Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ
Team Udayavani, Jan 13, 2025, 11:57 PM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜ.12ರಂದು 7,710 ಪ್ರಯಾಣಿಕರ ಆಗಮನ ಮತ್ತು ನಿರ್ಗಮನವಾಗಿದ್ದು, ವಿಮಾನ ನಿಲ್ದಾಣದ ಕಮರ್ಶಿಯಲ್ ಕಾರ್ಯಾಚರಣೆ ಆರಂಭವಾದ ದಿನ (ಸಿಒಡಿ) 2020ರ ಅ.31ರ ಬಳಿಕ ಇದು ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರ ನಿರ್ವಹಣೆಯಾಗಿದೆ.
7,613 ಮಂದಿ ವಯಸ್ಕರು ಮತ್ತು 97 ಮಂದಿ ಶಿಶುಗಳು ಸೇರಿದ್ದಾರೆ. ಒಟ್ಟು 49 ಏರ್ ಟ್ರಾಫಿಕ್ ಮೂವ್‌ಮೆಂಟ್(ಎಟಿಎಂ)ಗಳ ಪೈಕಿ 24 ಆಗಮನ ಮತ್ತು 25 ನಿರ್ಗಮನ ವಿಮಾನಗಳಲ್ಲಿ ಇಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸಿ ದ್ದಾರೆ. ಇದಕ್ಕೂ ಮೊದಲು 2024ರ ನ.10ರಂದು 7637 ಮಂದಿ ಪ್ರಯಾಣ ಮಾಡಿರುವುದು ಇಲ್ಲಿ ವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ. ಜ.11ರಂದು 7,538 ಮಂದಿ ಪ್ರಯಾಣ ಬೆಳೆಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.