Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
*ಮಹಾಕುಂಭ ಮೇಳದಲ್ಲಿ ಶಾಹಿ ಸ್ನಾನಕ್ಕಾಗಿ ಎರಡು ವಿಭಾಗ ಮಾಡಲಾಗಿದೆ.
Team Udayavani, Jan 14, 2025, 11:50 AM IST
Mahakumbh Nagar: 144 ವರ್ಷಗಳಿಗೊಮ್ಮೆ ಮಾತ್ರ ಘಟಿಸುವ ಮಹಾಕುಂಭ ಮೇಳದಲ್ಲಿ ಮಂಗಳವಾರ (ಜ.14)ದ ಮಕರ ಸಂಕ್ರಮಣ ದಿನದಂದು ಮುಂಜಾನೆಯೇ ನಾಗಾ ಸಾಧುಗಳು, ಸಂತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ಮೂಲಕ ಶಾಹಿ ಸ್ನಾನದಲ್ಲಿ ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ.
ಸೋಮವಾರವೂ ನಿರ್ಮೋಹಿ, ನಿರ್ವಾಣಿ, ದಿಗಂಬರ ಸೇರಿದಂತೆ ಎಲ್ಲಾ 13 ಅಖಾಡಗಳ ಸಂತರು, ಅಘೋರಿಗಳು ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮದಲ್ಲಿ ಮಿಂದೆದ್ದಿದ್ದರು. ಪುಷ್ಯ ಪೂರ್ಣಿಮೆಯಂದು ಕುಂಭದಲ್ಲಿ ನಡೆದ ಮೊದಲ ಅಮೃತ ಸ್ನಾನದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನರು ಪಾಲ್ಗೊಂಡಿದ್ದರು.
2025ರ ಮಹಾಕುಂಭ ಮೇಳವು ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13ರಂದು ಆರಂಭಗೊಂಡಿದ್ದು, ಇದು 45 ದಿನಗಳವರೆಗೆ ಮುಂದುವರೆಯಲಿದೆ. ಬರೋಬ್ಬರಿ 10,000 ಎಕರೆ ಬೃಹತ್ ಪ್ರದೇಶದಲ್ಲಿ ಈ ಮಹಾ ಧಾರ್ಮಿಕ ಜಾತ್ರೆ ನಡೆಯಲಿದೆ.
ಮಹಾಕುಂಭಮೇಳಕ್ಕಾಗಿ ಉತ್ತರಪ್ರದೇಶ ಸರ್ಕಾರ ಅಭೂತಪೂರ್ವ ವ್ಯವಸ್ಥೆಗಳನ್ನು ಕಲ್ಪಿಸಿದ್ದು, 1.5 ಲಕ್ಷ ಶೌಚಾಲಯ, 15,000 ಸ್ವಚ್ಛತಾ ಸಿಬಂದಿಗಳು ಹಾಗೂ 2,500 ಸ್ವಯಂ ಸೇವಕರು ಹಾಗೂ 1.5 ಲಕ್ಷ ಟೆಂಟ್ಸ್ ಗಳನ್ನು ನಿರ್ಮಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಮಹಾಕುಂಭಮೇಳದ ಹೈಲೈಟ್ಸ್:
*ಮಂಗಳವಾರ ಮುಂಜಾನೆ 5.30ರಿಂದ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಆರಂಭಗೊಂಡಿರುವುದಾಗಿ ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ ಪಿಟಿಐಗೆ ತಿಳಿಸಿದ್ದಾರೆ.
*ಶ್ರೀ ಪಂಚಾಯತಿ ಅಖಾಡ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡ ಇಂದು ಬೆಳಗ್ಗೆ ತ್ರಿವೇಣಿ ಸಂಗಮದಲ್ಲಿ ಮೊದಲ ಶಾಹಿ ಸ್ನಾನ ನಡೆಸಿದೆ. ಮುಂಜಾನೆ 5.15ಕ್ಕೆ ತಮ್ಮ ಶಿಬಿರದಿಂದ ಹೊರಟಿದ್ದ ಅಖಾಡ ಬೃಹತ್ ಸಂಖ್ಯೆಯ ಮೆರವಣಿಗೆ ಮೂಲಕ ಹೊರಟು, ನಂತರ ಶಾಹಿ ಸ್ನಾನ ಪೂರೈಸಿರುವುದಾಗಿ ವರದಿ ವಿವರಿಸಿದೆ.
*ಶ್ರೀ ತಪೋನಿಧಿ ಪಂಚಾಯತಿ ಶ್ರೀ ನಿರಂಜನಿ ಅಖಾಡ ಮತ್ತು ಶ್ರೀ ಪಂಚಾಯತಿ ಅಖಾಡ ಆನಂದ್ ಅಮೃತ್ ಸ್ನಾನದಲ್ಲಿ ಪಾಲ್ಗೊಂಡ ಎರಡನೇ ತಂಡವಾಗಿದೆ. ಮೂರನೇಯದಾಗಿ ಸನ್ಯಾಸಿ ಅಖಾಡ ಶಾಹಿ ಸ್ನಾನದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದೆ.
*ಮಹಾಕುಂಭ ಮೇಳದಲ್ಲಿ ಶಾಹಿ ಸ್ನಾನಕ್ಕಾಗಿ ಎರಡು ವಿಭಾಗ ಮಾಡಲಾಗಿದ್ದು, ಒಂದು ಅಖಾಡಗಳ ಸಾಧು, ಸಂತರಿಗೆ, ಮತ್ತೊಂದು ಭಕ್ತರ ಪವಿತ್ರ ಸ್ನಾನಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವೈಭವ್ ಕೃಷ್ಣ ತಿಳಿಸಿದ್ದಾರೆ.
*ಉತ್ತರಪ್ರದೇಶ ಸರ್ಕಾರ ಮಹಾಕುಂಭ ಮೇಳದಲ್ಲಿ 69,000 ಎಲ್ ಇಡಿ ಲೈಟ್ಸ್, ಸೋಲಾರ್ ಹೈಬ್ರೀಡ್ ಬೀದಿ ದೀಪಗಳು ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ 2,750 ಕ್ಯಾಮರಾಗಳನ್ನು ಅಳವಡಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
MUST WATCH
ಹೊಸ ಸೇರ್ಪಡೆ
South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Women’s ODI: ಒತ್ತಡದಲ್ಲಿ ಐರ್ಲೆಂಡ್: ಭಾರತದ ಯೋಜನೆ ಕ್ಲೀನ್‌ಸ್ವೀಪ್
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.