Mangaluru – ಕಾರ್ಕಳಕ್ಕೆ ಅಕ್ರಮ ಮರಳು ಸಾಗಾಟ
ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಕಳ ಪೊಲೀಸ್ ಹದ್ದಿನ ಕಣ್ಣು
Team Udayavani, Jan 14, 2025, 2:40 PM IST
ಕಾರ್ಕಳ: ಕಾರ್ಕಳ ಭಾಗಕ್ಕೆ ಮಂಗಳೂರಿನಿಂದ ವ್ಯಾಪಕವಾಗಿ ಅಕ್ರಮವಾಗಿ ಮರಳು ಸಾಗಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕಾರ್ಕಳ ಪೊಲೀಸರ ಬಿರುಸಿನ ಕಾರ್ಯಾಚರಣೆ ಯಲ್ಲಿ ತೊಡಗಿದ್ದಾರೆ.
ಹಿಂದಿನಿಂದಲೂ ಕಾರ್ಕಳ ಭಾಗದಲ್ಲಿ ಕಟ್ಟಡ, ಮನೆ ಸಹಿತ ಹಲವು ನಿರ್ಮಾಣ ಕಾರ್ಯಗಳಿಗೆ ಮಂಗಳೂರಿನ ವಿವಿಧ ಕಡೆಗಳಿಂದ ಮರಳನ್ನು ಸಾಗಿಸುವ ಪ್ರಮಾಣ ಹೆಚ್ಚಿದ್ದು, ಇದರಲ್ಲಿ ಅಕ್ರಮದ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ಸಾಗಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳೂರು ಭಾಗದಲ್ಲಿ ಅಕ್ರಮವಾಗಿ ಮರಳು ತೆಗೆದು ಅದನ್ನು ಕಾರ್ಕಳ ಪ್ರದೇಶಗಳಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾರೆ. ಇದನ್ನು ಬೇರೆ ಬೇರೆ ಮಾರ್ಗಗಳಲ್ಲಿ ತಲುಪಿಸಲಾಗುತ್ತದೆ. ಪೊಲೀಸ್ ಇಲಾಖೆ ಈ ಬಗ್ಗೆ ಪೂರ್ವ ತಯಾರಿ ನಡೆಸಿ ಹಲವೆಡೆ ಮರಳು ಸಹಿತ ಟಿಪ್ಪರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸುತ್ತಿದೆ. ಆದರೆ, ದಂಧೆ ಮಾತ್ರ ಮುಂದುವರಿಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ದಾಖಲೆ, ರಾಯಧನ ದಾಖಲೆ, ಜಿಪಿಎಸ್ ಅಳವಡಿಕೆ ಸಹಿತ ಗಣಿ ಇಲಾಖೆಗೆ ಸಂಬಂಧಿಸಿ ಮೊದಲಾದ ಕಾನೂನು ಕ್ರಮಗಳನ್ನು ವಾಹನಗಳು ಪಾಲಿಸುತ್ತಿಲ್ಲ.
ಚೆಕ್‌ಪೋಸ್ಟ್ , ಒಳರಸ್ತೆಗಳಲ್ಲಿ ನಿಗಾ
ಕಾರ್ಕಳ ನಗರ, ಗ್ರಾಮಾಂತರ ಪೊಲೀಸರು ಗಸ್ತು ಕಾರ್ಯಾಚರಣೆ ವೇಳೆ ಗಣಿ ಅಕ್ರಮಕ್ಕೆ ಸಂಬಂಧಿಸಿ ಹಲವು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗೆ ಕಾರ್ಕಳ ಕುಕ್ಕುಂದೂರು ಸರ್ವಜ್ಞ ನಗರ ಸರ್ಕಲ್, ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ದ್ವಾರದ ಬಳಿ ಕೌಡೂರು ಕಂಪನ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್ ಮೂಲಕ ರಾತ್ರಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಒಳರಸ್ತೆಗಳಲ್ಲಿಯೂ ಪೊಲೀಸ್ ಇಲಾಖೆ ನಿಗಾವಹಿಸಿದೆ.
ಬಿಎನ್‌ಎಸ್ 112 ಆಕ್ಟ್‌ನಡಿ ಕೇಸು ದಾಖಲು
ಹಿಂದೆ ಅಕ್ರಮ ಮರಳು ಸಾಗಾಟಕ್ಕೆ ಸ್ಟೇಶನ್ ಬೇಲ್ ಪಡೆಯಲು ಸಾಧ್ಯವಾಗುವಂತ ಸಾಮಾನ್ಯ ಕಳ್ಳತನ ಕೇಸು ದಾಖಲಿಸಲಾಗುತ್ತಿತ್ತು. ಇದೀಗ ಭಾರತೀಯ ಸಂಹಿತೆ ಪರಿಷ್ಕೃತಗೊಂಡಿರುವುದರಿಂದ ಬಿಎನ್‌ಎಸ್ 112 ಆಕ್ಟ್‌ನಂತೆ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಒಪ್ಪಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಗಸ್ತು, ಚೆಕ್‌ಪೋಸ್ಟ್ ತಪಾಸಣೆ ಬಿಗು
ಕಾರ್ಕಳ ವ್ಯಾಪ್ತಿಯಲ್ಲಿ ಒಂದೇ ದಿನ ಮರಳು ಕಳ್ಳತನ, ಪರವಾನಿಗೆ ಇಲ್ಲದೆ ಅಕ್ರಮಕ್ಕೆ ಸಾಗಾಟಕ್ಕೆ ಸಂಬಂಧಿಸಿ ಮೂರು ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೆ ಹಲವು ಪ್ರಕರಣಗಳು ದಾಖಲಿಸಿದ್ದೇವೆ. ಆರೋಪಿಗಳನ್ನು ವಿಚಾರಿಸಿದಾಗ ಮಂಗಳೂರಿನಲ್ಲಿ ವಿವಿಧ ಕಡೆ ಕದ್ದಿರುವ ಮರಳನ್ನು ಅಕ್ರಮವಾಗಿಸಿ ಸಾಗಿಸಿ ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಬಗ್ಗೆ ತಿಳಿದುಬಂದಿದೆ. ಕಾರ್ಕಳ ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು, ಚೆಕ್‌ಪೋಸ್ಟ್ ತಪಾಸಣೆ ಬಿಗುಗೊಳಿಸಿದ್ದೇವೆ.
– ಅರವಿಂದ್ ಕಲಗುಜ್ಜಿ, ಡಿವೈಎಸ್‌ಪಿ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Women’s ODI: ಒತ್ತಡದಲ್ಲಿ ಐರ್ಲೆಂಡ್: ಭಾರತದ ಯೋಜನೆ ಕ್ಲೀನ್‌ಸ್ವೀಪ್
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.