ಕಿದ್ದರಿಂದ, ಇಂದು ನಾನು ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ’ ಎಂದರು.
ಇದನ್ನೂ ಇದನ್ನೂ ಓದಿ: Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
“ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀವು ನೀಡಿದ ಮೂರನೇ ಭರವಸೆ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸುವುದನ್ನು ಶೀಘ್ರದಲ್ಲೇ ಈಡೇರಿಸುತ್ತೀರಿ ಎಂದು ನನ್ನ ಹೃದಯ ಹೇಳುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.
‘ಸೋನಮಾರ್ಗ್ ಸುರಂಗ ಖಂಡಿತವಾಗಿಯೂ ಜಮ್ಮು ಮತ್ತು ಕಾಶ್ಮೀರದ ಹೃದಯ ಮತ್ತು ದೆಹಲಿ ನಡುವಿನ ಅಂತರವನ್ನು ದೂರ ಮಾಡುತ್ತದೆ’ ಎಂದು ಸಿಎಂ ಒಮರ್ ಹೇಳಿದರು.
ಸರಿಯಾದ ಸಮಯದಲ್ಲಿ ಸರಿಯಾದ ವಿಚಾರಗಳು
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ”ಜಮ್ಮು ಮತ್ತು ಕಾಶ್ಮೀರದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು. ಕೊಟ್ಟ ಭರವಸೆಗಳನ್ನು ಈಡೇರಿಸುವ ಮೋದಿ ಇವರು. ಸರಿಯಾದ ಸಮಯದಲ್ಲಿ ಸರಿಯಾದ ವಿಚಾರಗಳು ನಡೆಯಲಿವೆ” ಎಂದರು.
“ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯ ವಾತಾವರಣವಿದೆ ಮತ್ತು ಪ್ರವಾಸೋದ್ಯಮದ ಮೇಲೆ ಅದರ ಪರಿಣಾಮವನ್ನು ನಾವು ನೋಡಿದ್ದೇವೆ. ಕಾಶ್ಮೀರ ಇಂದು ಅಭಿವೃದ್ಧಿಯ ಹೊಸ ಸಾಹಸಗಾಥೆಯನ್ನು ಬರೆಯುತ್ತಿದೆ” ಎಂದು ಮೋದಿ ಹೇಳಿದರು. “ನಾವು ಯಾವುದೇ ಯೋಜನೆಯನ್ನು ಘೋಷಿಸಿದರೂ ಅವುಗಳನ್ನು ನಾವೇ ಉದ್ಘಾಟಿಸುತ್ತೇವೆ” ಎಂದು ಮೋದಿ ಹೇಳಿದರು.
ಯೋಜನೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಸುರಂಗದೊಳಗೆ ಹೋಗಿ ಯೋಜನಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಸುರಂಗವನ್ನು ಪೂರ್ಣಗೊಳಿಸಲು ಕಠಿನ ಪರಿಸ್ಥಿತಿಗಳ ನಡುವೆ ಸೂಕ್ಷ್ಮ ಕೆಲಸ ಮಾಡಿದ ನಿರ್ಮಾಣ ಕಾರ್ಮಿಕರನ್ನು ಭೇಟಿಯಾದರು. ಪ್ರಾಣ ಪಣಕ್ಕಿಟ್ಟು ಶ್ರಮಿಸಿದ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MVA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕಿಗೆ ತುಪ್ಪ ಸುರಿದ ಶರದ್ ಪವಾರ್
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್ ಅಧಿಕಾರ ಸ್ವೀಕಾರ
Lok Sabha result:ಜುಕರ್‌ಬರ್ಗ್ ಸುಳ್ಳು ಬಯಲು ಮಾಡಿದ ಅಶ್ವಿನಿ ವೈಷ್ಣವ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.